ಗೋಣಿಕೊಪ್ಪ ವರದಿ, ನ. 20: ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಪೆÇನ್ನಂಪೇಟೆ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಮತ್ತು ಅರಣ್ಯ ಮಹಾವಿದ್ಯಾಲಯ ಹಾಗೂ ವಿಸ್ತರಣಾ ಶಿಕ್ಷಣ ಘಟಕ ಸಹಯೋಗದಲ್ಲಿ ತಾ. 22 ರಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಆವರಣದಲ್ಲಿ ಒಂದು ದಿನದ ಸಮಗ್ರ ಕೃಷಿ ಪದ್ದತಿ ವಿಚಾರಗೋಷ್ಠಿಯನ್ನು ಏರ್ಪಡಿಸ ಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಕಾರ್ಯಕ್ರಮ ಆರಂಭಗೊಳ್ಳಲಿದೆ.

ಕಾರ್ಯಕ್ರಮದಲ್ಲಿ ಕೊಡಗಿನ ಕೃಷಿಯ ಸವಾಲುಗಳು ಮತ್ತು ಅವಕಾಶಗಳು, ವೈಜ್ಞಾನಿಕ ಕೃಷಿ ಪದ್ದತಿಗಳು, ಸಮಗ್ರ ಕೃಷಿ ಪಾಲನೆ ಬಗ್ಗೆ ವಿಚಾರ ವಿನಿಮಯ, ಉಪನ್ಯಾಸ, ವಸ್ತು ಪ್ರದರ್ಶನ ಚರ್ಚಾಗೋಷ್ಠಿ ನಡೆಯಲಿವೆ. ಅತಿವೃಷ್ಠಿ ಪೀಡಿತ ಕೃಷಿಕ ವರ್ಗದವರು ತತ್ ಕ್ಷಣದಲ್ಲಿ ಕೈಗೊಳ್ಳಬಹುದಾದ ಆದಾಯಕ್ಕೆ ಪೂರಕವಾದ ಕೃಷಿ ಸಂಬಂಧಿತ ಚಟುವಟಿಕೆಗಳು ಹಾಗೂ ಉಪಕಸುಬುಗಳ ಬಗ್ಗೆ ಪ್ರಮುಖವಾಗಿ ಮಾಹಿತಿ ನೀಡಲಾಗುತ್ತದೆ.

ಬೆಳಗ್ಗೆ 10.30 ರಿಂದ ಭತ್ತದ ತಾಕುಗಳು, ವಸ್ತು ಪ್ರದರ್ಶನ ಹಾಗೂ ವಿಚಾರಗೋಷ್ಠಿ, ಮ. 1 ಗಂಟೆಯಿಂದ ಸಮಗ್ರ ಕೃಷಿ ಪದ್ದತಿಗಳ ವಿಚಾರಗೋಷ್ಠಿ, ಪಶುಪಾಲನೆಯ ತಾಂತ್ರಿಕತೆಗಳು, ಸಮಗ್ರ ಪೀಡೆ ನಿರ್ವಹಣಾ ಪದ್ದತಿ, ಕೃಷಿ ಅರಣ್ಯ ಪದ್ಧತಿಗಳು, ಬಿದಿರು ಮತ್ತು ಶ್ರೀಗಂಧ ಬೆಳೆಯ ತಾಂತ್ರಿಕತೆ, ಕೃಷಿ, ಅರಣ್ಯ ಮತ್ತು ತೋಟಗಾರಿಕೆ ಉತ್ಪನ್ನಗಳ ಮೌಲ್ಯವರ್ಧನೆ, ಅತೀವೃಷ್ಠಿ ಪೀಡಿತ ಪ್ರದೇಶಗಳಿಗೆ ಪೂರಕ ಕೃಷಿ ಚಟುವಟಿಗಳ ಬಗ್ಗೆ ಮಾಹಿತಿ ದೊರೆಯಲಿದೆ.

ಪ್ರಮುಖ ಆಕರ್ಷಣೆಗಳಾಗಿ ವಿವಿಧ ಸುಧಾರಿತ ಭತ್ತದ ತಳಿಗಳು, ಬೆಂಕಿ ರೋಗ ನಿರೋಧಕ ಭತ್ತದ ಹೊಸ ತಳಿಗಳು ಎರೆಹುಳು ಗೊಬ್ಬರ ತಯಾರಿಕೆ ಸಮಗ್ರ ಕೀಟರೋಗ ನಿರ್ವಹಣಾ ಪದ್ಧತಿ, ಜೈವಿಕ ಇಂಧನ ಉತ್ಪಾದನಾ ತಂತ್ರಜ್ಞಾನ, ವೈಜ್ಞಾನಿಕ ಜೇನು ಕೃಷಿ, ರೈತರ ಯಶೋಗಾಥೆ ಸಮಗ್ರ ಮಾಹಿತಿ ದೊರೆಯಲಿದೆ. ವಿವಿಧ ಕೃಷಿ ಸಂಬಂಧಿತ ಇಲಾಖೆಗಳಿಂದ ಬೀಜ, ಗೊಬ್ಬರ ಕೀಟ/ರೋಗನಾಶಕಗಳು, ಸಸ್ಯ ಸಂರಕ್ಷಣಾ ಮತ್ತು ಕೃಷಿ ಯಂತ್ರೋಪಕರಣ ವಸ್ತು ಪ್ರದರ್ಶನ ಆಯೋಜಿಸಲಾಗಿದೆ.

ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ, ಚೆಟ್ಟಳ್ಳಿ ಕೇಂದ್ರಿಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಕೇಂದ್ರಿಯ ಕಾಫಿ ಸಂಶೊಧನಾ ಉಪಕೇಂದ್ರ, ಅಪ್ಪಂಗಳ ಸಂಬಾರ ಬೆಳೆಗಳ ಸಂಶೋಧನಾ ಕೇಂದ್ರ ಅಪ್ಪಂಗಳ ವಿಜ್ಞಾನಿಗಳು, ಜಿಲ್ಲೆಯ ಕೃಷಿ, ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ ಇಲಾಖೆಗಳ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಪ್ರಗತಿಪರ ರೈತರಿಂದ ಮಾಹಿತಿ ಸಂಗ್ರಹ, ಆಯಾ ಕ್ಷೇತ್ರದ ಪರಿಣಿತ ವಿಜ್ಞಾನಿಗಳಿಂದ ವಿಷಯ ಮಂಡನೆ ಹಾಗೂ ಸಂವಾದ ನಡೆಯಲಿದೆ.

ಕೃಷಿ, ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ, ಇಲಾಖೆ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಗಳು ಪಾಲ್ಗೊಳ್ಳಲಿವೆ

ಕಾರ್ಯಕ್ರಮದಲ್ಲಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲ ಯದ ಕುಲಪತಿ ಡಾ. ಎಂ.ಕೆ. ನಾಯಕ್, ವಿಸ್ತರಣಾ ನಿರ್ದೇಶಕ ಡಾ. ಎಸ್. ಪಿ. ನಟರಾಜು, ಸಂಶೋಧನಾ ನಿರ್ದೇಶಕ ಡಾ. ಬಿ.ಆರ್ ಗುರುಮೂರ್ತಿ ಉಪಸ್ಥಿತರಿರುವರು ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಪ್ರಕಟಣೆ ತಿಳಿಸಿದೆ.