ಗುಡ್ಡೆಹೊಸೂರು: ಇಲ್ಲಿನ ಆಟೋ ಮಾಲೀಕರು ಮತ್ತು ಚಾಲಕರ ವತಿಯಿಂದ ಆಟೋ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಕಾರ್ಯಕ್ರಮವನ್ನು ಆಟೋ ಮಾಲೀಕರು ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಂ. ಶಶಿಕುಮಾರ್ ನೇತೃತ್ವದಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾ.ಪಂ. ಅಧ್ಯಕ್ಷೆ ಕೆ.ಎಸ್. ಭಾರತಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪಿ.ಡಿ.ಓ. ಶ್ಯಾಂ ಭಾಗವಹಿಸಿದ್ದರು. ಈ ಸಂದರ್ಭ ಗ್ರಾ.ಪಂ. ಸದಸ್ಯ ಬಿ.ಟಿ. ಪ್ರಸನ್ನ, ಶಿವಪ್ಪ, ಆಟೋ ಮಾಲೀಕರಾದ ಸುಬ್ಬಯ್ಯ, ಎಂ.ಆರ್. ಪಟ್ಟು, ಹರೀಶ್, ಕುಮಾರ್, ದೇವ, ಬಸಪ್ಪ, ಹರೀಶ್ ಬಿ.ಪಿ. ನಾಗರಾಜ್, ಅರುಣ್ ಮತ್ತು ಇತರರು ಹಾಜರಿದ್ದರು. ಕನ್ನಡಾಂಬೆಯ ಮೂರ್ತಿಯೊಂದಿಗೆ ಕುಶಾಲನಗರದ ಗಣಪತಿ ದೇವಸ್ಥಾನದ ತನಕ ಆಟೋಗಳ ಮೆರವಣಿಗೆ ನಡೆಯಿತು. ಈ ಸಂದರ್ಭ ಮಾತನಾಡಿದ ಗ್ರಾ.ಪಂ. ಅಧ್ಯಕ್ಷೆ ಭಾರತಿ, ಆಟೋ ಚಾಲಕರು ಸೇವಾ ಮನೋಭಾದಿಂದ ತಮ್ಮ ವೃತ್ತಿಯನ್ನು ನಡೆಸುವಂತೆ ತಿಳಿಸಿದರು. ಅಲ್ಲದೆ ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು.ಚೆಟ್ಟಳ್ಳಿ: ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್ ಸೆಂಟರ್‍ನಲ್ಲಿ ಎನ್.ಟಿ.ಸಿ. ವರ್ತಕರು ಹಾಗೂ ಸಿಬ್ಬಂದಿಗಳಿಂದ 64ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ನಿಸರ್ಗಧಾಮ ಟೂರಿಸ್ಟ್ ಸೆಂಟರ್ ನ ಆವರಣದಲ್ಲಿ ಕನ್ನಡ ಧ್ವಜವನ್ನು ಹಾರಿಸಲಾಯಿತು. ನಂತರ ಎನ್.ಟಿ.ಸಿ. ಸಿಬ್ಬಂದಿಗಳು ಸಿಹಿ ಹಂಚಿ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕುಶಾಲನಗರ ಪಟ್ಟಣ ಪೊಲೀಸ್ ಠಾಣಾಧಿಕಾರಿ ವೆಂಕಟರಮಣ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಎನ್.ಟಿ.ಸಿ. ವ್ಯವಸ್ಥಾಪಕ ಹಕೀಂ, ಎಲ್ಲೆಡೆ ಕನ್ನಡ ನಾಡು, ನುಡಿಯನ್ನು ನುಡಿಯುತ್ತಾ ಕನ್ನಡವನ್ನು ಉಳಿಸುವದು ಹಾಗೂ ಕನ್ನಡವನ್ನು ಬೆಳೆಸುವದು ನಮ್ಮೆಲ್ಲರ ಕರ್ತವ್ಯವಾಗಿದೆ. ಕನ್ನಡ ರಾಜ್ಯೋತ್ಸವವೆಂದರೆ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೇ ವರ್ಷವಿಡೀ ಕನ್ನಡದ ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡವೆಂದರೆ ನವೆಂಬರ್ ಎಂದು ನೆನಪಾಗುವದು ನೈಜ ಕನ್ನಡಾಭಿಮಾನವಲ್ಲ ಎಂದರು.

ಈ ಸಂದರ್ಭ ಎನ್.ಟಿ.ಸಿ. ಮಾಲೀಕ ಅಬ್ದುಲ್ ಸಲಾಂ, ಎನ್.ಟಿ.ಸಿ. ಕಚೇರಿ ಮುಖ್ಯಸ್ಥ ರಮೇಶ್, ಎನ್.ಟಿ.ಸಿ. ವರ್ತಕರಾದ ಲೋಕೇಶ್, ಸತೀಶ್, ಸಂಪತ್, ಇಮ್ರಾನ್ ಹಾಗೂ ಇನ್ನಿತರರು ಇದ್ದರು.