ಮಡಿಕೇರಿ, ನ. 20: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಭಾರತೀಯ ತೈಲ ಕಂಪೆನಿ(ಇಂಡಿಯನ್ ಆಯಿಲ್)ಯಿಂದ ನೂತನ ಆ್ಯಂಬುಲೆನ್ಸ್‍ನ್ನು ಒದಗಿಸಲಾಯಿತು.

ಭಾರತೀಯ ತೈಲ ಕಂಪೆನಿಯ ಹಿರಿಯ ವಿಭಾಗದ ವ್ಯವಸ್ಥಾಪಕ ಆನಂದ ಮೂರ್ತಿ ಆ್ಯಂಬುಲೆನ್ಸ್ ಕೀಯನ್ನು ಸಂಸ್ಥೆಯ ನಿರ್ದೇಶಕ ಡಾ. ಕಾರ್ಯಪ್ಪ ಅವರಿಗೆ ಹಸ್ತಾಂತರಿಸಿದರು. ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ. ಲೊಕೇಶ್, ಆಡಳಿತಾಧಿಕಾರಿ ಮೇರಿ ನಾಣಯ್ಯ, ಸಹಾಯಕ ಆಡಳಿತಾಧಿಕಾರಿ ಬಸವರಾಜು, ಇತರರು ಇದ್ದರು.