ಗೋಣಿಕೊಪ್ಪ ವರದಿ, ನ. 18: ಮಾಯಮುಡಿ ಗ್ರಾಮದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಭಾರತ ಸೇವಾ ದಳ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಗ್ರಾಮಸ್ಥರು ರಸ್ತೆ ಬದಿ ಕಸ ಹೆಕ್ಕುವ ಮೂಲಕ ಶ್ರಮದಾನ ಮಾಡಿದರು.
ಗ್ರಾಮದ ಮಾನಿಲ್ ಅಯ್ಯಪ್ಪ ಯುವಕ ಸಂಘ, ಕಂಗಳತ್ತ್‍ನಾಡ್ ಮಹಿಳಾ ಸಮಾಜ, ಕ್ಲೀನ್ ಕೂರ್ಗ್ ಇನಿಶೇಟಿವ್, ಭಾರತ್ ಸೇವಾದಳ ವತಿಯಿಂದ ಅಲ್ಲಿನ ರಾಮಮಂದಿರ ಆವರಣದಿಂದ ಮಡಿಕೆಬೀಡುವರೆಗೆ ಸ್ವಚ್ಛತೆ ನಡೆಸಲಾಯಿತು. ರಸ್ತೆ ಬದಿಯಲ್ಲಿನ ಪ್ಲಾಸ್ಟಿಕ್, ಕಸ ಹೆಕ್ಕಿ ಸ್ವಚ್ಛತೆ ಅರಿವು ಮೂಡಿಸಲಾಯಿತು. ಸುಮಾರು 100 ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
ಭಾರತ್ ಸೇವಾದಳ ಜಿಲ್ಲಾ ಸಂಘಟಕ ಉಮೇಶ್, ತಾಲೂಕು ಸಂಘಟಕ ಪಿ. ಎ. ಪ್ರವೀಣ್ ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ಸ್ವಯಂ ಸೇವಕರಿಗೆ ಅರಿವು ಮೂಡಿಸಿದರು. ಪ್ರಮುಖರಾದ ಸಣ್ಣುವಂಡ ರಮೇಶ್, ಚೆಪ್ಪುಡೀರ ದರ್ಶನ್, ಪ್ರದೀಪ್ ಪೂವಯ್ಯ, ಆಪಟ್ಟೀರ ಬೋಪಣ್ಣ, ರಾಧಾ ಅಚ್ಚಯ್ಯ, ಪಂಚು ದೇವಯ್ಯ ಇದ್ದರು.