*ಗೋಣಿಕೊಪ್ಪಲು, ನ.18: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಬಾರ ಅಧ್ಯಕ್ಷರಾಗಿ ಚಿಯಕ್‍ಪೂವಂಡ ಸುಬ್ರಮಣಿ ಅವರನ್ನು ಆಯ್ಕೆ ಮಾಡಲಾಗಿದೆ.
ಸಮಿತಿಯು 2018 ಅಕ್ಟೋಬರ್ 9ರಂದು ನೂತನ ಆಡಳಿತ ಮಂಡಳಿ ರಚನೆಗೊಂಡಿತು. ಅಧ್ಯಕ್ಷರಾಗಿ ಆದೇಂಗಡ ವಿನು ಚಂಗಪ್ಪ ಅವರು ಅಧಿಕಾರ ಪಡೆದುಕೊಂಡರು. ಬಿಜೆಪಿ ಪಕ್ಷದ ಪ್ರಮುಖರ ಒಡಂಬಡಿಕೆಯಂತೆ 20 ತಿಂಗಳ ಅಧ್ಯಕ್ಷರ ಆಡಳಿತ ಕೊನೆಗೊಂಡಿತು. ಈ ಹಿನ್ನೆಲೆ ಆದೇಂಗಡ ವಿನು ಚಂಗಪ್ಪ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಸುಬ್ರಮಣಿ ಅವರನ್ನು ನೇಮಕ ಮಾಡಲಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆ ಯಾಗುವವರೆಗೆ ಸುಬ್ರಮಣಿ ಅವರು ಪ್ರಬಾರ ಅಧ್ಯಕ್ಷರಾಗಿ ಮುಂದುವರೆ ಯಲಿದ್ದಾರೆ ಎಂದು ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರಕಟ್ಟೆ ಸಮಿತಿಯ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.