ಪೆರಾಜೆ, ನ. 18: ಉಳುವಾರು ಕುಟುಂಬಸ್ಥರ ಆಶ್ರಯದಲ್ಲಿ ಹತ್ತು ಕುಟುಂಬ ಹದಿನೆಂಟು ಗೋತ್ರದ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಕುಟುಂಬವಾರು ಆಹ್ವಾನಿತ ಕುಟುಂಬಗಳ ನಡುವಿನ ಕ್ರಿಕೆಟ್ ಪಂದ್ಯಾಟ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಪಂದ್ಯಾಟವು ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡುವಿನಲ್ಲಿ ನಡೆಯಿತು. ಪ್ರತಿ ವರ್ಷ ದೀಪಾವಳಿ ಹಬ್ಬದ ಪ್ರಯುಕ್ತ ನಡೆಯುವ ಈ ಪಂದ್ಯಾವಳಿಯನ್ನು ಮಳೆಯ ಕಾರಣದಿಂದ ಮುಂದೂಡ ಲಾಗಿತ್ತು. ಕುಟುಂಬವಾರು ಕ್ರಿಕೆಟ್ ಪಂದ್ಯಾಟದಲ್ಲಿ ಉಳುವಾರು ಕುಟುಂಬ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು. ರನ್ನರ್ಸ್ ಪ್ರಶಸ್ತಿಯನ್ನು ಮೇಲ್‍ಚೆಂಬು ಕುಟುಂಬ ಪಡೆದುಕೊಂಡಿತು.

ಸೆಮಿಫೈನಲ್ಸ್‍ನಲ್ಲಿ ಮೇಲ್‍ಚೆಂಬು ಕುಟುಂಬವು ದೇರಜೆ ಕುಟುಂಬವನ್ನು ಸೋಲಿಸಿ ಫೈನಲ್ ಪ್ರವೇಶಿಸಿದರೆ, ಆತಿಥೇಯ ಉಳುವಾರು ಕುಟುಂಬವು ಅಮೆಮನೆ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದವು. ಫೈನಲ್‍ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಉಳುವಾರು ಕುಟುಂಬವು ನಿಗದಿತ 6 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಮೇಲ್‍ಚೆಂಬು ತಂಡವು 5 ವಿಕೆಟ್ ನಷ್ಟಕ್ಕೆ 41ರನ್ ಗಳಿಸಿ 3 ರನ್‍ಗಳ ಸೋಲು ಅನುಭವಿಸಿತು.

ಮಹಿಳೆಯರ ಹಗ್ಗಜಗ್ಗಾಟದಲ್ಲಿ ಕಾಯರ ಕುಟುಂಬಸ್ಥರು ಪ್ರಥಮ ಸ್ಥಾನ ಹಾಗೂ ಕುರುಂಜಿ ಕುಟುಂಬಸ್ಥರು ದ್ವಿತೀಯ ಸ್ಥಾನ ಗಳಿಸಿದರು. ತೀರ್ಪು ಗಾರರಾಗಿ ಪ್ರಶಾಂತ್ ಊರುಬೈಲು ಮತ್ತು ಪ್ರದೀಪ ಕುಂಬಳ ಚೇರಿ ಕಾರ್ಯನಿರ್ವ ಹಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ಸಂತೋಷ ಕುತ್ತಮಟ್ಟೆ, ದಯಾನಂದ ಕುರುಂಜಿ, ಅಯ್ಯಣ್ಣ ಉಳುವಾರು, ಲೋಕನಾಥ ಸಣ್ಣಮನೆ, ಪುನೀತ ಕೂಸಪ್ಪ ಸಣ್ಣಮನೆ, ಉಕ್ರಪ್ಪಗೌಡ, ಸುಮಿತ್ರಗೌಡ ಉಳುವಾರು, ದಮಯಂತಿ ಕೇಶವಗೌಡ ಉಳುವಾರು, ವೇದಿಕೆಯಲ್ಲಿ ಉಪಸ್ಥಿತರಿದ್ದರು.

-ಕಿರಣ್ ಕುಂಬಳಚೇರಿ

ಸೇನೆಯಲ್ಲಿ ಸೇವೆ ಸಲ್ಲಿಸಲು ಇಚ್ಚಾಶಕ್ತಿ ಕೊರತೆ

ಮೂರ್ನಾಡು, ನ. 18: ಇತ್ತೀಚೆಗೆ ಸೇನೆ ಮತ್ತು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಇಚ್ಚಾ ಶಕ್ತಿ ಕೊಡಗಿನ ಜನರಲ್ಲಿ ಕಡಿಮೆಯಾಗಿದೆ ಎಂದು ಕೆಎಸ್‍ಆರ್‍ಪಿ ರಾಷ್ಟ್ರಪತಿ ಪದಕ ಪುರಸ್ಕøತ ಅಲ್ಮಚಂಡ ಪಳಂಗಪ್ಪ ಹೇಳಿದರು. ಬಾಡಗ ಕ್ರೀಡಾ ಮತ್ತು ಸಾಂಸ್ಕøತಿಕ ಸಂಘದ ವತಿಯಿಂದ ಮೂರ್ನಾಡಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಏರ್ಪಡಿಸ ಲಾಗಿದ್ದ ಗ್ರಾಮಾಂತರ ಕ್ರೀಡಾಕೂಟ ದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿ ದರು. ಕೊಡಗಿನ ಯುವಜನತೆ ದೇಶಕ್ಕಾಗಿ ದುಡಿಯುವ ಇಚ್ಛಾ ಶಕ್ತಿಯನ್ನು ಹೊಂದಿ ಸೇನೆ ಮತ್ತು ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದರೆ ಜೀವನಕ್ಕೆ ಭದ್ರತೆ ಸಿಗುತ್ತದೆ ಎಂದರು.

ಎಂ. ಬಾಡಗ ಗ್ರಾಮದ ಕಾಫಿ ಬೆಳೆಗಾರ ಕಂಬೀರಂಡ ಸತೀಶ್ ಮುತ್ತಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ನಿವೃತ್ತ ಪೊಲೀಸ್ ಎಸ್.ಪಿ. ಬೊಳ್ಳಪಂಡ ಪಿ. ಮಾಚಯ್ಯ, ಕಾನೂನು ತಜ್ಞ ಅಲ್ಮಚಂಡ ಪ್ರಭು ಸೋಮಯ್ಯ ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ರಾಷ್ಟ್ರಪತಿ ಪದಕ ಪುರಸ್ಕøತ ಅಲ್ಮಚಂಡ ಪಳಂಗಪ್ಪ ಹಾಗೂ ಕಾಫಿ ಬೆಳೆಗಾರರಾದ ಕೋಟೆರ ಪ್ರತಾಪ್ ಕಾರ್ಯಪ್ಪ ಅವರನ್ನು ಸನ್ಮಾನಿಸಲಾಯಿತು. ಎಂ. ಬಾಡಗ, ಕಿಗ್ಗಾಲು, ಕಾಂತೂರು, ಮುತ್ತಾರು ಮುಡಿ, ಕೋಡಂಬೂರು ಹಾಗೂ ಐಕೊಳ ಗ್ರಾಮದ ಗ್ರಾಮಸ್ಥರಿಗಾಗಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು.

ಭಾರದ ಕಲ್ಲುಎಸೆತ, ಪುರಷರ ವಿಭಾಗದಲ್ಲಿ ಕಾಂತೂರು ಗ್ರಾಮದ ಕೊಕ್ಕಲೆರ ಅನಿಲ್ ಚೆಂಗಪ್ಪ ಪ್ರಥಮ ಸ್ಥಾನ, ಕೋಡಂಬೂರಿನ ಮೂಡೆರ ಪೊನ್ನಪ್ಪ ದ್ವಿತೀಯ ಸ್ಥಾನ ಹಾಗೂ ಕಿಗ್ಗಾಲಿನ ಅಮ್ಮಂಡ ಅಯ್ಯಪ್ಪ ತೃತೀಯ ಸ್ಥಾನಗಳಿಸಿದರು. ಮಹಿಳೆ ಯರ ವಿಭಾಗದಲ್ಲಿ ಕೊಡಂಬೂರಿನ ಸುಶೀಲ್ ಚೆಂಗಪ್ಪ ಪ್ರಥಮ ಸ್ಥಾನಗಳಿಸಿದರೆ ಐಕೊಳ ಗ್ರಾಮದ ಪಾಲೆರ ದೇವಕ್ಕಿ ದ್ವಿತೀಯ ಬಹುಮಾನವನ್ನು ಹಾಗೂ ಮುತ್ತಾರುಮುಡಿ ಗ್ರಾಮದ ನೀತು ಮಂದಣ್ಣ ತೃತೀಯ ಸ್ಥಾನ ಗಳಿಸಿದರು.

ಥ್ರೋಬಾಲ್ ಸ್ಪರ್ಧೆಯಲ್ಲಿ ಐಕೊಳ ಗ್ರಾಮದ ತಂಡ ಪ್ರಥಮ ಸ್ಥಾನ ಗಳಿಸಿದರೆ ಮುತ್ತಾರುಮುಡಿ ಗ್ರಾಮದ ತಂಡ ದ್ವಿತೀಯ ಸ್ಥಾನಗಳಿಸಿತು. ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಕಿಗ್ಗಾಲು ಗ್ರಾಮದ ತಂಡಕ್ಕೆ ಪ್ರಥಮ ಬಹುಮಾನ ಲಭಿಸಿದರೆ, ಬಾಡಗ ಗ್ರಾಮದ ತಂಡಕ್ಕೆ ದ್ವಿತೀಯ ಸ್ಥಾನ ಲಭಿಸಿತು.

ಹಾಕಿ ಪಂದ್ಯದಲ್ಲಿ ಬೆಸ್ಟ್ ಗೋಲ್ ಕೀಪರ್ ಆಗಿ ನುಚ್ಚಿಮಣಿಯಂಡ ಬೋಪಣ್ಣ, ಬೆಸ್ಟ್ ಬ್ಯಾಕ್ ಆಗಿ ಬಾರಿಯಂಡ ಬೆಳ್ಯಪ್ಪ, ಬೆಸ್ಟ್ ಹಾಫ್ ಆಗಿ ಕೊಡಂಬೂರಿನ ಪ್ರಶಾಂತ್, ಬೆಸ್ಟ್ ಫಾರ್ವರ್ಡ್ ಆಗಿ ಅವರೆಮಾದಂಡ ನಿಖಿಲ್ ಸೋಮಣ್ಣ, ಉತ್ತಮ ಉದಯೋನ್ಮುಖ ಆಟಗಾರರಾಗಿ ಐಕೊಳ ಗ್ರಾಮದ ದೇವಯ್ಯ . ದೇವಂಡೀರ ರೋಹನ್ ಬಾಡಗ ಗ್ರಾಮದ ಎಂ. ಪ್ರಕಾಶ್, ಹೊರಹೊಮ್ಮಿ ದರು. ಹಾಕಿ ಪಂದ್ಯಾಟದಲ್ಲಿ ಬಾಡಗ ತಂಡ ಪ್ರಥಮ ಸ್ಥಾನವನ್ನು ಕಾಂತೂರು ತಂಡ ದ್ವಿತೀಯ ಸ್ಥಾನವನ್ನು ಗಳಿಸಿತು.

ಕಾರ್ಯಕ್ರಮದಲ್ಲಿ ವಿದ್ಯಾತಿಮ್ಮಯ್ಯ ಪ್ರಾರ್ಥಿಸಿದರು. ನೆರ್ಪಂಡ ಹರ್ಷ ಕಾರ್ಯಕ್ರಮ ನಿರೂಪಿಸಿದರು. ಎಂ.ಬಾಡಗ ತಂಡದಿಂದ ಉಮ್ಮತ್ತಾಟ್ ಮತ್ತು ಬೊಳಕಾಟ್ ಪ್ರದರ್ಶನ ನೆರವೇರಿತು. ಹಾಕಿ ತೀರ್ಪುಗಾರರಾಗಿ ಚೆಯ್ಯಂಡ ಅಪ್ಪಚ್ಚು ಮತ್ತು ತಂಡದವರು ಥ್ರೋಬಾಲ್ ತೀರ್ಪುಗಾರರಾಗಿ ಚೆಯ್ಯಂಡ ಕಸ್ತೂರಿ ಕಾರ್ಯನಿರ್ವಹಿಸಿದರು.