ಮಡಿಕೇರಿ ನ. 19: ಕೊಡಗು ಜಿಲ್ಲಾ ಮದ್ರಸ ಮ್ಯಾನೇಜ್‍ಮೆಂಟ್ ಅಸೋಸಿಯೇಷನ್‍ನ ವಾರ್ಷಿಕ ಮಹಾಸಭೆ ಹಾಗೂ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರಿಗೆ ಆರ್ಥಿಕ ನೆರವು ನೀಡುವ ಕಾರ್ಯಕ್ರಮ ನ. 20 ರಂದು (ಇಂದು) ಸಿದ್ದಾಪುರದ ಮುನವ್ವಿರುಲ್ ಇಸ್ಲಾಂ ಮದ್ರಸದಲ್ಲಿ ನಡೆಯಲಿದೆ.

ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಇದರ ಮುಖ್ಯ ಕಾರ್ಯದರ್ಶಿ ಮೊಯೀನ್ ಕುಟ್ಟಿ ಮಾಸ್ಟರ್ ಹಾಗೂ ಸಮಸ್ತ ಕೇಂದ್ರ ಮುಶಾವರ ಸದಸ್ಯ ಎಂ. ಅಬ್ದುಲ್ಲ ಫೈಝಿ ಎಡಪಾಲ, ಎಸ್‍ಕೆಜೆಎಂಸಿಸಿ ಕಾರ್ಯದರ್ಶಿ ಎಂ. ಅಬ್ದುಲ್‍ರಹ್ಮಾನ್ ಮುಸ್ಲಿಯಾರ್, ಕೊಡಗು ಜಿಲ್ಲಾ ಮದ್ರಸ ಆಡಳಿತ ಮಂಡಳಿ ಅಧ್ಯಕ್ಷ ಕೆ. ಉಸ್ಮಾನ್ ಹಾಜಿ ಸಿದ್ದಾಪುರ, ಕಾರ್ಯದರ್ಶಿ ಸಿಪಿಎಂ ಬಶೀರ್ ಹಾಜಿ ಮತ್ತಿತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.