ಮಡಿಕೇರಿ, ನ. 18: 25ನೇ ರಾಷ್ಟ್ರೀಯ ಸಿಬಿಎಸ್ಇ ಹಾಕಿ ಪಂದ್ಯಾಟದಲ್ಲಿ 17 ವರ್ಷ ದೊಳಗಿನ ವಿಭಾಗದಲ್ಲಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಬಾಲಕರ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದು, ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಅಂತಿಮ ಪಂದ್ಯದಲ್ಲಿ ಬಿವಿಬಿಕೆವಿ ಬಾಲಕರ ತಂಡ ಸಿರ್ಸಾದ ಶಾಹ ಸತ್ನಮ್ಜಿ ಶಾಲೆ ವಿರುದ್ಧ 2-0 ಗೋಲುಗಳ ಗೆಲುವು ಸಾಧಿಸಿ ಚಿನ್ನದ ಪದಕ ಪಡೆದರೆ; ಬಾಲಕಿಯರ ತಂಡ ಕೊಯಂಬತ್ತೂರಿನ ಸಚ್ಚಿದಾನಂದ ಶಾಲೆ ವಿರುದ್ಧ 1-3 ಗೋಲಿನ ಅಂತರದಲ್ಲಿ ಸೋಲನುಭವಿಸಿ; ಬೆಳ್ಳಿಯ ಪದಕ ಗಳಿಸಿಕೊಂಡಿತು.