ವೀರಾಜಪೇಟೆ: ನಿತ್ಯವೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿರುವ ಪುಟಾಣಿಗಳು ಮಕ್ಕಳ ದಿನಾಚರಣೆ ಅಂಗವಾಗಿ ನಗರದ ವಿವಿಧೆಡೆಗಳಲ್ಲಿ ನಡೆದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಅವರೆಲ್ಲರೂ ಮನೆಯಿಲ್ಲದೆ ಅಲೆಮಾರಿ ಜೀವನ ಸಾಗಿüಸುವ ಮಕ್ಕಳು, ಊರೂರು ಸುತ್ತುತ್ತಾ ಬದುಕು ಸಾಗಿಸುವ ಪುಟಾಣಿಗಳು. ಹಗ್ಗಜಗ್ಗಾಟ, ಲಗೋರಿ, ಗೋಣಿಚೀಲದಲ್ಲಿ ಓಡುವ ಸ್ಪರ್ಧೆ, ಮ್ಯೂಸಿಕಲ್ ಚೇರ್ ಸ್ಪರ್ಧೆಗಳು ಇವ್ಯಾವದೂ ಈ ಮಕ್ಕಳ ಪಾಲಿಗೆ ಇಲ್ಲ. ಇಂತಹ ಮಕ್ಕಳೊಂದಿಗೆ ವೀರಾಜಪೇಟೆ ರೋಟರಿ ಸಂಸ್ಥೆಯ ವತಿಯಿಂದ ಪಟ್ಟಣದ ಮಾಂಸ ಮಾರುಕಟ್ಟೆ ಬಳಿಯಿರುವ ಕಾಮತ್ ಮಿಠಾಯಿ ಮನೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿಭಿನ್ನವಾಗಿ ವಿನೂತನ ರೀತಿಯಲ್ಲಿ ಆಚರಿಸಲಾಯಿತು.
ವೀರಾಜಪೇಟೆ ನಗರದಲ್ಲಿ ಕಳೆದ ಕೆಲವು ವರ್µಗಳಿಂದ ನಗರದಾದ್ಯಂತ ಬಳಸಿ ಬಿಸಾಡಿದ ಪ್ಲಾಸ್ಟಿಕ್ ಹಾಗೂ ಇನ್ನಿತ್ತರ ವಸ್ತುಗಳನ್ನು ಹೆಕ್ಕಿಕೊಂಡು ಜೀವನ ಸಾಗಿಸುತ್ತಿರುವ ನಾಲ್ಕು ಕುಟುಂಬಗಳ ಏಳು ಮಕ್ಕಳು ಯಾವದೇ ವಿದ್ಯಾಭ್ಯಾಸವಿಲ್ಲದೆ ವಂಚಿತರಾಗಿದ್ದಾರೆ. ಪ್ರತಿದಿನ ಅಲ್ಲಿ ಇಲ್ಲಿ ಸುತ್ತಾಡಿಕೊಂಡು ಯಾವದೇ ಸಂಭ್ರಮವಿಲ್ಲದೆ ಕಾಲ ಕಳೆಯುತ್ತಿರುತ್ತಾರೆ. ಇಂತಹ ಮಕ್ಕಳನ್ನು ಗಮನಿಸಿದ ವೀರಾಜಪೇಟೆ ರೋಟರಿ ಮಾಜಿ ಅಧ್ಯಕ್ಷ ಶಾಂತರಾಮ್ ಕಾಮತ್ ಅವರೊಂದಿಗೆ ಮಕ್ಕಳ ದಿನಾಚರಣೆಯನ್ನು ಮಕ್ಕಳಿಗೆ ಹೊಸಬಟ್ಟೆ, ತಿಂಡಿ ತಿನಿಸುಗಳು ಹಾಗೂ ವಿಶೇಷ ಕಿಟ್ ನೀಡಿ ಆಚರಿಸಿದರು.
ಈ ಸಂದರ್ಭ ಮಕ್ಕಳಿಗೆ ಸಿಹಿ ಹಂಚಿ ಮಾತನಾಡಿದ ಶಾಂತರಾಮ್ ಕಾಮತ್ ಮೂಲ ಸೌಲಭ್ಯಗಳಿಂದ ವಂಚಿತರಾದ ಮಕ್ಕಳು ಈ ಸಂಭ್ರಮದಿಂದ ವಂಚಿತರಾಗಿದ್ದಾರೆ. ಅವರು ಕೂಡ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಎಲ್ಲಾ ಮಕ್ಕಳು ಹೊಸಬಟ್ಟೆ ಧರಿಸಿ ಸಂಭ್ರಮದಿಂದ ಶಾಲೆಗೆ ಹೋಗುತ್ತಿದ್ದುದನ್ನು ಕಂಡು ಬಹಳ ಬೇಸರವೆನಿಸಿ ಈ ಮಕ್ಕಳ ಬಗ್ಗೆ ಕನಿಕರ ಮೂಡಿತು ಎಂದು ಹೇಳಿದರು.
ವೀರಾಜಪೇಟೆ ರೋಟರಿ ಅಧ್ಯಕ್ಷ ಕೆ. ಆದಿತ್ಯ ಮಾತನಾಡಿ, ದೇಶದ ಬಹುದೊಡ್ಡ ಆಸ್ತಿ ಮಕ್ಕಳು. ಇಡೀ ದೇಶದಲ್ಲಿಯೇ ಎಲ್ಲ ಮಕ್ಕಳು ಸಂಭ್ರಮದಲ್ಲಿದ್ದಾರೆ. ಆದರೆ ಅದೆಷ್ಟೋ ಕಡೆಗಳಲ್ಲಿ ಯಾವದೇ ಮೂಲಸೌಲಭ್ಯಗಳಿಲ್ಲದೇ, ವಿದ್ಯಾಭ್ಯಾಸವಿಲ್ಲದೇ ಸಮಾಜದ ತುಳಿತಕ್ಕೆ ಒಳಗಾಗಿ ಜೀವನ ಸಾಗಿಸುತ್ತಿದ್ದಾರೆ. ಅಂತಹವರನ್ನು ಮಾನಸಿಕವಾಗಿ, ಆರ್ಥಿಕವಾಗಿ ಸದೃಢರಾಗುವಂತೆ ಮಾಡುವ ಕೆಲಸವಾಗಬೇಕು. ಸಮಾಜದೊಂದಿಗೆ ಬೆರೆಯುವ ಅವಕಾಶ ಒದಗಿಸುವಂತಾಗಬೇಕು ಎಂದು ಹೇಳಿದರು.
ಮಾನವೀಯತೆ ಮೆರೆದ ಸಂಗೀತಾ: ಚಿಂದಿ ಆಯುವ ಪುಟಾಣಿ ಸಂಗೀತಾ ಕಾಮತ್ ಮಿಠಾಯಿ ಮನೆ ಎದುರು ರೂ. 5000 ಬಿದ್ದು ಸಿಕ್ಕಿದ್ದನ್ನು ಮಾಲೀಕರಿಗೆ ತಲಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾಳೆ. ಇದೇ ಸಂದರ್ಭ ಅವಳಿಗೆ ಬಹುಮಾನ ನೀಡಿ ಗೌರವಿಸಿದರು. ಈ ಸಂದರ್ಭ ಸಂಸ್ಥೆಯ ಚೇತನ್, ಭಾರ್ಗವಿ, ರಕ್ಷಾ ಹಾಗೂ ಮಿಠಾಯಿ ಮನೆ ಮಾಲೀಕರಾದ ವೀಣಾ ಕಾಮತ್ ಪಾಲ್ಗೊಂಡಿದ್ದರು.
ಕೂಡಿಗೆ: ಕೂಡ್ಲೂರು ಯೂನಿಕ್ ಅಕಾಡೆಮಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅನ್ನು ಆಚರಿಸಲಾಯಿತು. ಮಕ್ಕಳ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಫ್ಯಾನ್ಸಿ ಡ್ರೆಸ್, ಮಕ್ಕಳ ಸಂತೆ, ಛದ್ಮವೇಷ ಸ್ಪರ್ಧೆ ಕಾರ್ಯಕ್ರಮವನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು. ಸ್ಪರ್ಧೆಗಳ ತೀರ್ಪುಗಾರರಾಗಿ ಮಹಾಲಕ್ಷ್ಮಿ, ವಿಂದನ, ಸುನಿತಾ, ಲತಾಮಣಿ, ಚೈತ್ರ, ಗ್ರೀಷ್ಮಮ್ಯಾಥ್ಯು, ಚೈತ್ರ ವಿ.ಎಂ, ಭವ್ಯ, ನೇತ್ರಾವತಿ ಕಾರ್ಯನಿರ್ವಹಿಸಿದರು. ಈ ಸಂದರ್ಭ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ರವಿತೊರೆನೂರು, ಅಕಾಡೆಮಿ ಸಂಯೋಜಕಿ ಸುಪ್ರಿತ, ಮುಖ್ಯ ಶಿಕ್ಷಕಿ ನೇತ್ರಾವತಿ, ಶಾಲೆಯ ಶಿಕ್ಷಕ ವೃಂದ ಹಾಗೂ ಪೋಷಕರು, ವಿದ್ಯಾರ್ಥಿಗಳು ಇದ್ದರು.ನಾಪೆÇೀಕ್ಲು: ನಾಪೆÇೀಕ್ಲು ಪದವಿಪೂರ್ವ ಕಾಲೇಜಿನಲ್ಲಿ ನೂತನವಾಗಿ ಆರಂಭಿಸಲಾದ ಕರ್ನಾಟಕ ಪಬ್ಲಿಕ್ ಶಾಲೆಯ ಉದ್ಘಾಟನೆ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿ, ಮಾತನಾಡಿದರು.
ಸರಕಾರ ಗ್ರಾಮೀಣ ಪ್ರದೇಶದಲ್ಲಿ ಎಲ್.ಕೆ.ಜಿ. ಮತ್ತು ಒಂದನೇ ತರಗತಿಯಿಂದಲೇ ಕನ್ನಡದೊಂದಿಗೆ ದ್ವಿತೀಯ ಭಾಷೆಯಾಗಿ ಇಂಗ್ಲಿಷ್ ಭಾಷೆಯನ್ನು ಮಕ್ಕಳು ಕಲಿಯಬೇಕೆಂಬ ಉದ್ದೇಶದಿಂದ ತಾಲೂಕಿಗೊಂದು ಪಬ್ಲಿಕ್ ಶಾಲೆಯನ್ನು ಆರಂಭಿಸಿದ್ದು, ಎಲ್.ಕೆ.ಜಿ. ಮತ್ತು ಒಂದನೇ ತರಗತಿಯಲ್ಲಿ ಸುಮಾರು 30 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸರಕಾರದ ನಿಯಮದಂತೆ ಒಂದು ತರಗತಿಯಲ್ಲಿ 30 ಮಕ್ಕಳಿಗೆ ಮಾತ್ರ ಅವಕಾಶವಿದ್ದು, ಮುಂದೆ ತರಗತಿಗಳನ್ನು ವಿಸ್ತರಿಸಲು ಶಿಕ್ಷಣ ಮಂತ್ರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಮುರುಳೀಧರ್, ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಉಪಾಧ್ಯಕ್ಷ ಸಂತು ಸುಬ್ರಮಣಿ, ಜಿಲ್ಲಾ ಸಾರ್ವಜನಿಕ ಶಿಕ್ಷಣಾಧಿಕಾರಿ ಮಚ್ಚಾಡೋ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ತಾ.ಪಂ. ಸದಸ್ಯರಾದ ಇಂದಿರಾ, ಉಮಾಪ್ರಭು, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಉಪಾಧ್ಯಕ್ಷ ಕಾಳೆಯಂಡ ಸಾಬ ತಿಮ್ಮಯ್ಯ, ಕರವಂಡ ಲವ ನಾಣಯ್ಯ, ಸದಸ್ಯರಾದ ಕುಶು ಕುಶಾಲಪ್ಪ, ಚೋಕಿರ ರೋಷನ್, ಅಜಿತ್ ನಾಣಯ್ಯ, ಉದಯ ಶಂಕರ್, ಬೊಳ್ಳೆಪಂಡ ಜಾನು, ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಅವನಿಜಾ ಸೋಮಯ್ಯ, ಉಪಪ್ರಾಂಶುಪಾಲೆ ಪಿ.ಕೆ. ನಳಿನಿ. ಮತ್ತಿತರರು ಇದ್ದರು.
ಕುಶಾಲನಗರ: ಸೋಮವಾರಪೇಟೆ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ತ್ರೀಶಕ್ತಿ ಒಕ್ಕೂಟ ಹಾಗೂ ವಿವಿಧ ಸ್ತ್ರೀಶಕ್ತಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಮಾದಪಟ್ಟಣ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಇಲಾಖೆ ಯೋಜನಾಧಿಕಾರಿ ಮಹೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಅಂಗನವಾಡಿ ಮಕ್ಕಳಿಗೆ ಗುರುತಿನ ಕಾರ್ಡ್‍ಗಳನ್ನು ನೀಡಿ ಮಾಜಿ ಸೈನಿಕ ರಮಾನಾಥ್ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸದಸ್ಯೆ ಶೋಭಾ, ಮೇಲ್ವಿಚಾರಕಿ ವಿಮಲಾ, ಅಣ್ಣಯ್ಯ, ಸ್ತ್ರೀಶಕ್ತಿ ಒಕ್ಕೂಟದ ಕಾರ್ಯದರ್ಶಿ ಹೆಚ್.ಎಂ. ಹೇಮಾ, ಅಂಗನವಾಡಿ ಕಾರ್ಯಕರ್ತೆ ನಾಗವೇಣಿ , ಸಹಾಯಕಿ ಹರಿಣಿ, ಮಾದಪಟ್ಟಣ ಸ್ತ್ರೀಶಕ್ತಿ ಸಂಘದ ಸದಸ್ಯೆ ಮೈನಾ ಉಪಸ್ಥಿತರಿದ್ದರು. ಆಶಾ ಕಾರ್ಯಕರ್ತೆ ರುಕ್ಮಿಣಿ ಪ್ರಾರ್ಥಿಸಿದರೆ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಅತಿಥಿಗಳು ಬಹುಮಾನ ವಿತರಿಸಿದರು.ಶನಿವಾರಸಂತೆ: ಶನಿವಾರಸಂತೆಯ ಬ್ರೈಟ್ ಅಕಾಡೆಮಿ ಹೇಮಾ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲಾ ಮಕ್ಕಳು ಆಟೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಸುಂಟಿಕೊಪ್ಪ: ಕಾನ್‍ಬೈಲ್ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಜವಹರಲಾಲ್ ನೆಹರು ಅವರ ವೇಷ ಧರಿಸಿ ಎಲ್ಲರ ಗಮನ ಸಳೆದರು.
ಆಟೋಟ ಸ್ಪರ್ಧೆಯ ಉದ್ಘಾಟನೆಯನ್ನು ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿ.ಆರ್. ರಂಜನಿ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ನಾಕೂರು-ಶಿರಂಗಾಲ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗೂಳಪ್ಪ ಕೊಲೆನಾ, ಕಾನ್‍ಬೈಲ್ ಶಾಲೆಯ ಮುಖ್ಯೋಪಾಧ್ಯಾಯ ಎಂ.ಎಸ್. ಚೆನ್ನಪ್ಪ ಹಾಜರಿದ್ದರು. ಸಹಶಿಕ್ಷಕಿ ಧನ್ಯವತಿ ವಂದಿಸಿದರು. ಶಾಲೆಯ ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಶನಿವಾರಸಂತೆ: ಶನಿವಾರಸಂತೆಯ ಬ್ರೈಟ್ ಅಕಾಡೆಮಿ ಹೇಮಾ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲಾ ಮಕ್ಕಳು ಆಟೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಸುಂಟಿಕೊಪ್ಪ: ಕಾನ್‍ಬೈಲ್ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಜವಹರಲಾಲ್ ನೆಹರು ಅವರ ವೇಷ ಧರಿಸಿ ಎಲ್ಲರ ಗಮನ ಸಳೆದರು.
ಆಟೋಟ ಸ್ಪರ್ಧೆಯ ಉದ್ಘಾಟನೆಯನ್ನು ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿ.ಆರ್. ರಂಜನಿ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ನಾಕೂರು-ಶಿರಂಗಾಲ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗೂಳಪ್ಪ ಕೊಲೆನಾ, ಕಾನ್‍ಬೈಲ್ ಶಾಲೆಯ ಮುಖ್ಯೋಪಾಧ್ಯಾಯ ಎಂ.ಎಸ್. ಚೆನ್ನಪ್ಪ ಹಾಜರಿದ್ದರು. ಸಹಶಿಕ್ಷಕಿ ಧನ್ಯವತಿ ವಂದಿಸಿದರು. ಶಾಲೆಯ ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ನಾಪೋಕ್ಲು: ಹೋಬಳಿ ವ್ಯಾಪ್ತಿಯ ವಿವಿಧ ಶಾಲೆಗಳಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ವಿವಿಧ ಸರ್ಕಾರಿ ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಶಾಲೆಗಳಲ್ಲಿ, ಪ್ರೌಢಶಾಲೆಗಳಲ್ಲಿ ಶಾಲಾ ಮಕ್ಕಳಿಗೆ ಆಟೋಟಗಳನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿದ್ಯಾರ್ಥಿಗಳು ನೃತ್ಯ ಹಾಡುಗಾರಿಕೆ ಛದ್ಮವೇಷ ಭಾಷಣ ಸೇರಿದಂತೆ ಹತ್ತುಹಲವು ಸ್ಪರ್ಧೆಗಳಲ್ಲಿ ಪಾಲ್ಗೊಂಡರು.
ಸಮೀಪದ ಬೆಟ್ಟಗೇರಿಯ ಉದಯ ಪ್ರೌಢಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ವತಿಯಿಂದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ನಿಂಬೆ ಹಣ್ಣು ಓಟದ ಸ್ಪರ್ಧೆ, ಸೂಜಿದಾರದ ಓಟದ ಸ್ಪರ್ಧೆ, ಒಂಟಿ ಕಾಲಿನ ಓಟ, ವಿಜ್ಞಾನ ರಂಗೋಲಿ ಸ್ಪರ್ಧೆ ಹಾಗೂ ಛದ್ಮವೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಸ್ಥಳೀಯ ಸತೀಶ್ ಸುಬ್ಬಯ್ಯ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಸದಸ್ಯ ಅಜಿತ್ ನಾಣಯ್ಯ. ಉದಯ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಕವಿತ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ತಾಲೂಕು ಸಂಯೋಜಕ ರವಿ ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.
ಶನಿವಾರಸಂತೆ: ಶನಿವಾರಸಂತೆ ಸಮೀಪದ ನ್ಯಾಯದಹಳ್ಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಮುಖ್ಯ ಶಿಕ್ಷಕಿ ಕವಿತಾ ಮಾರ್ಗದರ್ಶನದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಿದರು.