ಸುಂಟಿಕೊಪ್ಪ, ನ. 19: ಪೌತಿ ಖಾತೆ ಬದಲಾವಣೆಯ ಮಹತ್ವದ ಬಗ್ಗೆ ಅರಿವು ಮತ್ತು ಅಭಿಪ್ರಾಯ ಪಡೆಯುವ ಸಲುವಾಗಿ ಸುಂಟಿಕೊಪ್ಪ ಹೋಬಳಿಯ ಕಾಂಡನಕೊಲ್ಲಿ ದವಸ ಭಂಡಾರ ಕಟ್ಟಡದಲ್ಲಿ ತಾ. 20 ರಂದು (ಇಂದು) ಪೂರ್ವಾಹ್ನ 11 ಗಂಟೆಗೆ ಗ್ರಾಮ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಸಂಬಂಧಿಸಿದವರು ಮೃತರಾದವರ ಮರಣ ದೃಢೀಕರಣ ಪತ್ರ, ವಂಶಾವಳಿ ಪಟ್ಟಿ ಆರ್.ಟಿ.ಸಿ. ದಾಖಲೆಯೊಂದಿಗೆ ಹಾಜರಾಗುವಂತೆ ಉಪತಹಶೀಲ್ದಾರ್ ಶುಭ ಕೆ., ಕಂದಾಯ ಪರಿವೀಕ್ಷಕ ಹೆಚ್.ಕೆ. ಶಿವಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.