ಮಡಿಕೇರಿ, ನ. 17: ವೈಷ್ಣವಿ ಫುಟ್ಬಾಲ್ ಕ್ಲಬ್ ವತಿಯಿಂದ, ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಸಹಯೋಗದಲ್ಲಿ ಹುತ್ತರಿ ಹಬ್ಬದ ಪ್ರಯುಕ್ತ ಮುಂದಿನ ಡಿ. 12 ರಿಂದ ನಾಲ್ಕು ದಿನಗಳ ಕಾಲ ಮರಗೋಡು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ನಾಲ್ಕನೇ ವರ್ಷದ ಹೊನಲು ಬೆಳಕಿನ ‘ಹುತ್ತರಿ ಕಪ್ ಫುಟ್ಬಾಲ್ ಪಂದ್ಯಾವಳಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕ್ಲಬ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಪಂದ್ಯಾವಳಿಗೆ ತಂಡಗಳ ನೋಂದಣಿ ಮುಕ್ತವಾಗಿದ್ದು, ಮೊದಲು ನೋಂದಾಯಿಸಿಕೊಂಡ 30 ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗತ್ತದೆ. ಇದು 7+2 ಆಟಗಾರರ ಪಂದ್ಯಾವಳಿಯಾಗಿದ್ದು ನಾಕೌಟ್ ಮಾದರಿಯಲ್ಲಿ ನಡೆಯಲಿದೆಯೆಂದು ತಿಳಿಸಿದರು.

ಸಂಘದ ಉಪಾಧ್ಯಕ್ಷ ಬಡುವಂಡ್ರ ದುಷ್ಯಂತ್, ರಾಜ್ಯ ಮಟ್ಟದ ಹೊನಲು ಬೆಳಕಿನ ಪಂದ್ಯಾವಳಿಯಾಗಿರುವದರಿಂದ ತಂಡಗಳಿಗೆ ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ. ತಂಡಗಳ ನೋಂದಣಿಗೆ ಡಿ. 5 ಕೊನೆಯ ದಿನವಾಗಿದೆ.

ನೋಂದಣಿ ಮಾಡಿಕೊಂಡ ತಂಡಗಳನ್ನು ಮಾತ್ರ ಟೈಸ್ ಹಾಕಲು ಪರಿಗಣಿಸಲಾಗುತ್ತದೆ. ಪಂದ್ಯಾವಳಿಯಲ್ಲಿ ಯಾವದೇ ಕಾರಣಕ್ಕೂ ವಿದೇಶಿ ಆಟಗಾರರಿಗೆ ಆಡಲು ಅವಕಾಶವಿಲ್ಲ ಎಂದು ತಿಳಿಸಿ, ಆಟಗಾರರು ಸಂಪೂರ್ಣ ಕಿಟ್ ಧರಿಸಿ ಆಡುವದು ಕಡ್ಡಾಯ ಎಂದರು. ವೈಷ್ಣವಿ ಫÀÅಟ್ಬಾಲ್ ತಂಡದ ನಾಯಕ ಬಡುವಂಡ್ರ ಸುಜಯ್, ಪಂದ್ಯಾವಳಿಯಲ್ಲಿ ಕೊಡಗು, ಮಂಗಳೂರು, ಕೇರಳ, ಮೈಸೂರು ಹಾಗೂ ಹಾಸನದಿಂದ ತಂಡಗಳು ಆಗಮಿಸುವ ನಿರೀಕ್ಷೆ ಇದೆ. ಸಂಜೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಪಂದ್ಯಾವಳಿ ನಡೆಯಲಿದೆ.

ವಿಜೇತ ತಂಡಕ್ಕೆ ಟ್ರೋಫಿ ಮತ್ತು ರೂ. 30 ಸಾವಿರ ನಗದು ಹಾಗೂ ರನ್ನರ್ಸ್ ಅಪ್ ತಂಡಕ್ಕೆ ಟ್ರೋಫಿ ಮತ್ತು ರೂ. 20 ಸಾವಿರ ಬಹುಮಾನ ನೀಡಲಾಗುತ್ತದೆ.

ಇದರೊಂದಿಗೆ ವೈಯಕ್ತಿಕ ವಿಭಾಗದಲ್ಲೂ ಹಲವು ಬಹುಮಾನಗಳನ್ನು ನೀಡಲಾಗುತ್ತದೆ ಎಂದರು. ಕ್ಲಬ್ ಕಾರ್ಯದರ್ಶಿ ಗೋಪಾಲ್ ಸೋಮಯ್ಯ ಮಾತನಾಡಿ, ರಾಜ್ಯಮಟ್ಟದ ಪಂದ್ಯಾವಳಿಯಾಗಿರುವದರಿಂದ ಜಿಲ್ಲಾ ಫುಟ್ಬಾಲ್ ಅಸೋಸಿ ಯೇಷನ್‍ನ ನೆರವಿನೊಂದಿಗೆ ಅಗತ್ಯ ಅಂಪಾಯರ್‍ಗಳ ಸೇವೆಯನ್ನು ಪಡೆದುಕೊಳ್ಳಲಾಗುತ್ತದೆ. ಪಂದ್ಯಾವಳಿ ಉದ್ಘಾಟನೆ ಸಂದರ್ಭ ಮಾಧ್ಯಮ ತಂಡ ಮತ್ತು ಪೊಲೀಸ್ ಎಸ್‍ಪಿ ತಂಡದ ನಡುವೆ ಪಂದ್ಯ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿ, ಸಮಾರೋಪ ಸಮಾರಂಭದ ಬಳಿಕ ಸಾಂಸ್ಕøತಿಕ ಮತ್ತು ಮನೋರಂಜನಾ ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನಿಡಿದರು.

ಹೆಚ್ಚಿನ ಮಾಹಿತಿಗೆ, ಬಡುವಂಡ್ರ ಸುಜಯ್ - 9482631474, ಅಥವಾ ಸುಜಯ್ ಪೂಜಾರಿ-9483134495 ಅವರನ್ನು ಸಂಪರ್ಕಿಸುವಂತೆ ಕೋರಿದರು.

ಗೋಷ್ಠಿಯಲ್ಲಿ ವೈಷ್ಣವಿ ಫÀÅಟ್ಬಾಲ್ ಸಂಘದ ಉಪಾಧ್ಯಕ್ಷ ಬಡುವಂಡ್ರ ಸುಜಯ್ ಹಾಗೂ ಸದಸ್ಯ ಕೊಂಪುಳಿ ಕಿರಣ್ ಉಪಸ್ಥಿತರಿದ್ದರು.