ಮಡಿಕೇರಿ, ನ. 16: ಮೂರ್ನಾಡು ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕಾಲೇಜು ನ್ಯೂಸ್ ಲೆಟರ್ “ಕ್ಯಾಂಪಸ್ ಕ್ರೋನಿಕಲ್ಸ್” ಆರನೇ ಆವೃತ್ತಿಯನ್ನು ಮೂರ್ನಾಡು ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಪೆಮ್ಮಡಿಯಂಡ ವೇಣು ಅಪ್ಪಣ್ಣ ಬಿಡುಗಡೆಗೊಳಿಸಿದರು.

ಈ ಸಂದರ್ಭ ಮಡಿಕೇರಿ ಪದವಿ ಕಾಲೇಜಿನ ಪ್ರೊ. ಕೋರನ ಸರಸ್ವತಿ ಹಾಗೂ ಕಾಲೇಜಿನ ಉಪನ್ಯಾಸಕರಾದ ನವೀನ್, ವಿಲ್ಮ ಹಾಜರಿದ್ದರು.