ಮಡಿಕೇರಿ, ನ. 16: ಲೋಕಾನುಗ್ರಹಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನಾಚರ ಣೆಯ ಅಂಗವಾಗಿ ಆಚರಿಸಿಕೊಂಡು ಬರುತ್ತಿರುವ ಐತಿಹಾಸಿಕ ಹುಬ್ಬುನ್ನಬಿ ಸಮಾವೇಶ ತಾ. 21 ರಿಂದ 24ರ ವರೆಗೆ ವೈವಿಧ್ಯಮಯ ಆಧ್ಯಾತ್ಮಿಕ, ಸಾಹಿತ್ಯ, ಸಾಂಸ್ಕøತಿಕ ಕಾರ್ಯಕ್ರಮ ಗಳೊಂದಿಗೆ ನಡೆಯಲಿದೆ ಎಂದು ವೀರಾಜಪೇಟೆಯ ಅನ್ವಾರುಲ್ ಹುದಾ ಸಂಸ್ಥೆಯ ವ್ಯವಸ್ಥಾಪಕ ಮಹಮ್ಮದ್ ಶಾಫಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರಾಜಪೇಟೆಯ ಅನ್ವಾರುಲ್ ಹುದಾ ಸಂಸ್ಥೆಯ ಅಧೀನದಲ್ಲಿ ತಾ. 21, 22, 23, 24 ರಂದು ಆರ್ಜಿ ಗ್ರಾಮದಲ್ಲಿ ಸಮಾವೇಶ ನಡೆಯಲಿದೆ ಎಂದರು.

ತಾ. 21 ರಂದು ಬೆಳಿಗ್ಗೆ 10 ಗಂಟೆಗೆ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ನಂತರ ಮೌಲಿದ್ ಪಾರಾಯಣ, ಅನ್ವಾರುಲ್ ಹುದಾ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ತಾ. 22 ರಂದು ಐತಿಹಾಸಿಕ ಸಂದೇಶ ಜಾಥಾ, ಬೃಹತ್ ಬುರ್ದಾ ಮಜ್ಲಿಸ್ ನಡೆಯಲಿದೆ. ತಾ. 23 ರಂದು ಹೈಮನಃ ವಿದ್ಯಾರ್ಥಿಗಳ ಕಲಾ ಕಾರ್ಯಕ್ರಮ, ತಾ. 24 ರಂದು ಅಸ್ಮಾಉಲ್ ಹುಸ್ನಾ ರಾತೀಬಿ ನೊಂದಿಗೆ ಸಮಾರೋಪ ಸಮಾರಂಭ ನಡೆಯಲಿದೆ.

ಸಮಾವೇಶಕ್ಕೆ ಕೇರಳ, ಕರ್ನಾಟಕದ ಪ್ರಮುಖ ಸಾದಾತ್, ವಿಧ್ವಾಂಸರು, ಕೊಡಗು ಜಿಲ್ಲೆಯ ಸಾಹಿತಿಗಳು, ಪೊಲೀಸ್ ಅಧಿಕಾರಿ ಗಳು, ಪತ್ರಕರ್ತರು ಸೇರಿದಂತೆ ವಿವಿಧ ನಾಯಕರು ಭಾಗವಹಿಸಲಿದ್ದಾರೆಂದು ತಿಳಿಸಿದರು.

ಗೋಷ್ಠಿಯಲ್ಲಿ ಕಾರ್ಯಕ್ರಮದ ಅಧ್ಯಕ್ಷ ಜಲೀಲ ಅಮಿನಿ, ಅನ್ವರುಲ್ ಹುದಾ ಪಬ್ಲಿಕ್ ಶಾಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಶಹೀದ್ ಎಮ್ಮೆಮಾಡು, ಕೋಶಾಧಿಕಾರಿ ಶಾಫಿದ್ ನಂಜರಾಯ ಪಟ್ಟಣ, ಪ್ರಧಾನ ಕಾರ್ಯದರ್ಶಿ ಅಶೀಫ್ ಮಲ ಗೋಡು ಹಾಗೂ ಕನ್ವಿರಲ್ ಶರಿಫ್ ಹೋಸತೋಟ ಉಪಸ್ಥಿತರಿದ್ದರು.