ಶನಿವಾರಸಂತೆ, ನ. 16: ಪಟ್ಟಣದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಜಿಲ್ಲಾ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಭಾಗಿತ್ವದಲ್ಲಿ ಇನ್‍ಸ್ಟಿಟ್ಯೂಟ್ ಆಫ್ ಮಾರ್ಷಿಯಲ್ ಆಟ್ರ್ಸ್ ಮತ್ತು ಯೋಗ ಸಂಸ್ಥೆ ವತಿಯಿಂದ ಗೋಣಿಕೊಪ್ಪದಲ್ಲಿ ನಡೆದ ಜಿಲ್ಲಾಮಟ್ಟದ ಕರಾಟೆ ಟೂರ್ನಿಯಲ್ಲಿ ಭಾಗವಹಿಸಿ ಬಹುಮಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಶನಿವಾರಸಂತೆಯ ಸೆಕ್ರೇಡ್ ಹಾರ್ಟ್ ವಿದ್ಯಾಸಂಸ್ಥೆಯ ಶೋಭಿತ್, ಧನುಷ್, ಪ್ರಶಾಂತ್, ಹೃಷಿಕೇಶ್, ಗೋಕುಲ್, ತೇಜಸ್, ನಿಶಾಂತ್, ಶ್ರೀವಿಘ್ನೇಶ್ವರ ವಿದ್ಯಾಸಂಸ್ಥೆಯ ಸ್ಫೂರ್ತಿ, ಅಂಕಿತಾ, ಸುಪ್ರಜ ಗುರುಕುಲದ ಪ್ರೇಕ್ಷಿತ್, ಕಾವೇರಿ ವಿದ್ಯಾಸಂಸ್ಥೆಯ ಮನೀಶ್, ಕೊಡ್ಲಿಪೇಟೆ ಎಸ್.ಎಲ್.ಎಸ್. ಕಾನ್ವೆಂಟಿನ ತೇಜಸ್ವಿನಿ ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಪಡೆದಿದ್ದು, ತಾ. 18ರಂದು ಮತ್ತು 19ರಂದು ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಕರಾಟೆ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. ತರಬೇತುದಾರರಾದ ಮುಖೇಶ್, ಶಿವಾನಂದ್, ಅರುಣ್, ಗಣೇಶ್, ಪಳನಿ, ಸಂಜಯ್, ಸಂಕೇತ್, ಪ್ರಮೋದ್ ತರಬೇತಿ ನೀಡಿದ್ದಾರೆ.