ಗುಡ್ಡೆಹೊಸೂರು, ನ. 15: ಇಲ್ಲಿಗೆ ಸಮೀಪದ ಮಾದಪಟ್ಟಣ ಗ್ರಾಮದ ಶ್ರೀ ಜೋಡಿ ಬಸವೇಶ್ವರ ದೇವಸ್ಥಾನಕ್ಕೆ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಸನ್ನಿದಿಯಿಂದ ಒಂದು ಲಕ್ಷ ಹಣವನ್ನು ನೀಡಲಾಯಿತು. ಈ ಸಂದರ್ಭ ಧರ್ಮಸ್ಥಳ ಸಂಘದ ಯೋಜನಾಧಿಕಾರಿ ಪ್ರಕಾಶ್ ವೈ. ಮತ್ತು ಮೇಲ್ವಿಚಾರಕ ಹರೀಶ್ ಮತ್ತು ಸೇವಾಪ್ರತಿನಿಧಿಗಳಾದ ಜಯಲಕ್ಮಿ ಮತ್ತು ಚಂದ್ರಾವತಿ ಹಾಜರಿದ್ದರು. ಒಕ್ಕೂಟದ ಅಧ್ಯಕ್ಷೆ ಯಶೋಧ ಮತ್ತು ದೇವಸ್ಥಾನ ಸಮಿತಿ ಅಧ್ಯಕ್ಷ ನಾಗೇಶ್ ಮತ್ತು ಸಮಿತಿಯ ಸದಸ್ಯರು, ಈ ವಿಭಾಗದ ಗ್ರಾ.ಪಂ. ಸದಸ್ಯರಾದ ಶಿವಪ್ಪ, ಪ್ರವೀಣ್, ಪುಷ್ಪಾ ನಾಗೇಶ್ ಮತ್ತು ಗ್ರಾಮಸ್ಥರು ಹಾಜರಿದ್ದರು. ಈ ಸಂದರ್ಭ ಸಂಘದ ಯೋಜನಾಧಿಕಾರಿ ಪ್ರಕಾಶ್ ಮಾತನಾಡಿ, ಧರ್ಮಸ್ಥಳ ದೇವಸ್ಥಾನದಿಂದ ನೀಡುತ್ತಿರುವ ಈ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸುವಂತೆ ನುಡಿದರು. ಈ ಸಂದರ್ಭ ಸಮಿತಿ ಅಧ್ಯಕ್ಷ ನಾಗೇಶ್ ಮಾತನಾಡಿ, ದೇವಸ್ಥಾನ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಸಾರ್ವಜನಿಕರು ಹಣದ ಸಹಾಯ ಮಾಡುವಂತೆ ಮನವಿ ಮಾಡಿದರು.