ಮಡಿಕೇರಿ, ನ. 14: ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿರುವ ವಿವಿಧ ವಲಯಗಳ ಚಾಲಕರ ಉತ್ತಮ ಸೇವೆ ಗುರುತಿಸಲು ಸರ್ಕಾರದ ವತಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಚಾಲಕರ ದಿನಾಚರಣೆ ಆಚರಿಸಲಾಗುವದು. ಈ ಸಮಯದಲ್ಲಿ ಪ್ರ್ರಾಮಾಣಿಕವಾಗಿ ಮತ್ತು ಅಪಘಾತರಹಿತವಾಗಿ ಸೇವೆ ಸಲ್ಲಿಸಿರುವ ಮ್ಯಾಕ್ಸಿ ಕ್ಯಾಬ್, ಬಸ್, ಸರಕು ಸಾಗಣೆ ವಾಹನ, ಟ್ಯಾಕ್ಸಿ ಮತ್ತು ಆಟೋರಿಕ್ಷಾ ಇವುಗಳಲ್ಲಿ ಪ್ರತಿ ವರ್ಗದ ವಾಹನದಲ್ಲಿ ಇಬ್ಬರು ಚಾಲಕರನ್ನು ಗುರುತಿಸಿ, ಒಟ್ಟು 10 ಚಾಲಕರನ್ನು ಸನ್ಮಾನಿಸಲು ಸರ್ಕಾರಕ್ಕೆ ಪ್ರಸ್ತ್ತಾವನೆ ಸಲ್ಲಿಸಬೇಕಾಗಿರುವದರಿಂದ ಅತಿ ಹೆಚ್ಚು ವರ್ಷಗಳ ಕಾಲ ಅಪಘಾತರಹಿತ ಚಾಲನೆ ಮಾಡಿರುವ ಮತ್ತು ಯಾವದೇ ಕ್ರಿಮಿನಲ್ ಮೊಕ್ಕದ್ದಮೆಯಲ್ಲಿ ದಾಖಲಾಗದಿರುವ ಚಾಲಕರು ಅರ್ಜಿಯೊಂದಿಗೆ ಡ್ರೈವಿಂಗ್ ಲೈಸನ್ಸ್, ಕ್ರಿಮಿನಲ್ ಮೊಕದ್ದಮ್ಮೆ ಇಲ್ಲದಿರುವ ಬಗ್ಗೆ ಪೊಲೀಸ್ ಇಲಾಖೆಯಿಂದ ದೃಢೀಕರಣ, ಆಧಾರ್ ಕಾರ್ಡ್ ಪ್ರತಿಯನ್ನು ಲಗತ್ತಿಸಿ ಯಾವ ವಾಹನವನ್ನು ಎಷ್ಟು ವರ್ಷದಿಂದ ಚಾಲನೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಪೂರ್ಣ ಮಾಹಿತಿಯನ್ನು ಅರ್ಜಿಯಲ್ಲಿ ನಮೂದಿಸಿರಬೇಕು. ಕಚೇರಿಯಲ್ಲಿ ಸ್ವೀಕೃತವಾದ ಅರ್ಜಿಗಳಲ್ಲಿ ಆಯ್ಕೆಮಾಡಿ ಉತ್ತಮ ಚಾಲಕರನ್ನು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವದು.

ಷರತ್ತುಗಳು ಇಂತಿವೆ: ಅಭ್ಯರ್ಥಿಯು ಸಂಬಂಧಿಸಿದ ವಾಹನ ವರ್ಗದ ಸಿಂಧುತ್ವವುಳ್ಳ ಚಾಲನಾ ಅನುಜ್ಞಾಪತ್ರವನ್ನು ಹೊಂದಿರಬೇಕು. ಅಭ್ಯರ್ಥಿಯ ವಯಸ್ಸು 45 ವರ್ಷ ಮೀರಿರಬೇಕು ಮತ್ತು ಚಾಲನಾ ಅನುಜ್ಞಾಪತ್ರದ ಸಿಂಧುತ್ವವು 20 ವರ್ಷ ಪೂರೈಸಿರಬೇಕು. ಅಭ್ಯರ್ಥಿಯ ಚಾಲನಾ ಅನುಜ್ಞಾಪತ್ರವು ಯಾವದೇ ಕಾರಣಕ್ಕೂ ಅಮಾನತ್ತುಗೊಂಡಿರಬಾರದು ಅಭ್ಯರ್ಥಿಯು ಯಾವದೇ ರಸ್ತೆ ಅಪಘಾತ ಪ್ರಕರಣದಲ್ಲಿ ಭಾಗಿಯಾಗಿರಕೂಡದು. ಅಭ್ಯರ್ಥಿಯ ವಿರುದ್ಧ ಯಾವದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರಬಾರದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಅವರು ತಿಳಿಸಿದ್ದಾರೆ.

ಪರೀಕ್ಷಾ ಪೂರ್ವ ತರಬೇತಿಗೆ

ಪ್ರಸಕ್ತ ಸಾಲಿನಲ್ಲಿ ಒಂದು ಸಾವಿರ ಪರಿಶಿಷ್ಟ ಜಾತಿ ಮತ್ತು 200 ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಜೆಇಇ ಮತ್ತು ಎನ್‍ಇಇಟಿ (ನೀಟ್) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 2 ವರ್ಷದ ದೀರ್ಘಾವಧಿಯ ಪೂರ್ವಭಾವಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ತಾ. 23 ಕೊನೆಯ ದಿನವಾಗಿದೆ. ಹೆಚ್ಚಿನ ವಿವರಗಳಿಗೆ ವೆಬ್‍ಸೈಟ್ ತಿತಿತಿ.sತಿ.ಞಚಿಡಿ.ಟಿiಛಿ.iಟಿ ನ್ನು ನೋಡಬಹುದು. ಜೆಇಇ (ಅಡ್ವಾನ್ಸ್ ಮತ್ತು ಮೈನ್ಸ್) ನೀಟ್ ಸ್ಪರ್ಧಾತ್ಮಕ ಪರೀಕ್ಷೆಗೆಳಿಗೆ 2 ವರ್ಷ ತರಬೇತಿ. 10ನೇ ತರಗತಿಯಲ್ಲಿ ಶೇ. 60 ಕ್ಕಿಂತ ಹೆಚ್ಚು ಅಂಕಗಳಿಸಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆದಿರುವ ಅಭ್ಯರ್ಥಿಗಳನ್ನು ನಿಗದಿತ ಗುರಿಗನುಗುಣವಾಗಿ ಆಯ್ಕೆ ಮಾಡಲಾಗುವದು. ಅರ್ಜಿಯನ್ನು ತಿತಿತಿ.sತಿ.ಞಚಿಡಿ.ಟಿiಛಿ.iಟಿ ನಲ್ಲಿ ಸಲ್ಲಿಸಬಹುದು. ಅರ್ಜಿಯನ್ನು ಎee.ಟಿeeಣ.ಠಿeಣಛಿ@gmಚಿiಟ.ಛಿom ಇ-ಮೇಲ್‍ಗೆ ಕಳುಹಿಸಬೇಕು.

ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಕರ್ನಾಟಕ ರಾಜ್ಯದ ಅನುಸೂಚಿತ ಜಾತಿ ಮತ್ತು ಅನುಸೂಚಿತ ವರ್ಗಕ್ಕೆ ಸೇರಿದ ಜಾತಿ ಪಟ್ಟಿಯಲ್ಲಿರುವ ಜಾತಿಗೆ ಸೇರಿರತಕ್ಕದ್ದು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು. ದೈಹಿಕ ಅಂಗವಿಕಲ ಮೀಸಲಾತಿಯಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿತ ಪ್ರಾಧಿಕಾರದಿಂದ ನಿಗದಿಪಡಿಸಲಾದ ಕೊನೆಯ ದಿನಾಂಕದೊಳಗೆ ಅಂಗವಿಕಲ ಪ್ರಮಾಣ ಪತ್ರ ಪಡೆದಿರಬೇಕು.

ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಕೊಡಗು ಜಿಲ್ಲೆ, ಮಡಿಕೇರಿ 08272-225531, ಸಹಾಯಕ ನಿರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆ ಮಡಿಕೇರಿ 08272-223552, ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಸೋಮವಾರಪೇಟೆ 08276-281115, ಸಹಾಯಕ ನಿರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆ, ಪೊನ್ನಂಪೇಟೆ 08274-249476 ನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಭಾರತಿ ತಿಳಿಸಿದ್ದಾರೆ.