ಗೋಣಿಕೊಪ್ಪ ವರದಿ, ನ. 15 : ಪೊನ್ನಂಪೇಟೆ ಕಂದಾಯ ಪರಿವೀಕ್ಷಕರ ಕಚೇರಿ ವತಿಯಿಂದ ಮಾಯಮುಡಿ ಗ್ರಾಮ ಪಂಚಾಯಿತಿಯಲ್ಲಿ ತಾ. 16 ರಂದು (ಇಂದು) ಮಾಯಮುಡಿ ಗ್ರಾಮ ವ್ಯಾಪ್ತಿಯ ಆರ್‍ಟಿಸಿಯಲ್ಲಿನ ಪೌತಿ ಖಾತೆ ಆಂದೋಲನ ಕಾರ್ಯಕ್ರಮ ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ. ಆರ್‍ಟಿಸಿಯಲ್ಲಿ ಉಳಿದು ಕೊಂಡಿರುವ ನಿಧನರಾದವರ ಹೆಸರನ್ನು ವಜಾ ಮಾಡಿ ಪೌತಿ ಖಾತೆ ವರ್ಗಾವಣೆಯ ಅರ್ಜಿ ಸ್ವೀಕರಿಸ ಲಾಗುತ್ತದೆ. ಅರ್ಜಿದಾರರು ಅರ್ಜಿಯೊಂದಿಗೆ ಮೊಬೈಲ್ ಸಂಖ್ಯೆ, ಆರ್‍ಟಿಸಿ, ಮರಣ ದೃಢೀಕರಣ ಪತ್ರ, ಕಂದಾಯ ಇಲಾಖೆ ವತಿಯಿಂದ ನೀಡಿರುವ ವಂಶಾವಳಿ ಪಟ್ಟಿ, ಒಂದು ಸರ್ವೇ ನಂಬರ್‍ಗೆ ರೂ. 35 ನೀಡಬೇಕಿದೆ ಎಂದು ಪೊನ್ನಂಪೇಟೆ ಕಂದಾಯ ಇಲಾಖೆ ಕಚೇರಿ ಪ್ರಕಟಣೆ ತಿಳಿಸಿದೆ.