ಶ್ರೀಮಂಗಲ, ನ. 13: ದಕ್ಷಿಣ ಕೊಡಗಿನ ಶ್ರೀಮಂಗಲ,ಕುಟ್ಟ ಮತ್ತು ಕೆ.ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಮರಳಿ ಅರಣ್ಯಕ್ಕೆ ಸೇರಿಸಲು ಅರಣ್ಯ ಇಲಾಖೆ ಹಮ್ಮಿಕೊಂಡಿರುವ 2 ದಿನಗಳ ಕಾರ್ಯಾಚರಣೆ ತಾ. 14ರಂದು (ಇಂದು) ಕೂಡ ಮುಂದುವರೆ ಯಲಿದೆ.

ಮಡಿಕೇರಿ ವನ್ಯಜೀವಿ ವಿಭಾಗದ ಶ್ರೀಮಂಗಲ, ನಾಗರಹೊಳೆ ಮತ್ತು ಪೆÇನ್ನಂಪೇಟೆ ವಲಯದ ವ್ಯಾಪ್ತಿಗೆ ಬರುವಂತಹ ಗ್ರಾಮಗಳಾದ ಕಾಯಿಮನಿ, ಮಂಚಳ್ಳಿ, ಕುಟ್ಟ, ತೈಲಾ, ಪನ್ಯಾ, ಕೇಂಬುಕೊಲ್ಲಿ ಗ್ರಾಮಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಶ್ರೀಮಂಗಲ ವಲಯ ಅರಣ್ಯಾಧಿಕಾರಿ ವೀರೇಂದ್ರ ಮರಿ ಬಸಣ್ಣವರ್, ಪೆÇನ್ನಂಪೇಟೆ ವಲಯ ಅರಣ್ಯಾಧಿಕಾರಿ ತೀರ್ಥ, ನಾಗರಹೊಳೆ ವಲಯ ಅರಣ್ಯಾಧಿಕಾರಿ ಅನಿಲ್ ಗೌಡ ಅವರ ನೇತೃತ್ವದಲ್ಲಿ ಸುಮಾರು 50ಕ್ಕೂ ಅಧಿಕ ಸಿಬ್ಬಂದಿ ಹಲವು ತಂಡದೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಚಳ್ಳಿ ಗ್ರಾಮದ ಕಾಫಿ ತೋಟದಲ್ಲಿ 9 ಕಾಡಾನೆಗಳ ಹಿಂಡು ಗೋಚರಿಸಿದ್ದು, ಅವುಗಳನ್ನು ಅರಣ್ಯಕ್ಕೆ ಸೇರಿಸಲು ಕಾರ್ಯಾಚರಣೆ ತಂಡ ಹರಸಾಹಸ ಪಡುತ್ತಿವೆ. ಕಾಡಾನೆಗಳು ಅರಣ್ಯದಂಚಿನವರೆಗೆ ತೆರಳಿ ಮತ್ತೆ ಗ್ರಾಮಕ್ಕೆ ಹಿಂತಿರುಗುತ್ತಿವೆ. ಅವುಗಳನ್ನು ಮತ್ತೆ ಅರಣ್ಯಕ್ಕೆ ಸೇರಿಸಲು ಕಾರ್ಯಾಚರಣೆ ಮುಂದುವರಿಸ ಲಾಗಿದೆ ಎಂದು ಅರಣ್ಯಾಧಿಕಾರಿ ವೀರೇಂದ್ರ ಮರಿಬಸಣ್ಣವರ್ ತಿಳಿಸಿದ್ದಾರೆ. ಈ ವ್ಯಾಪ್ತಿಯಲ್ಲಿ ಗುರುವಾರ ಕಾರ್ಯಾಚರಣೆ ನಡೆಯಲಿದೆ.