ಮಡಿಕೇರಿ, ನ. 13: ಕಾರ್ತಿಕ ಮಾಸದ ಹುಣ್ಣಿಮೆಯ ಪ್ರಯುಕ್ತ ನಿನ್ನೆ ಮುಸ್ಸಂಜೆಯ ನಡುವೆ; ದಕ್ಷಿಣ ಪ್ರಯಾಗ ಖ್ಯಾತಿಯ ಭಾಗಮಂಡಲ ಕ್ಷೇತ್ರದ ಕಾವೇರಿ, ಕನ್ನಿಕೆ, ಸುಜ್ಯೋತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಮಹಾ ಆರತಿಯೊಂದಿಗೆ ವಿಶೇಷ ಪೂಜೆ ನೆರವೇರಿತು.
ವಿಶ್ವ ಹಿಂದು ಪರಿಷತ್ತಿನ ಬೆಂಗಳೂರು ಮಹಾನಗರ ಹಾಗೂ ಕೊಡಗಿನ ವಿ.ಹಿಂ.ಪ., ಬಜರಂಗದಳ ಪ್ರಮುಖರು ಪೂಜೆಯ ನೇತೃತ್ವ ವಹಿಸಿದ್ದರು. ಸುಳ್ಯದ ಕೇಶವ ಪ್ರತಿಷ್ಠಾನ ವಿದ್ವಾನ್ ನಾಗರಾಜ್ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿ- ವಿಧಾನಗಳೊಂದಿಗೆ ಮಹಾ ಆರತಿ ನೆರವೇರಿತು. ದೀಪಪೂಜೆ, ಚಂಡೆಮೇಳ, ಶಂಬೋದ್ಘೋಷಗಳ ಸಹಿತ ಶ್ರೀ ಕಾವೇರಿ ಮಾತೆಗೆ ವೇದಮಂತ್ರ ಪಠನ ಸಹಿತ ಪೂಜಾ ಕೈಂಕರ್ಯವನ್ನು ಅರ್ಚಕ ಬಳಗ ನೆರವೇರಿಸಿದರು.