ಮಡಿಕೇರಿ, ನ. 13: ಕಡಂಗ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸರಕಾರದ ವತಿಯಿಂದ ಪೂರೈಸಲಾಗುವ ಶೂ ಹಾಗೂ ಸಾಕ್ಸ್ಗಳನ್ನು ‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತ ಶಯನ ಅವರು ವಿತರಣೆ ಮಾಡಿದರು.
ಇದೇ ಸಂದರ್ಭ ಅನ್ನದ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸಿದರು. ಮಕ್ಕಳಲ್ಲಿ ಪತ್ರಿಕೆ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಪ್ರೋತ್ಸಾಹಿಸುವ ಸಲುವಾಗಿ ಪತ್ರಿಕೆಗಳನ್ನು ಓದುವ ಮಕ್ಕಳಿಗೆ ಪ್ರೋತ್ಸಾಹಕರ ಬಹುಮಾನ ನೀಡಿದರು. ಈ ಸಂದರ್ಭ ಜಯಶ್ರೀ ಅನಂತ ಶಯನ, ಮುಖ್ಯ ಶಿಕ್ಷಕಿ ವೈ.ಎ. ತಂಗಮ್ಮ, ಶಿಕ್ಷಕ ವೃಂದದವರು ಇದ್ದರು.