ಗೋಣಿಕೊಪ್ಪ ವರದಿ, ನ. 12: ಮಂಗಳೂರು ಮಂಗಳ ಕ್ರೀಡಾಂಗಣ ದಲ್ಲಿ ಕರ್ನಾಟಕ ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಪ್ರಥಮ ವರ್ಷದ ಕರ್ನಾಟಕ ರಾಜ್ಯ ಮಾಸ್ಟರ್ಸ್ ಗೇಮ್ಸ್ನಲ್ಲಿ ಕೊಡಗು ಜಿಲ್ಲೆಗೆ 50 ಕ್ಕೂ ಹೆಚ್ಚು ಪದಕ ಲಭಿಸಿದೆ.
ಜಿಲ್ಲೆಯಿಂದ ಪಾಲ್ಗೊಂಡಿದ್ದ 20 ಕ್ರೀಡಾಪಟುಗಳಲ್ಲಿ 17 ಕ್ರೀಡಾಪಟುಗಳು ಪದಕ ಗೆದ್ದುಕೊಳ್ಳುವ ಮೂಲಕ ಫೆಬ್ರವರಿಯಲ್ಲಿ ಗುಜರಾತ್ನಲ್ಲಿ ನಡೆಯುವ ರಾಷ್ಟ್ರಮಟ್ಟ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಮಹಿಳಾ ವಿಭಾಗದ ಫಲಿತಾಂಶ
70 ಮೇಲ್ಪಟ್ಟ ವಯೋಮಿತಿಯ ಮಹಿಳಾ ವಿಭಾಗದಲ್ಲಿ ಮಾರಮಾಡ ಮಾಚಮ್ಮ ಭಾರದ ಗುಂಡು ಎಸೆತ, ಚಕ್ರ ಎಸೆತ ಮತ್ತು ಭರ್ಜಿ ಎಸೆತದಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡರು.
65 ವಯೋಮಿತಿಯ ವಿಭಾಗದಲ್ಲಿ ಮುಲ್ಲೇರ ಪೊನ್ನಮ್ಮ 100 ಮೀ, 200 ಮೀ, ಭಾರದ ಗುಂಡು ಎಸೆತದಲ್ಲಿ ಪ್ರಥಮ, 60 ವಯೋಮಿತಿಯಲ್ಲಿ ಚೇಮೀರ ಸೀತಮ್ಮ ಭಾರದ ಗುಂಡು ಎಸೆತ, ತಟ್ಟೆ ಎಸೆತ, ಭರ್ಜಿ ಎಸೆತದಲ್ಲಿ ಪ್ರಥಮ, 50 ವಯೋಮಿತಿ ವಿಭಾಗದಲ್ಲಿ ಕಮಲಮ್ಮ 800 ಮೀ, 400 ಮೀ, 200 ಮೀ ಓಟದಲ್ಲಿ ದ್ವಿತೀಯ, ಬಿ.ಸಿ ಪಾರ್ವತಿ 3 ಕಿ. ಮೀ. ನಡಿಗೆ, 1500, 5000 ಮೀ ಓಟದಲ್ಲಿ ಪ್ರಥಮ 50 ವಯೋಮಿತಿಯಲ್ಲಿ ಬಿ. ವಸಂತಿ 100, 200, 400 ಮೀಟರ್ ಓಟದಲ್ಲಿ ಪ್ರಥಮ, 40 ವಯೋಮಿತಿಯಲ್ಲಿ ಕೇಚೆಟ್ಟೀರ ರೇಷ್ಮಾ ದೇವಯ್ಯ ಭಾರದ ಗುಂಡು ಎಸೆತದಲ್ಲಿ ಪ್ರಥಮ, ಎತ್ತರ ಜಿಗಿತದಲ್ಲಿ ದ್ವಿತೀಯ, ಭರ್ಜಿ ಎಸೆತದಲ್ಲಿ ತೃತೀಯ, 40 ವಯೋ ಮಿತಿಯಲ್ಲಿ ಬೀನಾ ಫರ್ನಾಂಡಿಸ್ 1500 ಮೀ, 5000, 10,000 ಮೀ ಓಟದಲ್ಲಿ ದ್ವಿತೀಯ, ಕಂಬೀರಂಡ ರಾಕಿ ರಾಕೇಶ್ ತ್ರಿವಿದ ಜಿಗಿತದಲ್ಲಿ ಪ್ರಥಮ, ಉದ್ದ ಜಿಗಿತದಲ್ಲಿ ದ್ವಿತೀಯ, 35 ವಯೋಮಿತಿಯಲ್ಲಿ ಬೊಪ್ಪಂಡ ಕುಸುಮಾ ಭೀಮಯ್ಯ 800 ಮೀ, ಭಾರದ ಗುಂಡು ಎಸೆತದಲ್ಲಿ ಪ್ರಥಮ, 400 ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದರು.
50 ವಯೋಮಿತಿಯ ತಾತಪಂಡ ಜ್ಯೋತಿ ಸೋಮಯ್ಯ ಶಟಲ್ ಬಾಡ್ಮಿಂಟನ್ ಸಿಂಗಲ್ಸ್, ಡಬಲ್ಸ್ ಮತ್ತು ಮಿಕ್ಸ್ಡ್ ಡಬಲ್ಸ್ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರು. 65 ವಯೋ ಮಿತಿಯ 4x100 ರಿಲೇಯಲ್ಲಿ ಮುಲ್ಲೇರ ಪೊನ್ನಮ್ಮ, ಮಾರಮಾಡ ಮಾಚಮ್ಮ, ಪ್ರಥಮ, 35 ವಯೋಮಿತಿಯ 4x100 ಮೀ. ಬೊಪ್ಪಂಡ ಕುಸುಮ ಭೀಮಯ್ಯ ಪ್ರಥಮ ಸ್ಥಾನ ಪಡೆದರು.
ಪುರುಷರ ವಿಭಾಗ
65 ವಯೋಮಿತಿಯ 4*100 ರಿಲೇಯಲ್ಲಿ ಪೆಮ್ಮಂಡ ಅಪ್ಪಯ್ಯ, ಪೊನ್ನಚ್ಚನ ಮಾದಪ್ಪ ಪ್ರಥಮ, 35 ಮೇಲ್ಪಟ್ಟ ವಯೋಮಿತಿಯ 4x100 ಮೀ. ರಿಲೇಯಲ್ಲಿ ಕಂಬೀರಂಡ ರಾಕೇಶ್, ಎಂ. ಡಿ. ನಾಗೇಂದ್ರ, ಜಿ. ರಘುನಂದನ್ ಪ್ರಥಮ ಸ್ಥಾನ ಪಡೆದರು.
75 ವಯೋಮಿತಿ ವಿಭಾಗದಲ್ಲಿ ಪೆಮ್ಮಂಡ ಅಪ್ಪಯ್ಯ 100 ಮೀ, 200 ಮೀ, 400 ಮೀ ಓಟದಲ್ಲಿ ಪ್ರಥಮ, ಪೊನ್ನಚ್ಚನ ಮಾದಪ್ಪ ಭಾರದ ಗುಂಡು ಎಸೆತದಲ್ಲಿ ಪ್ರಥಮ, 100 ಮೀ, ಉದ್ದ ಜಿಗಿತದಲ್ಲಿ ದ್ವಿತೀಯ, ಡಾ. ಶೆಟ್ಟಿ 800 ಮೀ. 1500, 5000 ಮೀ. ಓಟದಲ್ಲಿ ಪ್ರಥಮ, 50 ವಯೋಮಿತಿ ವಿಭಾಗದಲ್ಲಿ ಆಮೆಮನೆ ಜನಾರ್ಧನ 1500 ಮೀ, 5000 ಮೀ, ಓಟದಲ್ಲಿ ಪ್ರಥಮ, 40 ವಯೋಮಿತಿ ವಿಭಾಗದಲ್ಲಿ ಈಶ್ವರ ಟೇಬಲ್ ಟೆನ್ನಿಸ್ ಸಿಂಗಲ್ಸ್ ಹಾಗೂ ಡಬಲ್ಸ್ನಲ್ಲಿ ಪ್ರಥಮ, ಮಿಕ್ಸ್ ಡಬಲ್ಸ್ನಲ್ಲಿ ದ್ವಿತೀಯ ಸ್ಥಾನ ಪಡೆದರು. 45 ವಯೋಮಿತಿ ವಿಭಾಗದಲ್ಲಿ ಜಾವ್ಲಿನ್ ಎಸೆತದಲ್ಲಿ ಪ್ರಸನ್ನ ದ್ವಿತೀಯ ಸ್ಥಾನ ಪಡೆದರು.