ಸಾ.ರಾ. ಮಹೇಶ್
ಮಡಿಕೇರಿ, ನ. 12: 2018ನೇ ಸಾಲಿನ ಬಿಡುಗಡೆಗೆ ಬಾಕಿಯಿರುವ ಮಡಿಕೇರಿ ದಸರಾ ಅನುದಾನ ರೂ. 50 ಲಕ್ಷ ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಾಸಕ ಸಾ.ರಾ. ಮಹೇಶ್ ತಿಳಿಸಿದ್ದಾರೆ. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು; ಹಿಂದೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಲ್ಲಿ ಅನುದಾನ ಇಲ್ಲದ ಕಾರಣ ತಾವು ನಿರ್ವಹಿಸುತ್ತಿದ್ದ ಪ್ರವಾಸೋದ್ಯಮ ಖಾತೆಯಿಂದ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿತ್ತು. ಇದೀಗ ಹಣಕಾಸು ಇಲಾಖೆಯಿಂದ ತಾತ್ವಿಕ ಒಪ್ಪಿಗೆ ಸಿಕ್ಕಿದ್ದು; ಮುಖ್ಯಕಾರ್ಯದರ್ಶಿಗಳ ಹಂತದಲ್ಲಿದೆ. ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಜಿಲ್ಲೆಯಿಂದ ಯಾವದೇ ಅಧಿಕಾರಿಗಳನ್ನು ಮತ್ತೋರ್ವ ಅಧಿಕಾರಿ ನೇಮಕಾತಿಯಾಗುವವರೆಗೆ ವರ್ಗಾವಣೆ ಮಾಡಬಾರದು; ಅಲ್ಲದೆ ಕೂಡಲೇ ಜಿಲ್ಲೆಗೆ ಅಧಿಕಾರಿಗಳನ್ನು ನೇಮಕ ಮಾಡುವಂತೆ ಕಾಗದ ಪತ್ರ ಸಮಿತಿ ಮೂಲಕ ಸರಕಾರಕ್ಕೆ ಶಿಫಾರಸು ಮಾಡಲಾಗುವದೆಂದು ಅವರು ತಿಳಿಸಿದರು. ಆದಷ್ಟು ಶೀಘ್ರ ಸಂತ್ರಸ್ತರಿಗೆ ಮನೆಗಳು ಸಿಗುವಂತಾಗಲಿದೆ ಎಂದು ಆಶಿಸಿದರು.