ಕುಶಾಲನಗರ, ನ. 12: ಇಲ್ಲಿಗೆ ಸಮೀಪದ ಗುಮ್ಮನಕೊಲ್ಲಿ ಬಳಿ ಕಾವೇರಿ ನದಿಯಲ್ಲಿ ವ್ಯಕ್ತಿಯೊಬ್ಬರ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಅಂದಾಜು 45 ರಿಂದ 50 ವರ್ಷ ಪ್ರಾಯದ ಪುರುಷನ ಮೃತದೇಹ ಇದಾಗಿದ್ದು ಬಹುತೇಕ ಕೊಳೆತ ಸ್ಥಿತಿಯಲ್ಲಿರುವ ಕಾರಣ ಗುರುತು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಮೃತದೇಹದ ಮೇಲೆ ಮಾಸಲು ಖಾಕಿ ಬಣ್ಣದ ತುಂಬುತೋಳಿನ ಟೆರಿ ಕಾಟನ್ ಶರ್ಟ್, ಕಡು ಹಸಿರು ಬಣ್ಣದ ಮತ್ತು ಸಿಮೆಂಟ್ ಬಣ್ಣದ ಚಡ್ಡಿ, ಎಡಗೈನ ಉಂಗುರ ಬೆರಳಿನಲ್ಲಿ ಬೆಳ್ಳಿಯಂತಿರುವ ಬಿಳಿಹರಳು ಉಂಗುರ ಪತ್ತೆಯಾಗಿದೆ.

ಈ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಕುಶಾಲನಗರ ನಗರ ಪೆÇಲೀಸ್ ಠಾಣೆ 08276-274333, ಪಿಎಸ್‍ಐ-9480804951, ಮಡಿಕೇರಿ ಕಂಟ್ರೋಲ್ ರೂಂ-08272, 228330 ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ಕೋರಿದೆ.