ಗೋಣಿಕೊಪ್ಪ ವರದಿ, ನ. 1: ತಿತಿಮತಿ ಗ್ರಾ.ಪಂ. ವ್ಯಾಪ್ತಿಯ ಕಾರೆಕಂಡಿ ಹಾಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಜಿ.ಪಂ. ಸದಸ್ಯೆ ಪಿ.ಆರ್. ಪಂಕಜ ಭೂಮಿಪೂಜೆ ನೆರವೇರಿ ಸಿದರು. ಆದಿವಾಸಿಗಳು ಒಂದಾಗಿ ಸೇರಿ ಪೂಜೆ ನಡೆಸಿದರು.

ನಂತರ ಮಾತನಾಡಿ, ನಮ್ಮ ಹೋರಾಟದಂತೆ ಐಟಿಡಿಪಿ ಇಲಾಖೆ ವತಿಯಿಂದ ರೂ. 20 ಲಕ್ಷ ಅನುದಾನ ದಲ್ಲಿ 2 ಕಿ.ಮೀ. ರಸ್ತೆ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿದ್ದು, ಇದರಿಂದ ಆದಿವಾಸಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಅವಕಾಶ ದೊರೆತಿದೆ ಎಂದರು.

ಈ ಸಂದರ್ಭ ತಿತಿಮತಿ ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್, ಸದಸ್ಯರಾದ ಸುಬ್ಬು, ಮುತ್ತು, ಶಾಂತಮ್ಮ, ಶ್ರೀನಿವಾಸ್, ಪಿಡಿಒ ಮಮತಾ, ಹಾಡಿ ಮುಖಂಡರಾದ ಮಲ್ಲಪ್ಪ, ರಾಜು, ಈರ, ಮಾದ, ಸ್ಥಳೀಯ ಮುಖಂಡರಾದ ವಿನಯ್, ಸತೀಶ್, ಮುಸ್ತಪಾ, ಫೈರೋಸ್ ಇದ್ದರು.