ಮಡಿಕೇರಿ, ನ. 11: ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಗ್ರೀನ್ ಸಿಟಿ ಫೋರಂನ ಹಸಿರು ಪಡೆಗೆ ಸೇರಿ ಸಾರ್ವಜನಿಕರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕೆಂದು ಅಂತರ್ರಾಷ್ಟ್ರೀಯ ಅಥ್ಲೆಟ್ ತೀತಮಾಡ ಅರ್ಜುನ್ ದೇವಯ್ಯ ಕರೆ ನೀಡಿದರು.
ಮಡಿಕೇರಿ ಸಂತ ಜೋಸೆಫರ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಸೋಮವಾರ ಗ್ರೀನ್ ಸಿಟಿ ಫೋರಂ ವತಿಯಿಂದ ನಡೆದ ಹಸಿರು ಪಡೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂತ ಜೋಸೆಫರ ವಿದ್ಯಾರ್ಥಿ ಗಳನ್ನೊಳಗೊಂಡ ಹಸಿರು ಪಡೆ ಉದ್ಘಾಟಿಸಿ ಅವರು ಮಾತನಾಡಿದರು. ಬಲವಂತವಾಗಿ ಯಾರೂ ಹಸಿರು ಪಡೆಗೆ ಸೇರಬೇಡಿ. ಇದರಿಂದ ಯಾವ ಪ್ರಯೋಜನವೂ ಆಗುವದಿಲ್ಲ. ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಮಹತ್ವದ ಕಾರ್ಯದಲ್ಲಿ ಸ್ವಯಂಪ್ರೇರಿತವಾಗಿ, ಇಷ್ಟಪಟ್ಟು ಸೇರಿ. ಮೊದಲು ತಾವು ಮತ್ತು ಪಾಲಕರಲ್ಲಿ ಜಾಗೃತಿ ಮೂಡಿಸಬೇಕು. ಅಲ್ಲಿಂದ ಜನರಲ್ಲಿ ಅರಿವು ಮೂಡಿಸಬೇಕೆಂದು ಅರ್ಜುನ್ ಜೋಸೆಫರ ವಿದ್ಯಾರ್ಥಿ ಗಳನ್ನೊಳಗೊಂಡ ಹಸಿರು ಪಡೆ ಉದ್ಘಾಟಿಸಿ ಅವರು ಮಾತನಾಡಿದರು. ಬಲವಂತವಾಗಿ ಯಾರೂ ಹಸಿರು ಪಡೆಗೆ ಸೇರಬೇಡಿ. ಇದರಿಂದ ಯಾವ ಪ್ರಯೋಜನವೂ ಆಗುವದಿಲ್ಲ. ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಮಹತ್ವದ ಕಾರ್ಯದಲ್ಲಿ ಸ್ವಯಂಪ್ರೇರಿತವಾಗಿ, ಇಷ್ಟಪಟ್ಟು ಸೇರಿ. ಮೊದಲು ತಾವು ಮತ್ತು ಪಾಲಕರಲ್ಲಿ ಜಾಗೃತಿ ಮೂಡಿಸಬೇಕು. ಅಲ್ಲಿಂದ ಜನರಲ್ಲಿ ಅರಿವು ಮೂಡಿಸಬೇಕೆಂದು ಅರ್ಜುನ್ ಫೋರಂ ಖಜಾಂಚಿ ಮೋಂತಿ ಗಣೇಶ್ ತ್ಯಾಜ್ಯ ಬಳಸಿ ಗೊಬ್ಬರ ತಯಾರಿಸುವತ್ತ ಸಾರ್ವಜನಿಕರು ಗಮನ ಹರಿಸಬೇಕೆಂದರು.
ಮಡಿಕೇರಿ ನಗರಸಭೆ ವ್ಯಾಪ್ತಿಯ ತಾಜ್ಯವನ್ನು ಬೆಟ್ಟದ ಮೇಲೆ ಅವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ಇದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಗ್ರೀನ್ ಸಿಟಿ ಫೋರಂ ಸ್ಥಾಪಕಾಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ ಹೇಳಿದರು.
ವೇದಿಕೆಯಲ್ಲಿ ಸಂತ ಜೋಸೆಫರ ವಿದ್ಯಾಸಂಸ್ಥೆ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ರೋಸಿ, ಗ್ರೀನ್ ಸಿಟಿ ಫೋರಂ ಮಾಜಿ ಅಧ್ಯಕ್ಷರಾದ ಕುಕ್ಕೇರ ಜಯ ಚಿಣ್ಣಪ್ಪ, ಅಂಬೆಕಲ್ ನವೀನ್ ಕುಶಾಲಪ್ಪ, ನಿರ್ದೇಶಕರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ, ವ್ಯಾಂಡಮ್ ದಾಮೋದರ್, ಪ್ರಜ್ಞಾ ರಾಜೇಂದ್ರ. ಅಗಸ್ತ್ಯ ಮಧುಕರ್ ಇದ್ದರು. ಪ್ರಜ್ಞಾ ರಾಜೇಂದ್ರ ನಿರೂಪಿಸಿದರು. ಚೈಯ್ಯಂಡ ಸತ್ಯ ಗಣಪತಿ ಸ್ವಾಗತಿಸಿದರು. ಮಂಗಳಾದೇವಿ ವಂದಿಸಿದರು.