ಮಡಿಕೇರಿ, ನ. 11: ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ವಿವಿಧೆಡೆ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಹಬ್ಬದ ಮಡಿಕೇರಿ, ನ. 11: ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ವಿವಿಧೆಡೆ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಹಬ್ಬದ ಗೀತೆಗಳು ಮೊಳಗಿದವು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಬದ್ರಿಯಾ ಮಸೀದಿಯ ಅಧ್ಯಕ್ಷರಾದ ಯೂಸೂಫ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಎಂ.ಎಂ. ಮಸೀದಿಯ ಹಮೀದ್ ಮದನಿಯವರು ಉದ್ಘಾಟನೆ ನೆರವೇರಿಸಿದರು. ಮುಖ್ಯ ಭಾಷಣವನ್ನು ಬದ್ರಿಯಾ ಮಸೀದಿಯ ಖತೀಬರಾದ ಉಮರ್ ಸಖಾಫಿ ಮಾಡಿದರು. ಜಾಮೀಯಾ ಮಸೀದಿಯ ಇಮಾಮ್ ಮುಹಮ್ಮದ್ ತಫ್ಸೀರ್ ರಝಾ ಅಲ್ ಖಾದಿರಿ, ಅಧ್ಯಕ್ಷರಾದ ಇಮ್ರಾನ್, ಅಮಿನ್ ಮೊಯ್ಸಿನ್, ಮನ್ಸೂರ್, ಭಟ್ಕಳ್ ಮಸೀದಿಯ ಅಲಿಯಾರ್ ಉಸ್ತಾದ್ ಮುಂತಾದ ಗಣ್ಯರು ಪಾಲ್ಗೊಂಡಿದ್ದರು. ಬಾಬಾಜಾನ್ ಉಸ್ತಾದ್ ಪ್ರಾರ್ಥಿಸಿ, ಬದ್ರಿಯಾ ಮಸೀದಿಯ ಅಬ್ದುಲ್ ಅಜೀಜ್ ಅಂಜದಿ ಸ್ವಾಗತಿಸಿದರು.
ಶನಿವಾರಸಂತೆ
ಪ್ರತಿಯೊಂದು ಧರ್ಮಗಳಲ್ಲಿ ವಿಭಿನ್ನತೆ ಇದ್ದರೂ ಧರ್ಮೋಪದೇಶ ಒಂದೇಯಾಗಿರುತ್ತದೆ ಎಂದು ಶನಿವಾರಸಂತೆ ಹನಫಿ ಜಾಮೀಯ ಮಸೀದಿ ವತಿಯಿಂದ ಹಮ್ಮಿಕೊಂಡಿದ್ದ ಈದ್ ಮಿಲಾದ್ ಆಚರಣೆ ಹಾಗೂ ಸೌಹಾರ್ದ ಸಮಾವೇಶ ಕಾರ್ಯಕ್ರಮ ದಲ್ಲಿ ಯಸಳೂರು ತೆಂಕಲಗೂಡು ಬ್ರಹನ್ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಅವರು ಪಾಲ್ಗೊಂಡು ಮಾತನಾಡಿ ದರು.
ಸೇಕ್ರೇಡ್ ಹಾರ್ಟ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ ಫಾದರ್ ಥೋಮಸ್ ಅಯನ್ಲುಂಡಿ, ಹೊಸೂರು ಮಸೀದಿಯ ಧರ್ಮಗುರು ಷಾಫಿ ಸ-ಅದಿ ಭಾಗವಹಿಸಿದ್ದರು.
ಜಾಮೀಯಾ ಮಸೀದಿ ಮಾಜಿ ಅಧ್ಯಕ್ಷ ಅಕ್ಮಲ್ ಪಾಷ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಾಮೀಯ ಮಸೀದಿ ಧರ್ಮಗುರು ಮೌಲಾನ ತೌಸೀಫ್ ಅಹಮದ್, ಬೀರಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಸಿ. ಶರತ್ ಶೇಖರ್, ಗ್ರಾ.ಪಂ. ಅಧ್ಯಕ್ಷ ಮಹಮದ್ ಗೌಸ್, ಪ್ರಮುಖರಾದ ಮಧು, ವಾಸಿಂ ಪಾಷ, ಕೆ.ಎಂ. ಅಮೀರ್, ಹುಸೇನ್ ಸಾಹೇಬ್, ಜಹೀರ್ ಮುಂತಾ ದವರಿದ್ದರು. ಈ ಸಂದರ್ಭ ಮಸೀದಿ ವತಿಯಿಂದ ಸಾಧಕರಾದ ಸೆಸ್ಕಾಂ ಸಂಸ್ಥೆಯ ಕೆ.ಎಲ್. ಗಿರೀಶ್, ಹಾಜಿ ಹಸೇನ್ ಸಾಹೇಬ್ ಅವರನ್ನು ಸನ್ಮಾನಿಸಲಾಯಿತು. ಈದ್ ಮಿಲಾದ್ ಆಚರಣೆ ಪ್ರಯುಕ್ತ ಮುಸ್ಲಿಂ ಬಾಂಧವರು ಗುಡುಗಳಲೆ ಜುಮ್ಮಾ ಮಸೀದಿಯಿಂದ ಪಟ್ಟಣದ ಮುಖ್ಯ ರಸ್ತೆ ಮೂಲಕ ಕೆ.ಆರ್.ಸಿ. ವೃತ್ತದವರೆಗೆ ಮೆರವಣಿಗೆ ನಡೆಸಿದರು.
ಸುಂಟಿಕೊಪ್ಪ
ಈದ್ಮಿಲಾದ್ ಅಂಗವಾಗಿ ವಿವಿಧ ಮಸೀದಿಗಳಲ್ಲಿ ಸೋಮವಾರ ವಿಶೇಷ ಪ್ರಾರ್ಥನೆ ಬಳಿಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮದರಸ ಮಕ್ಕಳ ದಫ್ನೊಂದಿಗೆ ಕುರಾನ್ ಸ್ಮರಣೆ ಮೂಲಕ ಮುಸ್ಲಿಂ ಬಾಂಧವರು ಮೆರವಣಿಗೆ ನಡೆಸಿದರು. ಸುನ್ನಿ ಮುಸ್ಲಿಂ ಜಮಯತ್, ಸುನ್ನಿಶಾಫಿ ಜುಮ್ಮ ಮಸೀದಿ, ನೂರಲ್ ಜುಮಾ ಮಸ್ಜೀದ್ ಗದ್ದೆಹಳ್ಳ ಹನಫಿ ಮಸೀದಿಗಳಲ್ಲಿ ಮದರಸ ಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ವಿವಿಧತೆಯಲ್ಲಿ ಏಕತೆ ಎಂಬಂತೆ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ನರಸಿಂಹ ಮುನವ್ವರಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿಗಳನ್ನು ಹಂಚಿದರು.
ಚೆಟ್ಟಳ್ಳಿ
ಸಮೀಪದ ಕಂಡಕರೆಯ ಮಸ್ಜಿದ್ ತಖ್ವಾ ಮುಸ್ಲಿಂ ಜಮಾಅತ್ ಕಮಿಟಿ ವತಿಯಿಂದ ಈದ್ ಮಿಲಾದ್ ಅನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಕಾರ್ಯಕ್ರಮಕ್ಕೆ ಧ್ವಜಾರೋಹಣ ದ ಮೂಲಕ ಮಹಲ್ ಕಮಿಟಿ ಉಪಾಧ್ಯಕ್ಷ ಗಫೂರ್ ಸಾಹೇಬ್ ಚಾಲನೆ ನೀಡಿದರು. ಕಂಡಕೆÀರೆಯಿಂದ - ಕಾಫಿ ಬೋರ್ಡ್ವರೆಗೆ ಮಿಲಾದ್ ಸಂದೇಶ ಜಾಥಾ ನಡೆಯಿತು.
ಹಯಾತುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳ ದಫ್, ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆದವು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಲ್ ಖತೀಬರಾದ ಮುಸ್ತಫಾ ಸಖಾಪಿ ವಹಿಸಿ ಮಾತನಾಡಿ ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮಹಲ್ ಕಾರ್ಯದರ್ಶಿ ಮೊಹಮ್ಮದ್ ರಪಿ ü(ಕುಟ್ಟಿ), ಸಹ ಕಾರ್ಯದರ್ಶಿ ಸುಹೈಲ್, ಖಜಾಂಜಿ ಷÀಂಸುದ್ದೀನ್, ರಜಾಕ್, ಹಂಸ, ಸರ್ಫುದ್ದೀನ್, ಆದಂ ಸಹದಿ, ಹಾರಿಸ್ ಸಖಾಫಿ ಹಾಗೂ ಸುಲೈಮಾನ್ ಸಹದಿ ಇದ್ದರು.
ನಾಪೆÉÇೀಕ್ಲು
ಸಮೀಪದ ಹಳೇ ತಾಲೂಕು ಜುಮ್ಮಾ ಮಸೀದಿಯ ವತಿಯಿಂದ ಈದ್ ಮಿಲಾದ್ ಅನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ವಿದ್ಯಾರ್ಥಿಗಳಿಂದ ದಫ್ ಮೆರವಣಿಗೆ ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಎಂ.ಎಸ್. ಮಹಮ್ಮದ್ ಅಲಿ ವಹಿಸಿದ್ದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಸಾಧಿಕ್ ಅಲಿ, ಎ.ಹೆಚ್.ಇಬ್ರಾಹಿಂ, ಎಂ.ಪಿ.ಹಸೈನಾರ್, ಎ.ಎ. ಅಬೂಬಕರ್, ಎಂ.ಎಸ್.ಇಬ್ರಾಹಿಂ, ಟಿ.ಎ.ಉಂಬಾಯಿ, ಎ.ಹೆಚ್. ಮಹಮ್ಮದ್, ಅಬ್ದುಲ್ಲ, ಎ.ಎಂ.ಸಲೀಂ ಇದ್ದರು.
ಸೋಮವಾರಪೇಟೆ
ಕಾಗಡಿಕಟ್ಟೆ ಮಸೀದಿ ವತಿಯಿಂದ ಈದ್ ಮಿಲಾದ್ ಅನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಮುಖ್ಯ ಬೀದಿಗಳಲ್ಲಿ ಈದ್ ಜಾಥಾ ನಡೆಯಿತು. ಮದ್ರಸಾದ ವಿದ್ಯಾರ್ಥಿ ಗಳು, ದಫ್ ತಂಡದವರು ಜಾಥಾದಲ್ಲಿ ಭಾಗವಹಿಸಿದ್ದರು.
ಧರ್ಮಗುರು ಹಂಸ ರೆಹಮಾನ್, ಜಮಾಅತ್ ಅಧ್ಯಕ್ಷ ಅಬ್ದುಲ್ ರೆಹಮಾನ್, ಉಪಾಧ್ಯಕ್ಷ ಯೂಸುಫ್, ಕಾರ್ಯದರ್ಶಿ ಖಾದರ್, ಸಲಹೆ ಗಾರರಾದ ಇಬ್ರಾಹಿಂ ಸೇರಿದಂತೆ ಇತರರು ಉಪಸ್ಥಿತರಿದ್ದರು.