ಸುಂಟಿಕೊಪ್ಪ, ನ. 11: ರಾಷ್ಟ್ರ ಪ್ರಶಸ್ತಿ ವಿಜೇತ ಬೇಸೂರು ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ಸುರೇಶ್ ಮರಕಾಲ ಅವರಿಗೆ ಕೊಡಗು ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕೂಡಿಗೆ ಡಯಟ್ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್, ಡಯಟ್ ಉಪನ್ಯಾಸಕ ಸಿದ್ದೇಶ್, ಸಂಘದ ರಾಜ್ಯ ವಿಭಾಗ ಸಂಘಟನಾ ಕಾರ್ಯದರ್ಶಿ ಎಂ.ರಂಗಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಹೆಚ್.ಜಿ. ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ದಯಾನಂದ ಪ್ರಕಾಶ, ತಾಲೂಕು ಕಾರ್ಯದರ್ಶಿ ನವೀನ್, ವೀರಾಜಪೇಟೆ ಸದಸ್ಯ ನೂತನ್ ಕುಮಾರ್, ಮಡಿಕೇರಿ ಸಂಘದ ಮುನೀರ್, ಸಮಾಜ ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳಾದ ರಮೇಶ್, ಅರುಣ್, ಸತ್ಯನಾರಾಯಣ, ತಿಪ್ಪೆಸ್ವಾಮಿ ಇತರರು ಇದ್ದರು.