ಮಡಿಕೇರಿ, ನ. 11: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳವು ಮಡಿಕೇರಿ, ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿ ಸಂಸ್ಥೆ ನಡೆಸುತ್ತಿದ್ದು, ಈ ತರಬೇತಿ ಸಂಸ್ಥೆಯ ಮೂಲಕ ಸಹಕಾರ ಸಂಘ-ಸಂಸ್ಥೆ, ಸಹಕಾರ ಇಲಾಖೆ, ಸಹಕಾರ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಹಾಗೂ ಖಾಸಗಿ ಅಭ್ಯರ್ಥಿಗಳಿಗೆ “6 ತಿಂಗಳು/ 180 ದಿನಗಳ” ಅವಧಿಯ “ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್” ತರಬೇತಿಯು 2020ರ ಜನವರಿ 1 ರಿಂದ ಪ್ರಾರಂಭವಾಗಲಿದೆ. ಈ ತರಬೇತಿಯನ್ನು ಪಡೆಯಲಿಚ್ಛಿಸುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ತರಬೇತಿಯನ್ನು ಪಡೆಯಲಿಚ್ಛಿಸುವ ಅಭ್ಯರ್ಥಿಗಳು ಸಹಕಾರ ಸಂಘ, ಸಹಕಾರ ಇಲಾಖೆ, ಸಹಕಾರ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ವೇತನ ಪಡೆಯುವ ನೌಕರರಾಗಿರಬೇಕು. ಖಾಸಗಿ ಅಭ್ಯರ್ಥಿಗಳಿಗೆ ನಿಯಮಿತವಾಗಿ ಅವಕಾಶವನ್ನು ಕಲ್ಪಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶೇ. 18 ರಷ್ಟು ಸ್ಥಾನಗಳನ್ನು ತರಬೇತಿಗಾಗಿ ಮೀಸಲಿರಿಸಲಾಗಿರಬೇಕು. ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ, ಸಹಕಾರ ಸಂಘಗಳಲ್ಲಿ ಒಂದು ವರ್ಷಕ್ಕಿಂತ ಮೇಲ್ಪಟ್ಟು ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯೂ ಸಹ ತರಬೇತಿ ಪಡೆಯಲು ಅರ್ಹರಾಗಿರುತ್ತಾರೆ. ಇಂತಹ ಅಭ್ಯರ್ಥಿಗಳು ಮಾತ್ರ ತರಬೇತಿಗೆ ಅರ್ಜಿ ಸಲ್ಲಿಸಬಹುದು. ಈ ತರಬೇತಿಯಲ್ಲಿ ಅಭ್ಯರ್ಥಿಗಳಿಗೆ ಮಾಹೆಯಾನ ರೂ. 400 ಗಳ ಶಿಷ್ಯ ವೇತನವನ್ನು ನೀಡಲಾಗುವದು.

ನಿರುದ್ಯೋಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ “6 ತಿಂಗಳು/180 ದಿನಗಳ” ವಿಶೇಷ “ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್” ತರಬೇತಿಯನ್ನು ಸಹ ನೀಡಲಾಗುವದು. ಈ ವರ್ಗಕ್ಕೆ ಸೇರಿದ ಅಭ್ಯರ್ಥಿಗಳ ಪಟ್ಟಿಯನ್ನು ಆಯಾಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ತರಿಸಿಕೊಳ್ಳಲಾಗುವದು ಮತ್ತು ಈ ವರ್ಗದ ಅಭ್ಯರ್ಥಿಗಳು ಆಯಾಯ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರ ಮೂಲಕ ಅಥವಾ ವ್ಯವಸ್ಥಾಪಕ ನಿರ್ದೇಶಕರು, ಮಡಿಕೇರಿ ಹಾಗೂ ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಇವರ ಮೂಲಕ ಅರ್ಜಿಗಳನ್ನು ತಾ. 30 ರೊಳಗೆ ಸಲ್ಲಿಸಬಹುದು. ಅಭ್ಯರ್ಥಿಗಳು ಕನಿಷ್ಟ ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ವಯೋಮಿತಿ 18 ವರ್ಷಗಳಾಗಿರಬೇಕು. ಗರಿಷ್ಠ 30 ವರ್ಷಗಳು ಮೀರಿರಬಾರದು. ಈ ಅಭ್ಯರ್ಥಿಗಳಿಗೆ ಮಾಹೆಯಾನ ರೂ. 500 ಶಿಷ್ಯ ವೇತನವನ್ನು ನೀಡಲಾಗುವದು.

ಪ್ರಸಕ್ತ ತರಬೇತಿ ಅಧಿವೇಶನ 2020ರ ಜನವರಿ 1 ರಿಂದ ಪ್ರಾರಂಭವಾಗುತ್ತದೆ. ಡಿ.ಸಿ.ಎಂ. ತರಬೇತಿಯ ಅರ್ಜಿ ಫಾರಂ ಮತ್ತು ವಿವರಣಾ ಪುಸ್ತಕವನ್ನು ತರಬೇತಿ ಸಂಸ್ಥೆಯಿಂದ ಪಡೆಯಬಹುದು. ಅರ್ಜಿ ಮತ್ತು ವಿವರಣಾ ಪುಸ್ತಕದ ಶುಲ್ಕ ರೂ. 75 ಗಳನ್ನು ನಗದಾಗಿ ಪಾವತಿಸಿ ತರಬೇತಿ ಸಂಸ್ಥೆಯಲ್ಲಿ ಅಥವಾ ಮಡಿಕೇರಿ ಜಿಲ್ಲಾ ಸಹಕಾರ ಯೂನಿಯನ್ ಕಚೇರಿಯಲ್ಲಿ ಪಡೆಯಬಹುದು. ಅಂಚೆ ಮೂಲಕ ಪಡೆಯಲು ಇಚ್ಛಿಸುವವರು ರೂ. 125 ಡಿ.ಡಿ. ಮೂಲಕ ಪಾವತಿಸಿ ಪಡೆಯಬಹುದಾಗಿದೆ. ತರಬೇತಿಗೆ ಅರ್ಜಿ ಸಲ್ಲಿಸಲು ತಾ. 30 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡಿ ಮಡಿಕೇರಿ ತರಬೇತಿ ಸಂಸ್ಥೆಯ ಪ್ರಾಂಶುಪಾಲರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂ. 08272-228437, 8762110952, 9535250704, 9449245024 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್‍ನ ಪ್ರಾಂಶುಪಾಲೆ ಡಾ. ರೇಣುಕಾ ಆರ್.ಎಸ್. ತಿಳಿಸಿದ್ದಾರೆ.