ಕುಶಾಲನಗರ, ನ. 11: ಕುಶಾಲನಗರ ಕಾವೇರಿ ನದಿಯಲ್ಲಿ ಮೊಸಳೆಯೊಂದು ಕಾಣಿಸಿಕೊಂಡಿದೆ. ಕೊಪ್ಪ ಅರಣ್ಯ ತಪಾಸಣಾ ಗೇಟ್ ಬಳಿ ಕಾವೇರಿ ನದಿ ಸೇತುವೆ ಕೆಳಭಾಗದಲ್ಲಿ ಮಧ್ಯಮ ಗಾತ್ರದ ಮೊಸಳೆಯೊಂದು ಸೋಮವಾರ ಮಧ್ಯಾಹ್ನ ವೇಳೆ ಕಲ್ಲು ಬಂಡೆಯೊಂದರ ಮೇಲೆ ಕಂಡುಬಂದಿದ್ದು ರಸ್ತೆಯಲ್ಲಿ ತೆರಳುತ್ತಿದ್ದ ನಾಗರಿಕರಲ್ಲಿ ಅಚ್ಚರಿ ಮೂಡಿಸಿದೆ.

ಮೊಸಳೆ ಸಂಜೆ ತನಕ ಅಲ್ಲೇ ಠಿಕಾಣಿ ಹೂಡಿದ ಹಿನ್ನಲೆಯಲ್ಲಿ ಹೆದ್ದಾರಿ ರಸ್ತೆಯ ಸೇತುವೆ ಮೇಲೆ ಜನಸಂದಣಿ ಅಧಿಕವಾದ ಹಿನ್ನಲೆಯಲ್ಲಿ ವಾಹನ ಸಂಚಾರಕ್ಕೆ ಕೂಡ ಅಡ್ಡಿಯುಂಟಾಯಿತು.