ಈ ವರ್ಷ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಅಕ್ಟೋಬರ್ ತಿಂಗಳ ಕೊನೆಯವರೆಗೂ ಮಳೆ ಮತ್ತು ಮೊಡ ಕವಿದ ವಾತಾವರಣ ಇದ್ದುದುರಿಂದ ಬಿಳಿ ಕಾಂಡ ಕೊರಕದ ಕಾಟ ತಡವಾಗಿದೆ. ನವೆಂಬರ್ ಮೊದಲವಾರದಿಂದ ಬಿಸಲಿನ ವಾತಾವರಣ ಇರುವದರಿಂದ ಕಾಂಡ ಕೊರಕ ಹೆಚ್ಚಾಗಿ ಹೊರಬಂದು ಮೊಟ್ಟೆ ಇಡಲು ಪ್ರಾರಂಬಿಸಿದೆ. ಆದುದರಿಂದ ಅರೇಬಿಕಾ ಕಾಫಿಯ ಎಲ್ಲಾ ಬೆಳೆಗಾರಿಗೂ ಈ ಕೂಡಲೇ ಬೋರರ್ ಪೀಡಿತ ಎಲ್ಲಾ ಗಿಡಗಳನ್ನು ಕಿತ್ತು ನಾಶಪಡಿಸಬೇಕು. ಈ ಕೀಟದ ಹತೋಟಿ ಕ್ರಮಗಳಾದ. ಶೇ. 10 ಸುಣ್ಣದ ದ್ರಾವಣದ (20 ಕೆ.ಜಿ. ಸ್ಪ್ರೇ ಸುಣ್ಣ ಒಂದು ಬ್ಯಾರಲಿಗೆ ಜೊತೆಗೆ 200 ಮಿ.ಲಿ. ಅಂಟು ದ್ರಾವಣ) ಸಿಂಪರಣೆಯನ್ನಾಗಲೀ ಅಥವಾ ಕೀಟನಾಶಕ ಬಳಕೆಯನ್ನಾಗಲೀ ಕ್ಲೋರ್ಫಿರಿಪಾಸ್ 20 ಇಸಿ 600 ಮಿ.ಲಿ. ಪ್ರತಿ ಬ್ಯಾರಲಿಗೆ ಜೊತೆಗೆ 200 ಮಿ.ಲಿ. ಅಂಟು ದ್ರಾವಣ ಅಥವ ಕ್ಲೋರ್ಫಿರಿಪಾಸ್ 50 ಇಸಿ + ಸೈಪರ್ಮೆಥ್ರಿನ್ 5 ಇಸಿ @ 240 ಮಿ.ಲಿ. ಪ್ರತಿ ಬ್ಯಾರಲಿಗೆ ಜೊತೆಕೆ 200 ಮೀ. ಲಿ. ಅಂಟು ದ್ರಾವಣ ಸಿಂಪಡಿಸಬೇಕು. ಅದಲ್ಲದೆ, ಈ ಪ್ರಸಕ್ತ ಕಾಲ (ನವೆಂಬರ್ ತಿಂಗಳ ಮೊದಲ ವಾರಗಳಲ್ಲಿ) ಈ ಕೀಟದ ಫೆರಾಮೋನ್ ಟ್ರಾಪ್ಗಳನ್ನು (ಲಿಂಗಾರ್ಷಕ ಬಲೆ) ಬಳಸಬಹುದು ಎಂದು ಚೆಟ್ಟಳ್ಳಿಯ ಕಾಫಿ ಸಂಶೋಧನಾ ಕೇಂದ್ರ ಮಾಹಿತಿ ನೀಡಿದೆ.