ಗೋಣಿಕೊಪ್ಪ ವರದಿ, ನ. 10: ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ಮುಂದಾಳತ್ವದಲ್ಲಿ ಹೆಗ್ಗಡೆ ಸಮಾಜದ ವತಿಯಿಂದ ಕಾವೇರಿ ಪೂಜೆ ನಡೆಯಿತು.
ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಚಂಗಚಂಡ ಕಟ್ಟಿ ಕಾವೇರಪ್ಪ, ಉಪಾಧ್ಯಕ್ಷ ಸರಾ ಚೆಂಗಪ್ಪ, ಖಜಾಂಜಿ ಪಾನಿಕುಟ್ಟೀರ ಕುಟ್ಟಪ್ಪ, ನಿರ್ದೇಶಕರಾದ ಪಳಂಗಪ್ಪ, ಸುನ, ಮಂಜುನಾಥ್, ಚರ್ಮಂಡ ಪೂವಯ್ಯ ಇದ್ದರು. ಈ ಸಂದರ್ಭ ಕೊಡವ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾಗಿರುವ ಪಡಿಞರಂಡ ಪ್ರಭುಕುಮಾರ್ ಅವರನ್ನು ಸನ್ಮಾನಿಸಲಾಯಿತು.