ಮಡಿಕೇರಿ, ನ. 9 : ದೇಶ ವ್ಯಾಪ್ತಿಯಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗುವದರೊಂದಿಗೆ ಆತಂಕಕ್ಕೆ ಎಡೆಯಾಗಿದ್ದ ಅಯೋಧ್ಯೆ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಕೊಡಗಿನ ಜನತೆ ಶಾಂತತೆಯಿಂದ ಸ್ವೀಕರಿಸಿದರು.ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಕೊಡಗಿನ ಎಲ್ಲೆಡೆ ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತಾದರೂ, ಕೊಡಗಿನಾದ್ಯಂತ ಜನತೆ ಯಾವದೇ ಗೊಂದಲಗಳಿಗೆ ಅವಕಾಶ ನೀಡದೆ ಶಾಂತಿ ಸುವ್ಯವಸ್ಥೆ ಪಾಲಿಸಿದರು.ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಜನರಲ್ ತಿಮ್ಮಯ್ಯ ವೃತ್ತ, ಇಂದಿರಾಗಾಂಧಿ ವೃತ್ತಗಳಲ್ಲಿ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿತ್ತು. ತೀರ್ಪಿನ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ, ಎರಡನೇ ಶನಿವಾರವಾದ್ದರಿಂದ ಸರ್ಕಾರಿ ಕಚೇರಿಗಳಿಗೆ ರಜೆ ಇದ್ದ ಕಾರಣ ಮಾತ್ರವಲ್ಲದೆ ನಿಷೇಧಾಜ್ಞೆ ಜಾರಿಯಿದ್ದರಿಂದ ಜನ ಸಂದಣಿ ನಗರ ವ್ಯಾಪ್ತಿಯಲ್ಲಿ ಕಡಿಮೆಯಾಗಿತ್ತು. ಸರ್ಕಾರಿ, ಖಾಸಗಿ ಬಸ್‍ಗಳ, ಆಟೋ ರಿಕ್ಷಾಗಳ ಸಂಚಾರವಿತ್ತಾದರೂ, ಜನರ ಓಡಾಟ ವಿರಳವಾಗಿತ್ತು.ನಾಪೆÇೀಕ್ಲು : ಸೆಕ್ಷನ್ 144ನೇ ಶಾಲಾ ಕಾಲೇಜುಗಳಿಗೆ ರಜೆ ನೀಡಿರುವದನ್ನು ಹೊರತುಪಡಿಸಿದರೆ ನಾಪೆÇೀಕ್ಲು ಪಟ್ಟಣ ಸೇರಿದಂತೆ ನಾಪೆÇೀಕ್ಲು ವ್ಯಾಪ್ತಿಯಲ್ಲಿ ಜನ ಜೀವನ ಎಂದಿನಂತಿತ್ತು. ಈದ್ ಮಿಲಾದ್ ಹಬ್ಬದ ಕಾರಣ ಪಟ್ಟಣದಲ್ಲಿ ಜನ ಜಂಗುಳಿ ಹೆಚ್ಚಾಗಿ ಕಂಡುಬಂತು. ತೀರ್ಪು ಏನಾದರೂ ಬರಲಿ ನಾವೆಲ್ಲ ಒಟ್ಟಾಗಿ ಜೀವಿಸುವ ಎನ್ನುವಂತಹ ವಾತಾವರಣ ಕಂಡುಬಂತು. ಪೆÇಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

ಕೂಡಿಗೆ : ಕೂಡಿಗೆ, ಕೂಡು ಮಂಗಳೂರು ವ್ಯಾಪ್ತಿಯಲ್ಲಿ ಹಾಗೂ ಕೊಡಗಿನ ಗಡಿಭಾಗ ಶಿರಂಗಾಲ, ಹೆಬ್ಬಾಲೆ ಗ್ರಾಮಗಳ ವ್ಯಾಪ್ತಿಯಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಸೆಕ್ಷನ್ 144 ಇದ್ದ ಹಿನ್ನೆಲೆಯಲ್ಲಿ ಯಾವದೇ ವಿಜಯೋತ್ಸವ ಕಾರ್ಯಕ್ರಮಗಳು ನಡೆಯದಂತೆ, ನಾಲ್ಕೈದು ಜನರ

(ಮೊದಲ ಪುಟದಿಂದ) ಗುಂಪು ನಿಲ್ಲದಂತೆ ನಾಲ್ಕು ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿಯೂ ಭಾರಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

*ಗೋಣಿಕೊಪ್ಪಲು : ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಶನಿವಾರ ಪಟ್ಟಣದಲ್ಲಿನ ಜನಜೀವನದಲ್ಲಿ ತುಸು ವ್ಯತ್ಯಯವಾಗಿತ್ತು. ಶಾಲಾ ಕಾಲೇಜಿಗೆ ರಜೆ ನೀಡಿದ್ದರಿಂದ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸಂದಣಿ ಕಂಡು ಬರಲಿಲ್ಲ. ಸಾರಿಗೆ ಮತ್ತು ಖಾಸಗಿ ಬಸ್‍ಗಳ ಓಡಾಟ ಎಂದಿನಂತಿತ್ತು.

ಜಿಲ್ಲಾ ಪೊಲೀಸ್ ಮೀಸಲು ಪಡೆ ವಾಹನ ಬಸ್ ನಿಲ್ದಾಣದಲ್ಲಿಯೇ ಬೀಡುಬಿಟ್ಟಿತ್ತು. ಜನ ಗುಂಪು ಸೇರುವದಾಗಲಿ, ಪರ ವಿರೋಧ Zರ್ಚೆಗಳಾಗಲಿ ನಡೆಯಲಿಲ್ಲ.

ಬಾಳೆಲೆ, ತಿತಿಮತಿ, ಪೊನ್ನಂಪೇಟೆ, ಹುದಿಕೇರಿ, ಶ್ರೀಮಂಗಲ, ಕುಟ್ಟ ಮೊದಲಾದ ಕಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಸೋಮವಾರಪೇಟೆ ದೇಗುಲಗಳಲ್ಲಿ ಪೂಜೆ

ಅಯೋಧ್ಯೆ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಸ್ವಾಗತಿಸಿ ಭಾರತೀಯ ಜನತಾ ಪಾರ್ಟಿ ಮತ್ತು ಹಿಂದೂಪರ ಸಂಘಟನೆಗಳ ವತಿಯಿಂದ ಪಟ್ಟಣದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಭಾರತೀಯ ಜನತಾ ಪಾರ್ಟಿಯ ವತಿಯಿಂದ ಪಟ್ಟಣದ ಶ್ರೀಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ ನೆರವೇರಿಸಲಾಯಿತು. ನಂತರ ಪಕ್ಷದ ಕಾರ್ಯಕರ್ತರು ಹಾಗೂ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳು ಇಲ್ಲಿನ ಶ್ರೀರಾಮಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಮಾಜೀ ವಿಧಾನ ಪರಿಷತ್ ಸದಸ್ಯ ಎಸ್.ಜಿ. ಮೇದಪ್ಪ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಮನುಕುಮಾರ್ ರೈ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಡಿ. ಮಂಜುನಾಥ್, ಪ.ಪಂ. ಸದಸ್ಯರಾದ ಬಿ.ಆರ್. ಮಹೇಶ್, ಪಿ.ಕೆ. ಚಂದ್ರು, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಕಿಬ್ಬೆಟ್ಟ ಮಧು, ಪಕ್ಷದ ಪ್ರಮುಖರಾದ ಹರಗ ಉದಯ, ರಾಮಕೃಷ್ಣ, ಶರತ್‍ಚಂದ್ರ, ನೆಹರು, ದೀಪಕ್, ಚಿನ್ನಣ್ಣ, ಪ್ರಮೋದ್, ಪಿ.ಮಧು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಹಿಂದೂ ಜಾಗರಣಾ ವೇದಿಕೆಯಿಂದ ಪಟ್ಟಣದ ಆಂಜನೇಯ ದೇವಾಲಯ, ಗಣಪತಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪ್ರಮುಖರಾದ ಎಂ.ಬಿ. ಉಮೇಶ್, ಸಿ.ಸಿ. ನಂದ, ಬನ್ನಳ್ಳಿ ಗೋಪಾಲ್, ವೆಂಕಪ್ಪ, ರಂಗಸ್ವಾಮಿ, ರಾಘವ, ಆನಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕರಸೇವಕರಿಂದ: 1990ರ ಡಿಸೆಂಬರ್ 6 ರಂದು ಅಯೋಧ್ಯೆಗೆ ತೆರಳಿ ಕರಸೇವೆ ಮಾಡಿದ್ದ ನಾಲ್ವರು ಕರಸೇವಕರು ಇಲ್ಲಿನ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

ಸೂಕ್ತ ಬಂದೋಬಸ್ತ್: ಪಟ್ಟಣದಲ್ಲಿ ಶನಿವಾರ ಮಧ್ಯರಾತ್ರಿವರೆಗೆ ಸೆಕ್ಷನ್ 144 ಜಾರಿಯಲ್ಲಿದ್ದು, ಕೆ.ಎಸ್.ಆರ್.ಪಿ. ಒಂದು ತುಕಡಿ, 4 ಡಿ.ಎ.ಆರ್, ಹೊರಜಿಲ್ಲೆ ಸೇರಿದಂತೆ 80 ಜನ ಪೊಲೀಸರು, 2 ಸರ್ಕಲ್ ಇನ್ಸ್‍ಪೆಕ್ಟರ್, 4 ಪಿ.ಎಸ್.ಐ.ಗಳು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದಾರೆ. ಪಟ್ಟಣದ ಆಯಾಕಟ್ಟಿನ ಸ್ಥಳಗಳಲ್ಲಿ ಬಂದೋಬಸ್ತ್ ಕಲ್ಪಿಸಲಾಗಿದೆ. ಅಯೋಧ್ಯೆ ತೀರ್ಪು ಪ್ರಕಟವಾದ ಹಿನ್ನೆಲೆ ಇಂದು ಬೆಳಗ್ಗಿನಿಂದಲೇ ಪೊಲೀಸರು, ಹೋಂ ಗಾರ್ಡ್‍ಗಳು ಆಯಕಟ್ಟಿನ ಸ್ಥಳದಲ್ಲಿ ಬಂದೋಬಸ್ತ್ ಕಲ್ಪಿಸಿದ್ದರು.

ವೀರಾಜಪೇಟೆ : ವೀರಾಜಪೇಟೆ ಪಟ್ಟಣ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳಲ್ಲು ಶಾಂತ ವಾತಾವರಣವಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಕೆ.ಎಸ್.ಆರ್.ಪಿ.ಯ ಒಂದು ತುಕಡಿ, ಜಿಲ್ಲಾ ಸಶಸ್ತ್ರ ಪಡೆಯ ಒಂದು ತುಕಡಿ, ಹಾಸನ ಹಾಗೂ ಚಾಮರಾಜನಗರದಿಂದ 30ಮಂದಿ ಪೊಲೀಸರು, ಸ್ಥಳೀಯವಾಗಿ 60 ಮಂದಿ ಪೊಲೀಸ್ ಸಿಬ್ಬಂದಿಗಳು, 20ಮಂದಿ ಮಹಿಳಾ ಪೊಲೀಸ್ ಸಿಬ್ಬಂದಿಗಳು ಪೊಲೀಸ್ ಬಂದೋಬಸ್ತ್‍ನಲ್ಲಿ ನಿರತರಾಗಿದ್ದರು.

ಖಾಸಗಿ ಬಸ್ಸುಗಳು, ಸರಕಾರಿ ಬಸ್ಸುಗಳು, ಆಟೋ ರಿಕ್ಷಾಗಳು ಎಂದಿನಂತೆ ಸಂಚರಿಸಿದರೂ ಜನಸಂಖ್ಯೆ ವಿರಳವಾಗಿತ್ತು. ಸಾರ್ವಜನಿಕ ಆಸ್ಪತ್ರೆ ಎಂದಿನಂತೆ ಕಾರ್ಯ ನಿರ್ವಹಿಸಿತು. ವೀರಾಜಪೇಟೆ ಪಟ್ಟಣದಲ್ಲಿಯೂ ಎಂದಿನಂತೆ ಜನ ಸಂಚಾರ ಇರಲಿಲ್ಲ.

ಶನಿವಾರಸಂತೆ: ಶನಿವಾರಸಂತೆ ಹೋಬಳಿಯಲ್ಲಿ ಶುಕ್ರವಾರ ಅಯೋಧ್ಯೆ ತೀರ್ಪಿನ ಹಿನ್ನೆಲೇ ವ್ಯಾಪ್ತಿಯಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಸೆಕ್ಷನ್ 144 ಇರುವ ಹಿನ್ನೆಲೆಯಲ್ಲಿ ಯಾವದೇ ಕಾರ್ಯಕ್ರಮಗಳು ನಡೆಯದ ರೀತಿಯಲ್ಲಿ ಶನಿವಾರಸಂತೆ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್, ರಾಮಮಂದಿರ, ಜಮಿಯಾ ಮಸೀದಿ, ಗುಡುಗಳಲೆ ಮಸೀದಿ, ಗುಂಡೂರಾವ್ ಬಡಾವಣೆ ಮಸೀದಿ, ಗಣಪತಿ ದೇವಸ್ಥಾನ, ಬ್ಯಾಡಗೊಟ್ಟ ಮಸೀದಿ, ಚರ್ಚ್, ಕೊಡ್ಲಿಪೇಟೆ ವಿಭಾಗದ ಕೊಡ್ಲಿಪೇಟೆ ಮಸೀದಿ, ಶಾಂತಪುರ ಚೆಕ್‍ಪೋಸ್ಟ್ ಎಎಸ್‍ಐ ಮತ್ತು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಶನಿವಾರಸಂತೆ ಠಾಣಾಧಿಕಾರಿ ಕೃಷ್ಣನಾಯಕ್ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.