ಮಡಿಕೇರಿ, ನ. 10: ನಾಲ್ಕು ವರ್ಷಗಳ ಹಿಂದೆ ಟಿಪ್ಪು ಜಯಂತಿ ಆಚರಣೆ ವೇಳೆ ಸಂಭವಿಸಿದ ದೊಂಬಿಯಲ್ಲಿ ಹುತಾತ್ಮರಾದ ವಿ.ಹಿಂ.ಪ. ಮುಖಂಡ ಡಿ.ಎಸ್. ಕುಟ್ಟಪ್ಪ ಅವರ ಸಂಸ್ಮರಣೆಯೊಂದಿಗೆ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳ ಮತ್ತು ವಿವಿಧ ಸಂಘಟನೆಗಳಿಂದ ಇಲ್ಲಿನ ಓಂಕಾರೇಶ್ವರ ದೇವಾಲಯದಲ್ಲಿ ಶಾಂತಿ ಪೂಜೆ ಏರ್ಪಡಿಸಲಾಗಿತ್ತು.

ವಿ.ಹಿಂ.ಪ. ಕಾರ್ಯದರ್ಶಿ ಡಿ. ನರಸಿಂಹ, ಬಜರಂಗದಳ ಸಂಚಾಲಕ ಕೆ.ಹೆಚ್. ಚೇತನ್, ಪ್ರಮುಖರಾದ ಬಿ.ಕೆ. ಅರುಣ್ ಕುಮಾರ್, ಧನಂಜಯ್, ಮನು ಮಂಜುನಾಥ್, ಡಿ.ಹೆಚ್. ಮೇದಪ್ಪ, ಮನುಕುಮಾರ್ ರೈ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.

ವೀರಾಜಪೇಟೆ: ಟಿಪ್ಪು ಜಯಂತಿ ವೇಳೆ ಕೊಡಗಿನಲ್ಲಿ ನಡೆದ ಕೋಮು ಗಲಭೆಯಲ್ಲಿ ಮಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೇವಪಂಡ ಕುಟ್ಟಪ್ಪ ಅವರಿಗೆ ಸಂಘಟನೆಗಳ ಪರವಾಗಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಲಾಯಿತು.

ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ವೀರಾಜಪೇಟೆ ಆಶ್ರಯದಲ್ಲಿ ನಗರದ ಅಪ್ಪಯ್ಯ ಸ್ವಾಮಿ ರಸ್ತೆಯ ಶ್ರೀ ಬಾಲಾಂಜನೇಯ ದೇಗುಲದಲ್ಲಿ ವಿಶೇಷ ಶಾಂತಿ ಪೂಜೆ ಮತ್ತು ಶ್ರದ್ಧಾಂಜಲಿ ನಡೆಯಿತು.

ಕಾರ್ಯಕ್ರಮದಲ್ಲಿ ಭಜರಂಗದಳ ಸಂಚಾಲಕ್ ವಿವೇಕ್ ರೈ, ನಗರ ಸಹ ಸಂಚಾಲಕ್ ಶಿನೋಜ್, ಅಖಾಢ ಪ್ರಮುಖ ಕಿಶನ್, ಪ.ಪಂ. ಸದಸ್ಯ ಹರ್ಷವರ್ಧನ್, ಸತೀಶ್, ದರ್ಶನ್ ಮತ್ತು ರಚನ್ ಪೂಜಾರಿ ಮೊದಲಾದವರು ಹಾಜರಿದ್ದರು.

ಸೋಮವಾರಪೇಟೆ: ದೇವಪಂಡ ಕುಟ್ಟಪ್ಪ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಮಾದಾಪುರದಲ್ಲಿ ನಡೆಯಿತು.

ಹಿಂದೂ ಜಾಗರಣಾ ವೇದಿಕೆ, ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದ ಆಶ್ರಯದಲ್ಲಿ ಮಾದಾಪುರದ ಗಣಪತಿ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಿದ ನಂತರ ದೇವಾಲಯದ ಸಮುದಾಯ ಭವನದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಬೌದ್ಧಿಕ್ ಪ್ರಮುಖ್ ಕೆ.ಎಸ್. ಪದ್ಮನಾಭ್, ಕುಟ್ಟಪ್ಪ ಅವರ ಪತ್ನಿ ಚಿಣ್ಣವ್ವ, ಜಿಲ್ಲಾ ಹಿಂದೂ ಜಾಗರಣಾ ವೇದಿಕೆ ತಾಲೂಕು ಕಾರ್ಯದರ್ಶಿ ಎ. ಸುನಿಲ್, ವಿಶ್ವ ಹಿಂದೂ ಪರಿಷತ್ ಮಾದಾಪುರ ಘಟಕಾಧ್ಯಕ್ಷ ಸುಭಾಷ್ ಕನ್ನಿಗಂಡ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಾಗರಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಸುಭಾಷ್, ಜಿಲ್ಲಾ ಕಾರ್ಯದರ್ಶಿ ಮಹೇಶ್, ಜಿಲ್ಲಾ ಸಂಚಾಲಕ ಕಡಗದಾಳು ಗಣೇಶ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಮುಖ್ ಚೇತನ್, ತಾಲೂಕು ಅಧ್ಯಕ್ಷ ಎಂ.ಬಿ. ಉಮೇಶ್, ಗ್ರಾ.ಪಂ. ಸದಸ್ಯ ನಾಪಂಡ ಉಮೇಶ್ ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಜರಿದ್ದರು.