ಗುಡ್ಡೆಹೊಸೂರು, ನ. 10: ಇಲ್ಲಿನ ಡಾ|| ಶ್ರೀ ಶಿವಕುಮಾರ್ ಮಹಾಸ್ವಾಮಿಗಳ ವೃತ್ತಬಳಿ ಜಲ್ಲಿ ತುಂಬಿದ ಟಿಪ್ಪರ್ (ಕೆ.ಎ. 12 3132) ಮತ್ತು ಬೈಕ್ (ಕೆ.ಎ.12 6310) ನಡುವೆ ಡಿಕ್ಕಿಯಾಗಿ ಬೈಕ್‍ನ ಮುಂಬಾಗ ಪುಡಿಯಾಗಿದೆ. ಸುಣ್ಣದಕೇರಿ ಗ್ರಾಮದ ನಿವಾಸಿ; ಮಡಿಕೇರಿಯ ಪ್ರವಾಸೋದ್ಯಮ ಇಲಾಖೆಯ ವಾಹನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಶ್ವಥ್ ಅವರು ಡೈರಿಗೆ ಹಾಲು ನೀಡಲು ಬರುತ್ತಿದ್ದ ಸಂದರ್ಭ ರಸ್ತೆಯನ್ನು ದಾಟುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಲಾರಿ ಚಾಲಕ ಚಿಕ್ಕಣ್ಣ ಭಾರೀ ಅನಾಹುತ ನಡೆಯುವದನ್ನು ತಪ್ಪಿಸಿದ್ದಾರೆ. ಅಶ್ವಥ್ ಅವರ ಕೈ ಮತ್ತು ಕಾಲಿಗೆ ಪೆಟ್ಟಾಗಿದೆ. ಕುಶಾಲನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.