ಮಡಿಕೇರಿ, ನ.10: ತಲಕಾವೇರಿಯಲ್ಲಿ ಮುಳ್ಳೇರಿಯ ಮಂಡಲ ಹಾಗೂ ಕೊಡಗು ವಲಯದ ವತಿಯಿಂದ ಕುಂಕುಮಾರ್ಚನೆ ಮತ್ತು ಲಕ್ಷ್ಮೀ ನರಸಿಂಹ ಕರಾವಲಂಬ ಪಾರಾಯಣ ಅಧ್ಯಕ್ಷೆ ಈಶ್ವರಿ ಬೇರ್ಕಡವು ಮತ್ತು ಕುಸುಮ ಪೆರ್ಮುಕ ನೇತೃತ್ವದಲ್ಲಿ ನೆರವೇರಿತು. ಗುರುವಂದನೆ, ಗೋವಂದನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.
ಅಧ್ಯಕ್ಷೆ ಈಶ್ವರಿ ಮಾಹಿತಿ ನೀಡಿದರು. 50 ಮಾತೆಯರು ಅರ್ಚನೆ ಮತ್ತು ಲಕ್ಷ್ಮೀ ನರಸಿಂಹ ಕರಾವಲಂಬ ಪಾರಾಯಣ ನಡೆಸಿದರು. ಕೊಡಗು ವಲಯದ ಅಧ್ಯಕ್ಷ ನಾರಾಯಣ ಮೂರ್ತಿ ತಲಕಾವೇರಿಯ ನಾರಾಯಣ ಆಚಾರ್ ಏಕೀಕರಣ ರಂಗದ ಮುಖಂಡರು ಹಾಜರಿದ್ದರು.
ತಲಕಾವೇರಿಯಲ್ಲಿ ನಡೆದ ಕುಂಕುಮಾರ್ಚನೆ ಕಾರ್ಯಕ್ರಮದಲ್ಲಿ ಮಂಡಲ ಸೇವಾ ಪ್ರಧಾನ ಬಾಲಸುಬ್ರಮಣ್ಯ, ವಲಯ ಸೇವಾ ಪ್ರಧಾನರಾದ ಕೆ. ಎಸ್. ಉದಯಕುಮಾರ ಮೊದಲಾದವರು ಭಾಗವಹಿಸಿದ್ದರು.