ಕೂಡಿಗೆ, ನ. 10: ಕಳೆದ 15 ದಿನಗಳ ಹಿಂದೆ ಕೂಡಿಗೆಯ ತಿರುವಿನಲ್ಲಿ ಜೀಪ್ ಡಿಕ್ಕಿಯಿಂದ ಗಾಯಗೊಂಡಿದ್ದ ಕೂಲಿ ಕಾರ್ಮಿಕ ಸಿದ್ದಲಿಂಗಪುರ ಗ್ರಾಮದ ಶಿವ ಎಂಬವರು ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.