ನವದೆಹಲಿ, ನ. 9: ಇಡೀ ಭಾರತ ಎದುರು ನೋಡುತ್ತಿದ್ದ ಅಯೋಧ್ಯೆ ವಿವಾದಕ್ಕೆ ಅಂತ್ಯ ಹಾಡಿರುವ ಸುಪ್ರೀಂಕೋರ್ಟ್, ಐತಿಹಾಸಿಕ ತೀರ್ಪು ನೀಡಿದೆ. ವಿವಾದಿತ ಪ್ರದೇಶದಲ್ಲಿ ಮಂದಿರ ನಿರ್ಮಾಣಕ್ಕೆ ಸರ್ವೋಚ್ಛ ನ್ಯಾಯಾಲಯ ಹಸಿರು ನಿಶಾನೆ ತೋರಿದೆ. ರಾಮಮಂದಿರ ನಿರ್ಮಾಣದ ಹೊಣೆಯನ್ನು ಕೇಂದ್ರ ಸರ್ಕಾರಕ್ಕೆ ವಹಿಸಿದ ನ್ಯಾಯಾಲಯ, ವಿಶೇಷ ಅಧಿಕಾರ ಬಳಸಿ ಸುನ್ನಿ ವಕ್ಫ್ ಬೋರ್ಡ್‍ಗೆ ಜಾಗ ನೀಡಲು ಸರ್ಕಾರಕ್ಕೆ ಸೂಚಿಸಿದೆ.ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಜಸ್ಟೀಸ್ ಶರದ್ ಬೊಬ್ಡೆ, ಜಸ್ಟೀಸ್ ಡಿ.ವೈ. ಚಂದ್ರಚೂಡ್, ಜಸ್ಟೀಸ್ ಅಶೋಕ್ ಭೂಷಣ್ ಹಾಗೂ ಜಸ್ಟೀಸ್ ಅಬ್ದುಲ್ ನಜೀರ್ ಇವರುಗಳನ್ನೊಳ ಗೊಂಡ ಐವರ ನ್ಯಾಯ ಪೀಠವು ರಜಾದಿನವಾದ ಶನಿವಾರದಂದು ಐತಿಹಾಸಿಕ ತೀರ್ಪು ನೀಡಿತು.ಅಯೋಧ್ಯೆಯ ವಿವಾದಿತ ಭೂಮಿಯನ್ನು ರಾಮಜನ್ಮಭೂಮಿ ನ್ಯಾಸ್ ಟ್ರಸ್ಟಿಗೆಂದು ಘೋಷಿಸಿದ ನ್ಯಾಯಪೀಠ, ರಾಮಮಂದಿರ ನಿರ್ಮಿಸಲು ಮತ್ತೊಂದು ಪ್ರತ್ಯೇಕ ಟ್ರಸ್ಟ್ ರಚಿಸಲು ಸೂಚಿಸಿತು. ಮಸೀದಿ ನಿರ್ಮಾಣಕ್ಕೆ 3 ರಿಂದ 4 ತಿಂಗಳೊಳಗೆ 5 ಎಕರೆ ಜಾಗ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.ಎಲ್ಲಾ ಧರ್ಮವನ್ನೂ ಗೌರವಿಸುವದಾಗಿ ಹೇಳಿರುವ ಸುಪ್ರೀಂಕೋರ್ಟ್'ನ ಸಾಂವಿಧಾನಿಕ ನ್ಯಾಯ ಪೀಠ, ಕೇವಲ ನಂಬಿಕೆಗಳಿಂದ ಭೂಮಿಯ ಹಕ್ಕುದಾರಿಕೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಜೊತೆಗೆ ಹಿಂದೂಗಳಿಗೆ ಕೆಲವು ಷರತ್ತುಗಳನ್ನು ವಿಧಿಸಿ ಅಯೋಧ್ಯೆಯಲ್ಲಿ ಜಾಗವನ್ನು ನೀಡಿ ಆದೇಶಿಸಿದೆ. ಇನ್ನು ಮುಸ್ಲಿಂ ಸಮುದಾಯಕ್ಕೆ ಬದಲಿ ಜಾಗವನ್ನು ನೀಡಲು ಕೂಡ ಆದೇಶಿಸಿದ್ದು, ಈ ಮೂಲಕ ವಿವಾದಕ್ಕೆ ತೆರೆ ಎಳೆದಿದೆ.

ರಾಮಜನ್ಮಭೂಮಿ ಪ್ರಕರಣದ ತೀರ್ಪು ಓದಲು ಆರಂಭಿಸಿದ ನ್ಯಾಯಮೂರ್ತಿಗಳು ಇಂದಿನ ತೀರ್ಪು ಒಮ್ಮತದ್ದಾಗಿದೆ ಎಂದರು. ನ್ಯಾಯಾಲಯ ದೇಶದ ಸಮತೋಲನವನ್ನು ಕಾಪಾಡಬೇಕು. ಬಾಬರ್ ಆದೇಶದ ಮೇಲೆ ಮಸೀದಿಯನ್ನು ನಿರ್ಮಾಣ ಮಾಡಲಾಗಿತ್ತು. 1949ರಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ ಎಂದು ವಾದಿಸಿದ್ದಾರೆ. ನಮ್ಮ ಸಂವಿಧಾನ ನಿರ್ಮಾಣ ಆಗಿರುವದು ಜಾತ್ಯತೀತ ತತ್ವದಡಿಯಲ್ಲಿ. ಜಾತ್ಯತೀತತೆ ಉಳಿಸುವದು ಸಂವಿಧಾನದ ಮೂಲ ಆಶಯವಾಗಿದೆ ಎಂದು ಹೇಳಿದರು.

ಜೊತೆಗೆ ನಿರ್ಮೋಹಿ ಅಖಾಡ ಮತ್ತು ಶಿಯಾ ವಕ್ಫ್ ಮಂಡಳಿ ಸಲ್ಲಿಸಿದ್ದ ಹಕ್ಕುದಾರಿಕೆ ಅರ್ಜಿಯನ್ನೂ ವಜಾಗೊಳಿಸಿದರು. ಬಳಿಕ ತೀರ್ಪು ಓದಲು ಆರಂಭಿಸಿದ ನ್ಯಾಯಮೂರ್ತಿಗಳು, ಸಂಪೂರ್ಣ ತೀರ್ಪು ಓದಲು 30 ನಿಮಿಷ ಕಾಲಾವಕಾಶ ಬೇಕು ಎಂದು ತಿಳಿಸಿದರು. ಎಲ್ಲ ಧರ್ಮಗಳ ನಂಬಿಕೆಯನ್ನೂ ನ್ಯಾಯಾಲಯ ಗೌರವಿಸುತ್ತದೆ, ಯಾರ ನಂಬಿಕೆಗಳಿಗೂ ಧಕ್ಕೆಯುಂಟು ಮಾಡುವದಿಲ್ಲ ಎಂದು ಸ್ಪಷ್ಟಪಡಿಸಿದರು.

ಮಸೀದಿಯಲ್ಲಿ ನಮಾಜ್ ಮಾಡುವ ನಂಬಿಕೆಯನ್ನು ಪ್ರಶ್ನಿಸಲು ಸಾಧ್ಯವಿಲ್ಲ. ನ್ಯಾಯಾಲಯ ನಂಬಿಕೆ ಮತ್ತು ಸಾಕ್ಷಿ ಆಧಾರದಲ್ಲಿ ಕೆಲಸ ನಿರ್ವಹಣೆ ಮಾಡುತ್ತದೆ. ನ್ಯಾಯಾಲಯ ದೇಶದ ಸಮ ತೋಲನ ಕಾಪಾಡಬೇಕು. ಬಾಬರ್ ಆದೇಶದ ಮೇಲೆ ಮಸೀದಿ ನಿರ್ಮಿಸ ಲಾಗಿದೆ ಎಂಬದು ಸಾಕ್ಷಿ ಸಮೇತ ಬೆಳಕಿಗೆ ಬಂದಿದೆ. 1949ರಲ್ಲಿ ರಾಮನ ಮೂರ್ತಿ ಪ್ರತಿಷ್ಟಾಪಿ¸ Àಲಾಗಿದೆ ಎಂದು ವಾದಿಸಿದ್ದಾರೆ. ರಾಮಜನ್ಮ ಭೂಮಿ ನ್ಯಾಯಶಾಸ್ತ್ರ ವಾಗಿ ಇಲ್ಲ. ಹಾಗೆಯೇ ಬಾಬ್ರಿ ಮಸೀದಿ ಯೂ ಖಾಲಿ ಜಾಗದಲ್ಲಿ ನಿರ್ಮಾಣ ವಾಗಿರಲಿಲ್ಲ. ಅಲ್ಲಿ ಈ ಹಿಂದೆಯೇ ಯಾವದೋ ಕಟ್ಟಡವಿತ್ತು ಎನ್ನುವದಕ್ಕೆ ಸಾಕ್ಷಿಗಳಿವೆ.

(ಮೊದಲ ಪುಟದಿಂದ) ಅಲ್ಲಿದ್ದ ಕಟ್ಟಡ ಮುಸ್ಲಿಮೇತರ ಕಟ್ಟಡ ಎಂಬದನ್ನು ಪುರಾತತ್ವ ಇಲಾಖೆ ಸ್ಪಷ್ಟಪಡಿಸಿದೆ. 12ನೇ ಶತಮಾನದ ಕಟ್ಟಡ ಆಗಿದ್ದರೂ ಅದು ದೇಗುಲವೆಂದು ಸ್ಪಷ್ಟಪಡಿಸಿಲ್ಲ. ಹಿಂದೂಗಳ ಪ್ರಕಾರ ಆ ಪ್ರದೇಶ ರಾಮನ ಜನ್ಮಭೂಮಿ. ಶ್ರೀರಾಮ ಇಲ್ಲೇ ಹುಟ್ಟಿದ್ದು ಎಂಬ ನಂಬಿಕೆ ಹಿಂದೂಗಳದ್ದು, ಹಿಂದೂಗಳ ನಂಬಿಕೆಯನ್ನೂ ನಾವು ತೆಗೆದು ಹಾಕಲು ಸಾಧ್ಯವಿಲ್ಲ ಎಂದು ತೀರ್ಪನ್ನು ತುಲನಾತ್ಮಕವಾಗಿ ವಿಮರ್ಷಿಸಿದರು.

ಕಟ್ಟಡದ ಮಧ್ಯಭಾಗದಲ್ಲಿ ಶ್ರೀರಾಮ ಹುಟ್ಟಿದ್ದು ಎನ್ನುವದು ವಾದ. ನಂಬಿಕೆ ಖಚಿತವಾದಾಗ ಮಧ್ಯಪ್ರವೇಶ ಸರಿಯಲ್ಲ. ನಂಬಿಕೆಗಳನ್ನು ನ್ಯಾಯಾಲಯ ಒಪ್ಪಬೇಕಾಗುತ್ತದೆ. ಹಿಂದೂಗಳ ಪ್ರಕಾರ ಇದು ಶ್ರೀರಾಮನ ಜನ್ಮಭೂಮಿ. ಮುಸ್ಲಿಮರ ಪ್ರಕಾರ ಇದು ಐತಿಹಾಸಿಕ ಮಸೀದಿ ಕಟ್ಟಡ. ಯಾರ ನಂಬಿಕೆಗಳನ್ನೂ ನ್ಯಾಯಾಲಯ ಪ್ರಶ್ನೆ ಮಾಡುವದಿಲ್ಲ. ಕೇವಲ ನಂಬಿಕೆಯ ಆಧಾರದ ಮೇಲೆ ಭೂಹಕ್ಕು ಸ್ಥಾಪನೆ ಸಾಧ್ಯವಿಲ್ಲ; ಅಲ್ಲದೆ, ಸುನ್ನಿ, ರಾಮಲಲ್ಲಾ ವಾದವನ್ನು ಪರಿಗಣಿಸಬಹುದು ಎಂದು ಸಾಂವಿಧಾನಿಕ ಪೀಠ, ಶಿಯಾ ನಿರ್ಮೋಹಿ ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದಿತು.

1856-1857ರ್ ಅವಧಿಯಲ್ಲಿ ನಮಾಜ್ ನಡೆಯುತ್ತಿದ್ದು. ವಿವಾದಿತ ಜಾಗ ಸರ್ಕಾರದ ವಶ ಆಗುವವರೆಗೂ ಪ್ರಾರ್ಥನೆ ಇತ್ತು. ಪ್ರಾರ್ಥನೆ ಮಾಡಿದ ಕೂಡಲೇ ಹಕ್ಕು ಸ್ಥಾಪನೆ ಸಾಧ್ಯವಿಲ್ಲ. ವಿವಾದಿತ ಜಾಗದಲ್ಲಿ ಹಿಂದೂಗಳೂ ಪೂಜೆ ಸಲ್ಲಿಸುತ್ತಿದ್ದರು. ಮುಸ್ಲಿಮರೂ ಪ್ರಾರ್ಥನೆ ಸಲ್ಲಿಸಿದ್ದರು. ಇದು ಸೌಹಾರ್ದತೆಯಿಂದ ನಡೆಯುತ್ತಿತ್ತು ಎಂದು ಅಭಿಪ್ರಾಯಪಟ್ಟಿದೆ.

ಆರಾಧನಾ ಸ್ಥಳಗಳ ಕುರಿತ ಕಾಯ್ದೆಯಲ್ಲಿ ದೇಶದ ಎಲ್ಲಾ ಧಾರ್ಮಿಕ ಸಮುದಾಯಗಳ ಹಿತಾಸಕ್ತಿ ಕಾಪಾಡುವ ಭಾರತದ ನಿಷ್ಠೆ ಸ್ಪಷ್ಟವಾಗಿದೆ. ಮಸೀದಿಯೊಂದರ ನಿರ್ಮಾಣಕ್ಕಾಗಿ ಮುಸ್ಲಿಮರಿಗೆ ಪ್ರತ್ಯೇಕ ಜಮೀನು ನೀಡಿ, ವಿವಾದಿತ ಜಮೀನಿನಲ್ಲಿ ದೇಗುಲ ನಿರ್ಮಾಣ ಮಾಡಿ. ಮಂದಿರ ನಿರ್ಮಾಣಕ್ಕೆ 3 ತಿಂಗಳುಗಳಲ್ಲಿ ಯೋಜನೆಯೊಂದನ್ನು ರಚಿಸಿ ಎಂದು ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.

ಸಾಂವಿಧಾನಿಕ ನ್ಯಾಯ ಪೀಠದ

ಪರಿಗಣನೆಗಳು ಈ ರೀತಿ ಇವೆ

ಸುನ್ನಿ ವಕ್ಫ್ ಬೋರ್ಡ್‍ಗೆ ಪರ್ಯಾಯ ಜಾಗ ನೀಡುವಂತೆ ಸುಪ್ರೀಂ ಸೂಚನೆ. ಪರ್ಯಾಯ ಜಮೀನು ನೀಡಲು ಮೂರು ತಿಂಗಳೊಳಗೆ ನಿರ್ಧರಿಸಬೇಕು. ಭಾರತೀಯ ಸಂವಿಧಾನ ಎಲ್ಲಾ ಧರ್ಮಗಳಿಗೂ ಸಮಾನ ಹಕ್ಕು ನೀಡಿದೆ. ಅಲಹಾಬಾದ್ ಕೋರ್ಟ್ ವಿವಾದಿತ ಭಾಗವನ್ನು ಮೂರು ಭಾಗ ಮಾಡಿದ್ದು ತಾರ್ಕಿಕವಲ್ಲ.. ಯಾತ್ರಿಗಳ ಅಭಿಪ್ರಾಯ ಮತ್ತು ಪುರಾತತ್ತ್ವ ಸಾಕ್ಷ್ಯ ಎಲ್ಲವೂ ಹಿಂದುಗಳ ಪರವಾಗಿದೆ. ಮಸೀದಿಯ ಮುಖ್ಯ ಗುಂಬಜ್‍ನ ಕೆಳಭಾಗದಲ್ಲಿ ಗರ್ಭಗುಡಿಯಿತ್ತು ಎಂದು ನಂಬಲಾಗುತ್ತಿದೆ. ಮಸೀದಿಯ ಒಳಭಾಗದಲ್ಲಿ ಹಿಂದುಗಳು ಕೂಡ ಪೂಜೆ ಮಾಡುತ್ತಿದ್ದರು. ಆದರೆ ಬ್ರಿಟಿಷರು ಒಳಭಾಗವನ್ನು ಮುಸ್ಲಿಮರಿಗೆ, ಹೊರಭಾಗವನ್ನು ಹಿಂದುಗಳಿಗೆ ಎಂದು ಪ್ರತ್ಯೇಕಿಸಿದಾಗ ಹಿಂದುಗಳಿಗೆ ಪೂಜೆಯ ಅವಕಾಶ ಕೈತಪ್ಪಿತ್ತು. 1856 ರಿಂದ 1857 ರವರೆಗೆ ಅಲ್ಲಿ ನಮಾಜ್ ಮಾಡಲಾಗುತ್ತಿತ್ತು ಎಂಬದಕ್ಕೂ ಯಾವದೇ ಸಾಕ್ಷ್ಯವಿಲ್ಲ. ಮಸೀದಿಯ ಕೆಳಗೆ ಇರುವ ಆಕೃತಿಗಳು ಹಿಂದೂ ಕಲಾಕೃತಿ ಎಂಬದಕ್ಕೂ ಆಗುವದಿಲ್ಲ. ಮಂದಿರವನ್ನು ಧ್ವಂಸ ಮಾಡಿರುವ ಬಗ್ಗೆ ಯಾವದೇ ಸ್ಪಷ್ಟನೆ ಇಲ್ಲ. ಮಸೀದಿಯ ಗುಂಬಜನ್ನು ರಾಮಜನ್ಮ ಭೂಮಿಯ ಸ್ಥಳ ಎಂದು ಜನರು ನಂಬುತ್ತಾರೆ. ಪುರಾಣಗಳಲ್ಲೂ ಸಹ ರಾಮಲಲ್ಲ ಬಗ್ಗೆ ಉಲ್ಲೇಖವಿದೆ. ನಂಬಿಕೆಯ ಆಧಾರದ ಮೇಲಲ್ಲ, ಕಾನೂನಿನ ಸಾಕ್ಷ್ಯದ ಆಧಾರದ ಮೇಲೆ ಭೂಮಿಯ ಹಕ್ಕನ್ನು ನಿರ್ಧರಿಸಲಾಗುತ್ತಿದೆ.

ಮಸೀದಿ ಅಡಿಪಾಯದ ಕೆಳಗೆ ವಿಶಾಲ ರಚನೆ ಇತ್ತು. ಆದರೆ, ಇದು ಇಸ್ಲಾಂ ರಚನೆಯಾಗಿರಲಿಲ್ಲ. ಆದರೆ ಮಂದಿರ ಒಡೆದು ಮಸೀದಿ ಕಟ್ಟಲಾಗಿದೆ ಎನ್ನುವ ಅಂಶದ ಕುರಿತು ಖಚಿತತೆ ಇಲ್ಲ. ಉತ್ಖನನದ ವೇಳೆ ಸಿಕ್ಕ ಕುರುಹುಗಳು ಇಸ್ಲಾಂ ರಚನೆಯಾಗಿರಲಿಲ್ಲ. ರಾಮ ಅಯೋಧ್ಯೆಯಲ್ಲೇ ಹುಟ್ಟಿದ ಎಂಬ ಬಗ್ಗೆ ವಿವಾದವಿಲ್ಲ. ಕೇವಲ ನಂಬಿಕೆಯಿಂದ ಹಕ್ಕನ್ನು ಸಾಬೀತು ಮಾಡಲು ಸಾಧ್ಯವಿಲ್ಲ ಎಂದಿದೆ.

ಏಳು ದಶಕಗಳಷ್ಟು ಹಳೆಯದಾದ ಅಯೋಧ್ಯೆ ಭೂವಿವಾದ ಪ್ರಕರಣಕ್ಕೆ ಸುಪ್ರೀಂಕೋರ್ಟ್ ಶನಿವಾರ ತಾರ್ಕಿಕ ಅಂತ್ಯ ನೀಡಿದೆ.

1. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ: ಮೂರು ತಿಂಗಳ ಒಳಗೆ ಟ್ರಸ್ಟ್ ಒಂದನ್ನು ರಚಿಸಿ ರಾಮಮಂದಿರ ನಿರ್ಮಾಣ ಮಾಡುವ ಜವಾಬ್ದಾರಿಯನ್ನು ನೀಡುವಂತೆ ಸುಪ್ರೀಂಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

2. ರಾಮಮಂದಿರಕ್ಕೆ 2.77 ಎಕರೆ ಭೂಮಿ: ದಶಕಗಳವರೆಗೆ ವಿವಾದಿತ ಭೂಮಿಯಾಗಿದ್ದ 2.77 ಎಕರೆಯನ್ನು ರಾಮಮಂದಿರ ನಿರ್ಮಾಣ ಮಾಡಲು ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ನೀಡಿದೆ.

3. ಮಸೀದಿಗಾಗಿ 5 ಎಕರೆ ಭೂಮಿ: ಮಸೀದಿ ನಿರ್ಮಾಣ ಮಾಡಲು ಸುನ್ನಿ ವಕ್ಫ್ ಬೋರ್ಡ್‍ಗೆ ಐದು ಎಕರೆ ಭೂಮಿಯನ್ನು ಹಂಚಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

4. ಖಾಲಿ ಜಾಗದಲ್ಲಿ ಮಸೀದಿ ನಿರ್ಮಾಣವಾಗಿಲ್ಲ: ವಿವಾದಿತ ಜಾಗದಲ್ಲಿ ಬಾಬರಿ ಮಸೀದಿ ನಿರ್ಮಾಣವಾಗಿಲ್ಲ. ನೆಲಸಮ ಮಾಡಲಾಗಿರುವ ಮಸೀದಿಯಲ್ಲಿ ಇಸ್ಲಾಂಯೇತರ ರಚನೆ ಪತ್ತೆಯಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

5. 1949ರಲ್ಲಿ ಮಸೀದಿಯ ಒಳಗಡೆ ವಿಗ್ರಹಗಳನ್ನು ಇರಿಸಲಾಗಿತ್ತು: 1949 ಡಿಸೆಂಬರ್ 22-23ರ ಮಧ್ಯರಾತ್ರಿ ಬಾಬರಿ ಮಸೀದಿಯ ಗುಮ್ಮಟದ ಒಳಗೆ ವಿಗ್ರಹಗಳನ್ನು ಇರಿಸಲಾಗಿತ್ತು ಎಂಬ ಹೈಕೋರ್ಟ್ ಹೇಳಿಕೆಯನ್ನು ಸುಪ್ರೀಂಕೋರ್ಟ್ ಸ್ವೀಕರಿಸಿದೆ.

6. ಅಯೋಧ್ಯೆ ರಾಮನ ಜನ್ಮಭೂಮಿ: ಅಯೋಧ್ಯೆಯು ಶ್ರೀರಾಮನ ಜನ್ಮ ಸ್ಥಳ ಎಂಬ ಹಿಂದುಗಳ ನಂಬಿಕೆಯಲ್ಲಿ ಯಾವದೇ ವಿವಾದ ಇಲ್ಲವೆಂದು ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಉಲ್ಲೇಖಿಸಿದೆ.

7. ಎಎಸ್‍ಐ ವರದಿಯನ್ನು ಊಹೆ ಎಂದು ವಜಾಮಾಡಲಾಗದು: ವಿವಾದಿತ ಭೂಮಿಯ ಕುರಿತಾದ ಅಯೋಧ್ಯೆ ಪುರಾತತ್ತ್ವ ಇಲಾಖೆಯ ವರದಿಯನ್ನು ಕೇವಲ ಊಹೆ ಎಂದು ಪರಿಗಣಿಸಿ ವಜಾ ಮಾಡಲಾಗದು ಎಂದಿದೆ.

8. ಮಸೀದಿಯ ಹಾನಿ ಕಾನೂನು ಉಲ್ಲಂಘನೆ: ಬಾಬರಿ ಮಸೀದಿಗೆ ಹಾನಿ ಉಂಟುಮಾಡಿರುವದು ಕಾನೂನು ಉಲ್ಲಂಘನೆಯಾಗಿದೆ ಎಂದಿದೆ.

9. 1800ರಿಂದಲೂ ಹಿಂದುಗಳಿಂದ ಪೂಜೆ: ಈ ಸ್ಥಳದಲ್ಲಿ 1856-1857ರ ನಡುವೆ ಕಬ್ಬಿಣದ ಸರಪಳಿಯನ್ನು ಅಳವಡಿಸಲಾಗಿದ್ದು, ಹಿಂದುಗಳು ಪೂಜೆ ಸಲ್ಲಿಸುತ್ತಿದ್ದರು ಎಂಬದನ್ನು ಇದು ಸೂಚಿಸುತ್ತದೆ. ಪ್ರಾರ್ಥನೆ ಸಲ್ಲಿಸುವದಕ್ಕೆ ತೊಂದರೆಯಾದ ಕಾರಣ ಮಸೀದಿಯನ್ನು ತ್ಯಜಿಸಿಲ್ಲ ಎಂಬುದನ್ನು ಸಾಕ್ಷಿಗಳು ಸೂಚಿಸುತ್ತಿವೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

10. ಮುಸ್ಲಿಮರು ಮಸೀದಿ ತ್ಯಜಿಸಿರುವದಕ್ಕೆ ಸಾಕ್ಷಿಯಿಲ್ಲ: ವಿವಾದಿತ ಭೂಮಿಯಲ್ಲಿ ಮುಸ್ಲಿಮರು ಮಸೀದಿಯನ್ನು ಪರಿತ್ಯಜಿಸಿದ್ದಾರೆ ಎಂಬದಕ್ಕೆ ಯಾವದೇ ಸಾಕ್ಷಿಯಿಲ್ಲ. ಇದು ರಾಮನ ಜನ್ಮಭೂಮಿ ಎಂದು ಹಿಂದುಗಳು ಯಾವಾಗಲೂ ನಂಬಿದ್ದರು ಎಂದು ನ್ಯಾಯಾಲಯ ತಿಳಿಸಿದೆ.