*ಗೋಣಿಕೊಪ್ಪಲು, ನ. 10: ಕಳೆದ ಮೂರು ತಿಂಗಳಿನಿಂದ ವೀರಾಜಪೇಟೆ ತಾಲೂಕಿನ ಬಹಳಷ್ಟು ಅಂಗನವಾಡಿ ಕೇಂದ್ರಗಳಿಗೆ ಮಕ್ಕಳ ಪೌಷ್ಠಿಕ ಆಹಾರ ವಸ್ತುಗಳು ಸರಬರಾಜು ಆಗುತ್ತಿಲ್ಲ. ಹೀಗಾಗಿ ಮಕ್ಕಳಿಗೆ ಮಧ್ಯಾಹ್ನ ನೀಡುವ ಪೌಷ್ಠಿಕ ಆಹಾರದ ಕೊರತೆ ಕಾಡುತ್ತಿದೆ.

ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಶಿಕ್ಷಕರಿಲ್ಲ. ಸಹಾಯಕಿಯರ ಕೊರತೆಯು ಎದುರಾಗಿದೆ.

333 ಅಂಗನವಾಡಿ ಕೇಂದ್ರಗಳಿಗೆ 321 ಕಾರ್ಯಕರ್ತೆಯರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಮಾರು 15 ಕಾರ್ಯಕರ್ತೆಯರು, ಸಹಾಯಕಿಯರ ಅಗತ್ಯ ಎದುರಾಗಿದೆ. ಕೆಲವು ಅಂಗನವಾಡಿಗಳಲ್ಲಿ ಮಕ್ಕಳ ಹಾಜರಾತಿಯ ಕೊರತೆಯು ಕಾಡುತ್ತಿದ್ದು, ಅಂಗನವಾಡಿಗಳು ಮುಂದಿನ ದಿನಗಳಲ್ಲಿ ಮುಚ್ಚುವ ಹಂತಕ್ಕೆ ತಲಪುವ ಆತಂಕ ಎದುರಿಸುತ್ತಿದೆ.

ಕಳೆದ ಮೂರು ತಿಂಗಳುಗಳಿಂದ ತಿತಿಮತಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ 4 ಅಂಗನವಾಡಿಗಳಿಗೆ ಮತ್ತು ನಾಲ್ಕೇರಿ ಗ್ರಾ.ಪಂ ವ್ಯಾಪ್ತಿಯ ಬೊಮ್ಮಾಡು ಅಂಗನವಾಡಿಗೆ ಆಹಾರ ವಸ್ತುಗಳು ಸರಬರಾಜು ಆಗಿಲ್ಲ. ಬೆಕ್ಕೆಸೊಡ್ಲೂರಿನ ಎಂ.ಹೆಚ್.ಸಿ.ಸಿ. ಮಹಿಳಾ ಘಟಕ ಆಹಾರ ಸರಬರಾಜು ಮಾಡುವ ಗುತ್ತಿಗೆಯನ್ನು ಹೊಂದಿದೆ. ಸ್ಥಳೀಯ ಸಂಸ್ಥೆಯಾದರೂ ತಾಲೂಕಿನ ಅಂಗನವಾಡಿಗೆ ಸೂಕ್ತ ಸಮಯದಲ್ಲಿ ಆಹಾರ ಸಾಮಗ್ರಿಗಳನ್ನು ತಲಪಿಸುವ ವ್ಯವಸ್ಥೆಯೇ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಅಂಗನವಾಡಿ ಮಕ್ಕಳಿಗೆ ಭದ್ರತೆಯಿಲ್ಲ, ನಾಲ್ಕೇರಿ ಅಂಗನವಾಡಿ ಸಮೀಪವೇ ತೆರೆದ ಬಾವಿಯೊಂದು ಇದ್ದು, ಅಪಾಯದ ಸೂಚನೆಯನ್ನು ನೀಡುತ್ತಿದೆ. ಅಂಗನವಾಡಿಯ ಸುತ್ತ ಗಿಡ ಗಂಟಿಗಳು ಬೆಳೆದು ವಿಷಕಾರಿ ಕ್ರಿಮಿಕೀಟಗಳು ಬರುವ ಆತಂಕವನ್ನು ಎದುರಿಸುತ್ತಿದೆ. ಅಂಗನವಾಡಿ ಕೇಂದ್ರವು ಸ್ಥಳೀಯ ಗ್ರಾಮ ಪಂಚಾಯಿತಿಗಳ ಅಧೀನದಲ್ಲಿದ್ದರೂ ಸ್ವಚ್ಛತೆಯ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸುಮಾರು 20ಕ್ಕೂ ಅಂಗನವಾಡಿ ಕೇಂದ್ರಗಳಿಗೆ ನಿವೇಶನದ ಸಮಸ್ಯೆ ಎದುರಾಗಿದೆ. 16 ಅಂಗನವಾಡಿಗಳು ಮಾಸಿಕ 1000 ರೂಪಾಯಿ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಜತೆಗೆ 55ಕ್ಕೂ ಹೆಚ್ಚು ಕಟ್ಟಡಗಳು ಶಿಥಿಲ ವ್ಯವಸ್ಥೆಗೆ ತಲುಪಿದ್ದು, 34 ಕಟ್ಟಡಗಳು ಅಲ್ಪಪ್ರಮಾಣದ ಹಾನಿ ಹಾಗೂ 12 ಕಟ್ಟಡಗಳು ತೀವ್ರ ಹಾನಿಯಿಂದ

ಸಮೀಪವೇ ತೆರೆದ ಬಾವಿಯೊಂದು ಇದ್ದು, ಅಪಾಯದ ಸೂಚನೆಯನ್ನು ನೀಡುತ್ತಿದೆ. ಅಂಗನವಾಡಿಯ ಸುತ್ತ ಗಿಡ ಗಂಟಿಗಳು ಬೆಳೆದು ವಿಷಕಾರಿ ಕ್ರಿಮಿಕೀಟಗಳು ಬರುವ ಆತಂಕವನ್ನು ಎದುರಿಸುತ್ತಿದೆ. ಅಂಗನವಾಡಿ ಕೇಂದ್ರವು ಸ್ಥಳೀಯ ಗ್ರಾಮ ಪಂಚಾಯಿತಿಗಳ ಅಧೀನದಲ್ಲಿದ್ದರೂ ಸ್ವಚ್ಛತೆಯ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸುಮಾರು 20ಕ್ಕೂ ಅಂಗನವಾಡಿ ಕೇಂದ್ರಗಳಿಗೆ ನಿವೇಶನದ ಸಮಸ್ಯೆ ಎದುರಾಗಿದೆ. 16 ಅಂಗನವಾಡಿಗಳು ಮಾಸಿಕ 1000 ರೂಪಾಯಿ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಜತೆಗೆ 55ಕ್ಕೂ ಹೆಚ್ಚು ಕಟ್ಟಡಗಳು ಶಿಥಿಲ ವ್ಯವಸ್ಥೆಗೆ ತಲುಪಿದ್ದು, 34 ಕಟ್ಟಡಗಳು ಅಲ್ಪಪ್ರಮಾಣದ ಹಾನಿ ಹಾಗೂ 12 ಕಟ್ಟಡಗಳು ತೀವ್ರ ಹಾನಿಯಿಂದ