ಮಡಿಕೇರಿ, ನ. 8: ಕಾಫಿ ಮಂಡಳಿಯು ‘ಕಾಫಿ ಕೃಷಿ ತರಂಗ’ ಎಂಬ ಮೊಬೈಲ್ ಆಧಾರಿತ ಕಾಫಿ ಕೃಷಿ ಮಾಹಿತಿ ಸೇವೆಯನ್ನು ಆರಂಭಿಸಿರುತ್ತದೆ. ಈ ಸೇವೆಯು ಉಚಿತವಾಗಿದ್ದು, ಕಾಫಿ ಕೃಷಿ ಆಧಾರಿತ ಮಾಹಿತಿ, ಕಾಫಿ ಮಾರುಕಟ್ಟೆ ದರ ಮತ್ತು ಕಾಫಿ ಕೃಷಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ತಾವುಗಳು ಪ್ರಶ್ನೆಗಳನ್ನು ದಾಖಲಿಸಿ ಸಂಬಂಧಪಟ್ಟ ಕಾಫಿ ಕೃಷಿ ತಜ್ಞರಿಂದ ಮಾಹಿತಿ ಪಡೆಯಬಹುದಾಗಿರುತ್ತದೆ.

ಈ ಸೇವೆಯನ್ನು ಪಡೆಯಲು ಕಾಫಿ ಬೆಳೆಗಾರರು ತಮ್ಮ ಮೊಬೈಲ್ ನಿಂದ ಟೋಲ್ ಫ್ರೀ ಸಂಖ್ಯೆ 080 37685000ಗೆ ಒಂದು ಮಿಸ್‍ಕಾಲ್ ನೀಡಿದರೆ ಕಾಲ್‍ಸೆಂಟರ್‍ನಿಂದ ತಮಗೆ ಮತ್ತೆ ಕರೆ ಮಾಡಿ ತಮ್ಮ ಮೊಬೈಲ್ ಸಂಖ್ಯೆಯನ್ನು ದಾಖಲಿಸುತ್ತಾರೆ. ತದನಂತರ ಸೇವೆಗಳನ್ನು ತಮಗೆ ಕರೆಗಳ ಮುಖಾಂತರ ನೀಡಲಾಗುತ್ತದೆ. ಇದರ ಉಪಯೋಗವನ್ನು ಕಾಫಿ ಬೆಳೆಗಾರರು ಪಡೆಯಬೇಕೆಂದು ಈ ಮೂಲಕ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕಾಫಿ ಮಂಡಳಿ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.