ಕುಶಾಲನಗರ, ನ. ೬: ಪೆಟ್ರೋಲ್ ಹಾಕಿಸಲು ಬಂದಿದ್ದ ಗ್ರಾಹಕ ಮತ್ತು ಆತನ ಸಂಗಡಿಗರು ಕ್ಷುಲ್ಲಕ ಕಾರಣಕ್ಕೆ ಬಂಕ್ ನೌಕರನ ಮೇಲೆ ಹಲ್ಲೆ ನಡೆಸಿದ ಘಟನೆ ಕುಶಾಲನಗರ ಬೈಚನಹಳ್ಳಿಯ ಬ್ಲೂಮೂನ್ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದೆ.
೫೦ ರೂ.ಗೆ ಪೆಟ್ರೋಲ್ ಹಾಕಿಸಿದ ಸ್ಥಳೀಯ ನಿವಾಸಿ ಬೈಕ್ ಮೆಕಾನಿಕ್ ಜಹೀರ್ ಎಂಬಾತ ಸ್ವೆöÊಪಿಂಗ್ ಮಾಡಲು ಕಾರ್ಡ್ ನೀಡಿದ್ದಾನೆ. ಈ ಸಂದರ್ಭ ಬಂಕ್‌ನಲ್ಲಿ ಕರ್ತವ್ಯದಲ್ಲಿದ್ದ ಸೂರ್ಯ ಎಂಬಾತ ೫೦ ರೂ.ಗಳಿಗೆ ಕಾರ್ಡ್ ಸೌಲಭ್ಯ ಇಲ್ಲ. ನೀವು ನಗದು ನೀಡಿ ಎಂದು ಕಾರ್ಡ್ ಪಡೆದುಕೊಳ್ಳಲು ನಿರಾಕರಿಸಿದ್ದಾನೆ.
ಈ ಸಂದರ್ಭ ಮಾತಿಗೆ ಮಾತು ಬೆಳೆದಿದೆ. ಇದರಿಂದ ಆಕ್ರೋಶಗೊಂಡ ಬೈಕ್ ಮೆಕಾನಿಕ್ ಜಹೀರ್ ತನ್ನ ಸಂಗಡಿಗ ಯುವಕರೊಂದಿಗೆ ಬಂಕ್‌ಗೆ ಆಗಮಿಸಿ ನೌಕರನ ಮೇಲೆ ಹಲ್ಲೆ ನಡೆಸಿದ್ದಾರೆ. ಇದೇ ಸಂದರ್ಭ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಬಂಕ್ ಸಿಬ್ಬಂದಿಗೆ ನೆರವಾಗಿ ಹಲ್ಲೆ ತಡೆಯಲು ಮುಂದಾಗಿರುವ ದೃಶ್ಯ ಬಂಕ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬAಧ ಕುಶಾಲನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ಜಹೀರ್ ಸೇರಿದಂತೆ ಒಟ್ಟು ೬ ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.