ಭಾಗಮಂಡಲ, ನ. 7: ಬೇಟೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಗುಂಡು ತಗುಲಿ ವ್ಯಕ್ತಿಯೊಬ್ಬ ಗಾಯಗೊಂಡಿರುವ ಘಟನೆ ಮಡಿಕೇರಿ ತಾಲೂಕಿನ ಅಯ್ಯಂಗೇರಿಯಲ್ಲಿ ನಡೆದಿದೆ. ಗ್ರಾಮದ ಸುರೇಶ್ (40) ಗಾಯಗೊಂಡ ವ್ಯಕ್ತಿ. ಸುರೇಶ್ ಜೊತೆಗೆ ಬೇಟೆಗೆ ತೆರಳಿದ್ದ ಗ್ರಾಮಪಂಚಾಯಿತಿ ಸದಸ್ಯ ಸಂತೋಷ್‍ಕುಮಾರ್, ಸ್ಥಳೀಯರಾದ ಲಿಖಿತ್, ಚಂದ್ರಶೇಖರ್ ಎಂಬವರನ್ನು ಭಾಗಮಂಡಲ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಬುಧವಾರ ಸಂಜೆ ಆರು ಗಂಟೆ ವೇಳೆಗೆ ಸಂತೋಷ್ ಎಂಬವರ ತೋಟಕ್ಕೆ
(ಮೊದಲ ಪುಟದಿಂದ) ಕಾಡು ಹಂದಿ ಬೇಟೆಗೆಂದು ನಾಲ್ವರು ಎರಡು ಬಂದೂಕಿನೊಂದಿಗೆ ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಗುಂಡು ಹಾರಿಸಲ್ಪಟ್ಟಿದ್ದು, ಸುರೇಶ್‍ನ ಕಾಲು, ಹೊಟ್ಟೆಯ ಭಾಗಕ್ಕೆ ಗುಂಡು ತಗುಲಿದೆ. ಜೊತೆಗಾರರು ಆತನನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಬಗ್ಗೆ ಸುರೇಶ್ ನೀಡಿದ ದೂರಿನ ಅನ್ವಯ ಭಾಗಮಂಡಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ಆರೋಪಿಗಳನ್ನು ದಸ್ತಗಿರಿ ಮಾಡಿ ಮುಂದಿನ ಕ್ರಮಕೈಗೊಂಡಿದ್ದಾರೆ.