ಮಡಿಕೇರಿ, ನ. ೬: ಪಿರಿಯಾಪಟ್ಟಣ ಬಳಿಯ ಬೆಟ್ಟದಪುರದಲ್ಲಿ ಸಂಭವಿಸಿದ ಅವಘಡದಲ್ಲಿ ಜಿಲ್ಲೆಯ ಟಿಪ್ಪರ್ ಚಾಲಕನ ಎರಡೂ ಕಾಲುಗಳು ಮುರಿದಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಸಂಭವಿಸಿದೆ.
ಇAದು ಸಂಜೆ ಬೆಟ್ಟದಪುರ ಬಳಿ ಎರಡು ಟಿಪ್ಪರ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಜಿಲ್ಲೆಯ ಅಮ್ಮತ್ತಿ ಸಮೀಪದ ಮುಕ್ಕಾಟಿಕೊಪ್ಪ ನಿವಾಸಿ, ರಮೇಶ್ ಅವರ ಎರಡೂ ಕಾಲುಗಳು ಮೊಣಕಾಲಿನಿಂದ ಕೆಳಗಡೆಯಿಂದ ತುಂಡರಿಸಲ್ಪಟ್ಟಿವೆ. ಘಟನಾಸ್ಥಳದಲ್ಲಿದ್ದ ಪಿರಿಯಾಪಟ್ಟಣದ ಆರ್‌ಎಸ್‌ಎಸ್ ಕಾರ್ಯಕರ್ತ ಮಂಜು ಎಂಬವರು ಗಾಯಾಳುವನ್ನು ಮೈಸೂರಿನ ಡಿ.ಆರ್.ಎಂ. ಆಸ್ಪತ್ರೆಗೆ ದಾಖಲಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಿ ಮಾನವೀಯತೆ ಮೆರೆದಿದ್ದಾರೆ.