ಸಿದ್ದಾಪುರ, ನ. 7: ಗುಹ್ಯ ಗ್ರಾಮದ ಕೂಡುಗದ್ದೆಯ ಸಲೀಂ ಎಂಬವರ ಮನೆಯ ಅಡುಗೆಕೋಣೆಯಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು, ಸ್ಥಳೀಯ ಉರಗಪ್ರೇಮಿ ಬಿ.ಎಸ್. ಸುರೇಶ್ ಹಾವನ್ನು ಸೆರೆಹಿಡಿದು ರಕ್ಷಿಸಿದರು. ನಾಗರಹಾವನ್ನು ಕಂಡು ಗ್ರಾಮಸ್ಥರು ಭಯಬೀತರಾಗಿದ್ದು, ಬಳಿಕ ಹಾವನ್ನು ಸ್ಥಳೀಯ ದೇವರಕಾಡುವಿಗೆ ಬಿಡಲಾಗಿದೆ. ಈಗಾಗಲೇ ಸುರೇಶ್ 200ಕ್ಕೂ ಹೆಚ್ಚು ವಿವಿಧ ಜಾತಿಯ ಹಾವನ್ನು ಸೆರೆಹಿಡಿದಿದ್ದಾರೆ.