ಸಿದ್ದಾಪುರ, ನ.7: ಮನೆಯ ಸಮೀಪದ ಕೊಠಡಿಯೊಂದರಲ್ಲಿ ಇಟ್ಟಿದ್ದ ಸೋಲಾರ್ ಬ್ಯಾಟರಿಯನ್ನು ಕಳ್ಳತನ ಮಾಡಿರುವ ಘಟನೆ ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದಲ್ಲಿ ನಡೆದಿದೆ. ಗುಹ್ಯ ಗ್ರಾಮದ ನಿವಾಸಿ ಪಿ.ವಿ ಮ್ಯಾಥ್ಯೂ ಎಂಬವರು ಕಾಡಾನೆ ಹಾವಳಿಯನ್ನು ತಡೆಗಟ್ಟಲು ತೋಟಕ್ಕೆ ಸೋಲಾರ್ ಬೇಲಿಯನ್ನು ಅಳವಡಿಸಿದ್ದರು. ಇದಕ್ಕೆ ಸಂಪರ್ಕಪಡಿಸಿರುವ ಸೋಲಾರ್ ಬ್ಯಾಟರಿಯನ್ನು ಮನೆಯ ಸಮೀಪದ ಕೊಠಡಿಯೊಂದರಲ್ಲಿ ಇಟ್ಟಿದ್ದರು. ಬುಧವಾರದಂದು ರಾತ್ರಿ ಯಾರೋ ಕಳ್ಳರು ಕೊಠಡಿಯ ಬೀಗ ಮುರಿದು ಬ್ಯಾಟರಿಯನ್ನು ಕಳ್ಳತನ ಮಾಡಿರುವದಾಗಿ ಮ್ಯಾಥ್ಯೂ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.