ಕುಶಾಲನಗರ, ನ. 6: ಕುಶಾಲನಗರದ ಶಿವರಾತ್ರಿ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದ ಬಳಿ ನಿರ್ಮಿಸಲಾದ ಶ್ರದ್ಧಾಂಜಲಿ ಗೋಡೆಯನ್ನು ಲೋಕಾರ್ಪಣೆ ಗೊಳಿಸಲಾಯಿತು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ನಿರ್ಮಿಸಿರುವ ಸ್ಮಾರಕಕ್ಕೆ ಮೃತಪಟ್ಟವರ ಶ್ರದ್ಧಾಂಜಲಿ ಬ್ಯಾನರ್ ಅಳವಡಿಸುತ್ತಿದ್ದ ಕ್ರಮವನ್ನು ವಿರೋಧಿಸಿ ಶ್ರದ್ಧಾಂಜಲಿ ಬ್ಯಾನರ್ ಗಳಿಗೆ ಮೀಸಲಾಗಿ ಈ ಶ್ರದ್ಧಾಂಜಲಿ ಗೋಡೆಯನ್ನು ನಿರ್ಮಿಸಲಾಗಿದೆ.
ಕುಶಾಲನಗರ ಸಂಚಾರಿ ಠಾಣಾಧಿಕಾರಿ ಅಚ್ಚಮ್ಮ ಮತ್ತು ಜಿ.ಪಂ. ಮಾಜಿ ಸದಸ್ಯ ವಿ. ಪಿ. ಶಶಿಧರ್ ಶ್ರದ್ಧಾಂಜಲಿ ಗೋಡೆಯನ್ನು ಅನಾವರಣಗೊಳಿಸಿದರು. ಸಮಿತಿಯ ಪ್ರಮುಖರಾದ ಕೆ.ಎಸ್.ನಾಗೇಶ್, ಕೆ.ಎನ್.ದೇವರಾಜ್, ಡಿ.ವಿ.ರಾಜೇಶ್, ಎಚ್.ಎನ್.ರಾಮಚಂದ್ರ, ಕೆ. ಎಸ್. ಮಹೇಶ್, ಡಿ.ಎಸ್ಎಸ್ ಜಿಲ್ಲಾ ಸಂಚಾಲಕ ಕೆ.ಬಿ.ರಾಜು ಮತ್ತಿತರರು ಇದ್ದರು.