ವೀರಾಜಪೇಟೆ, ನ. 7: ನಗರವನ್ನು ಒಂದಲ್ಲ ಒಂದು ಕಾರಣಕ್ಕಾಗಿ ಜನರು ಆಶ್ರಯಿಸಿ ರುತ್ತಾರೆ. ವಾಸ್ತವ್ಯ, ಕೆಲಸ, ಮನರಂಜನೆ, ಸೌಕರ್ಯ ಮುಂತಾದ ಅನೇಕ ಕಾರಣಗಳಿಗಾಗಿ ಜನರು ನಗರವನ್ನು ನೆಚ್ಚಿಕೊಳ್ಳುತ್ತಾರೆ. ಈ ಕಾರಣದಿಂದಾಗಿ ಇಂದು ನಗರಗಳು ಅನೇಕ ಸಮಸ್ಯೆಗಳನ್ನು ಹೊತ್ತುಕೊಂಡಿವೆ.
ಇದರಲ್ಲಿ ಟ್ರಾಫಿಕ್ ಸಮಸ್ಯೆ ಕೂಡ ಪ್ರಮುಖವಾದದ್ದು. 5 ನಿಮಿಷದಲ್ಲಿ ತಲುಪಬೇಕಾದ ದಾರಿ ಕೂಡ ಸರಿಯಾದ ಉಪಕ್ರಮಗಳು ಇಲ್ಲದೇ ಮುಕ್ಕಾಲು ಗಂಟೆ ಸುತ್ತುವರಿದು ಸಂಚರಿಸುವಂತಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಗೆ ಇಲಾಖೆಗಳು ಬೇರೆ ಬೇರೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿದರೂ ಅಷ್ಟೇನು ಪರಿಣಾಮ ಬೀರುತ್ತಿಲ್ಲ.
ಯಾವದೋ ರಸ್ತೆಯನ್ನು ಮತ್ತೊಂದು ಮಾರ್ಗಕ್ಕೆ ಜೋಡಿಸಿ ಪರಿಹಾರ ಆಗಬಹುದು ಎಂದುಕೊಂಡರೆ ಅಲ್ಲಿನ ಬಹುಮಹಡಿ ಕಟ್ಟಡಗಳು ಅಡ್ಡ ಬರುವದು ಹಿಂದಿನ ಪೂರ್ವ ಯೋಜಿತ ನಿರ್ಧಾರಗಳು ಇಲ್ಲದಿರುವದೇ ಆಗಿದೆ. ಪಟ್ಟಣದಲ್ಲಿ ಎಲ್ಲಿ ನೋಡಿದರೂ ಈಗ ಟ್ರಾಫಿಕ್ ಸಮಸ್ಯೆ ತಲೆದೋರಿದೆ.
ವೀರಾಜಪೇಟೆ ಪಟ್ಟಣದಲ್ಲಿ ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳ ಗೊಳ್ಳುತ್ತಿದ್ದಂತೆಯೇ ವಾಹನಗಳ ದಟ್ಟಣೆಯೂ ಅಧಿಕಗೊಳ್ಳುತ್ತಿರುವದ ರಿಂದ ಹಾಗೂ ಅದನ್ನು ಪರಿಹರಿಸುವಲ್ಲಿ ಸಂಬಂಧಪಟ್ಟವರು ಸರಿಯಾದ ಸಮಯದಲ್ಲಿ ಸೂಕ್ತ ಕ್ರಮಕೈಗೊಳ್ಳದೇ ಇರುವದೇ ಟ್ರಾಫಿಕ್ ಸಮಸ್ಯೆಗೆ ಪ್ರಮುಖ ಕಾರಣ. ಇದರಿಂದಾಗಿ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಇತರೆ ಪಾದಚಾರಿಗಳ ಮೇಲೆ ಇದು ದುಷ್ಪರಿಣಾಮ ಬೀರುತ್ತಿದೆ.
ಈಗಾಗಲೇ ಪಟ್ಟಣದೊಳಗೆ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಪ್ರವಾಸಿ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಸಂಚರಿಸುತ್ತಿವೆ. ಅದರಲ್ಲೂ ವಾರಾಂತ್ಯದ ದಿನಗಳು ಹಾಗೂ ಸರಕಾರಿ ರಜಾ ದಿನಗಳಲ್ಲಿ ರಸ್ತೆಯ ಉದ್ದಕ್ಕೂ ವಾಹನಗಳ ಸಾಲು ಪಾದಚಾರಿಗಳಿಗೆ ಇನ್ನಿಲ್ಲದ ಕಿರಿಕಿರಿ ಉಂಟುಮಾಡುತ್ತಿದೆ.
ವರ್ತಕರಿಗೆ ವಿದ್ಯಾರ್ಥಿಗಳಿಗೆ ಸಮಸ್ಯೆ
ವಾಹನಗಳ ನಿಲುಗಡೆಗೆ ಅವಕಾಶವಿಲ್ಲದ ಕಾರಣ ವರ್ತಕರಿಗೆ ಹಾಗೂ ಗ್ರಾಹಕರಿಗೆ ವ್ಯವಹಾರದ ಮೇಲೆ ಸಮಸ್ಯೆ ಉಂಟುಮಾಡಿದೆ. ಮುಖ್ಯರಸ್ತೆ ಮೇಲೆ ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು ಇದೇ ರಸ್ತೆ ಮೂಲಕ ಸಂಚರಿಸಬೇಕಿದೆ. ವಾಹನಗಳ ಅಧಿಕ ದಟ್ಟಣೆಯಿಂದ ವಿದ್ಯಾರ್ಥಿಗಳಿಗೆ ರಸ್ತೆ ದಾಟುವದೇ ಅತಿ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಇದು ಪೆÇೀಷಕರಿಗೆ ಹೆಚ್ಚಿನ ಆತಂಕ ಉಂಟುಮಾಡಿದೆ. ವಾಹನ ದಟ್ಟಣೆಯ ಕಾರಣ ಬೆಳಗ್ಗೆ ಶಾಲೆಗೆ ತೆರಳಿದ ಮಕ್ಕಳು ಸಂಜೆ ಮನೆಗೆ ಮರಳಿ ಬರುವದನ್ನೇ ಎದುರು ನೋಡುವ ವಾತಾವರಣ ಆತಂಕದ ನಿರ್ಮಾಣ ಮಾಡಿದೆ.
ಸಿಬ್ಬಂದಿ ಕೊರತೆ: ಟ್ರಾಫಿಕ್ ಸುವ್ಯವಸ್ಥೆಗೆ ಪೂರಕ ಪ್ರಮಾಣದಲ್ಲಿ ಸಂಚಾರಿ ಪೆÇಲೀಸ್ ಸಿಬ್ಬಂದಿ ಕೊರತೆಯಿಂದ ಸಮಸ್ಯೆ ಮತ್ತಷ್ಟು ಉಲ್ಭಣಿಸಿದೆ.
ನಗರದಲ್ಲಿನ ರಿಕ್ಷಾಗಳ ಸಂಖ್ಯೆಯೂ ದ್ವಿಗುಣಗೊಳ್ಳುತ್ತಿದ್ದು, ಈ ಕಾರಣದಿಂದಾಗಿ ನಗರದಲ್ಲಿ ಸ್ಥಳಾವಕಾಶದ ಕೊರತೆ ಕಾರಣ ಕೆಲವೆಡೆಗಳಲ್ಲಿ ರಸ್ತೆಗಳೇ ರಿಕ್ಷಾ ನಿಲ್ದಾಣಗಳಾಗಿ ಮಾರ್ಪಟ್ಟಿರುವದು ಸಂಚಾರದಲ್ಲಿನ ವ್ಯತ್ಯಯಕ್ಕೆ ಕಾರಣವಾಗಿದೆ.
ಪಟ್ಟಣದ ಸಾರಿಗೆ ಬಸ್ ನಿಲ್ದಾಣ ಮುಂಭಾಗ, ಗೋಣಿಕೊಪ್ಪ ರಸ್ತೆ ಸೇರಿದಂತೆ ಕೆಲವೆಡೆಗಳಲ್ಲಿ ನಿಲುಗಡೆಗೆ ಸೂಕ್ತ ಸ್ಥಳಾವಕಾಶದ ಕೊರತೆಯಿದೆ. ನಿಲ್ದಾಣದಲ್ಲಿ ಎಲ್ಲೆ ಮೀರಿ ಆಟೋಗಳು ರಸ್ತೆ ಆಕ್ರಮಿಸಿಕೊಳ್ಳುವ ಕಾರಣ ಟ್ರಾಫಿಕ್ ಸಮಸ್ಯೆ ಉಂಟಾಗಿ ಆಗಿಂದಾಗ್ಗೆ ಸಣ್ಣ ಪುಟ್ಟ ಅವಘಡಗಳೂ ಸಂಭವಿಸುತ್ತಿವೆ.
ಟ್ರಾಫಿಕ್ ಟ್ರಬಲ್ ಹೆಚ್ಚು..!
ಇನ್ನೂ ಸೋಮವಾರ ಬುಧವಾರ ಶುಕ್ರವಾರ ಶನಿವಾರ ಅತಿ ಹೆಚ್ಚು ಟ್ರಾಫಿಕ್ ಸಮಸ್ಯೆ ಕಾಣಿಸುತ್ತಿದೆ. ಇನ್ನೂ 9 ಗಂಟೆಯ ನಂತರ ಅತಿ ಹೆಚ್ಚು ಟ್ರಾಫಿಕ್ ಸಮಸ್ಯೆಯಿದೆ. ಸಂಜೆ ಆರು ಗಂಟೆ ಮೇಲೂ ಕೂಡ ಅತಿ ಹೆಚ್ಚು ಸಮಯ ಟ್ರಾಫಿಕ್ನಲ್ಲೇ ಕಳೆಯಬೇಕಾಗಿರುವ ಅನಿವಾರ್ಯ ಎದುರಾಗಿದೆ. ಮಳೆಯ ನಡುವೆ ಇಂದು ಮಧ್ಯಾಹ್ನ ಫೀಲ್ದ್ ಮಾರ್ಷಲ್ ಕಾರ್ಯಪ್ಪ ರಸ್ತೆ, ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ, ಎಸ್. ಎಸ್ ರಾಮಮೂರ್ತಿ ರಸ್ತೆ ಸೇರಿದಂತೆ ಹಲವೆಡೆ ಸಂಚಾರ ದಟ್ಟಣೆ ಉಂಟಾಗಿತ್ತು. ಸಾಲುಗಟ್ಟಿ ನಿಂತಿದ್ದ ವಾಹನಗಳು ತೆವಳುತ್ತ ಸಾಗುತ್ತಿದ್ದವು. ಕೆಲ ವಾಹನ ಸವಾರರು ಅಡ್ಡಾದಿಡ್ಡಿ ಸಂಚರಿಸಿದ ಕಾರಣ ಟ್ರಾಫಿಕ್ ಜಾಮ್ ಹೆಚ್ಚಾಗಿತ್ತು. ಅÀದರೊಂದಿಗೆ ರಸ್ತೆ ಗುಂಡಿಗಳು ಬಿದ್ದು ತಿಂಗಳುಗಳಾಗಿವೆ. ಮಳೆ ನೀರು ಸುಗಮವಾಗಿ ಹಾದು ಹೋಗಲು ಜಾಗವಿಲ್ಲ, ಟ್ರಾಫಿಕ್ ನಿಯಂತ್ರಣ ಮಾಡುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಸಂಚಾರಿ ಪೆÇಲೀಸರು ವಿಫಲರಾಗಿದ್ದಾರೆ. ಪೆÇಲೀಸರು ಸಾಮಾನ್ಯ ಟ್ರಾಫಿಕ್ ನಿಯಂತ್ರಿಸುವಲ್ಲಿ ಎಡವಿದರಾ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಬರುತ್ತಾರೆ, ಗೆದ್ದ ನಂತರ ನಮ್ಮನ್ನೇ ಮರೆತು ಬಿಡುತ್ತಾರೆ. ಸರಿಯಾದ ಸಮಯಕ್ಕೆ ಟ್ಯಾಕ್ಸ್ ಕಟ್ಟಿದರೂ ನಮಗೆ ಮೂಲಭೂತ ಸೌಲಭ್ಯ ಸಿಗುತ್ತಿಲ್ಲ, ಮೂಲಭೂತ ಸಮಸ್ಯೆಗಳು, ರಸ್ತೆ, ಟ್ರಾಫಿಕ್ ಸಮಸ್ಯೆ ನಿವಾರಿಸದಿದ್ದರೆ ಮುಂದಿನ ದಿನ ಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದರು.
- ಬಡಕಡ ರಜಿತ ಕಾರ್ಯಪ್ಪ
ಬೆ