ಮಡಿಕೇರಿ, ನ. 7: ಮಾಯಮುಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ. 28.43 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಚೆಪ್ಪುಡೀರ ಎಂ. ಅಪ್ಪಯ್ಯ ತಿಳಿಸಿದರು.
ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಸದಸ್ಯರುಗಳಿಗೆ ಶೇ. 19 ಡಿವಿಡೆಂಡ್ ಘೋಷಣೆ ಮಾಡಿದರು. 2018-19ನೇ ಸಾಲಿನಲ್ಲಿ ರೂ. 505.94 ಲಕ್ಷ ಠೇವಣಿ ಇದ್ದು, ಕೃಷಿ ಹಾಗೂ ಕೃಷಿಯೇತರ ಸಾಲ ರೂ. 912.03 ಲಕ್ಷ ನೀಡಿದ್ದು, ವಸೂಲಾತಿ ಪ್ರಗತಿಯಲ್ಲಿದೆ ಎಂದರು. ಉಪಾಧ್ಯಕ್ಷೆ ಪಿ.ಎಂ. ಶಿಲ್ಪ ಹಾಗೂ ಸಂಘದ ನಿರ್ದೇಶಕರು ಗಳಾದ ಕೆ.ಟಿ. ಬಿದ್ದಪ್ಪ, ಎಂ.ಎಂ. ಪೂಣಚ್ಚ, ಎನ್.ಸಿ. ವಿಶ್ವನಾಥ, ಎ.ಎಸ್. ನಾಚಯ್ಯ, ಬಿ.ಎಸ್. ಪ್ರತಾಪ್, ಎಸ್.ವಿ. ಮಂಜುನಾಥ, ಕೆ.ವೈ. ಅಶ್ವಥ, ಬಿ.ಪಿ. ದೇವಕ್ಕಿ, ಪಿ.ಸಿ. ಚಂದ್ರ, ಕಾನೂನು ಸಲಹೆಗಾರ ಕೆ.ಯು. ಗಣಪತಿ, ಆರ್ಥಿಕ ಸಲಹೆಗಾರ ಕೆ.ಸಿ. ನರೇಂದ್ರ, ಕೆಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ಕೆ.ಬಿ. ದೇವಯ್ಯ ಹಾಗೂ ಹಿರಿಯ ಮೇಲ್ವಿಚಾರಕಿ ಬಿ.ವಿ. ಭಾರತಿ ಹಾಜರಿದ್ದರು.