ಮಡಿಕೇರಿ, ನ. 7: ಜಿಲ್ಲೆಗೆ ತಾ. 8 ರಂದು (ಇಂದು) ಕೆಲವು ಸೇನಾ ಪ್ರಮುಖರು ಆಗಮಿಸಲಿದ್ದಾರೆ. ವೀರಾಜಪೇಟೆಯ ಡೆಂಟಲ್ ಕಾಲೇಜು ಸಭಾ ಭವನದಲ್ಲಿ ಬೆಳಿಗ್ಗೆ 9 ರಿಂದ ನಡೆಯುವ ನಾಯಕತ್ವ ಮತ್ತು ದಂತಶಾಸ್ತ್ರ ಕುರಿತಾಗಿ ವಿಚಾರ ಸಂಕಿರಣ ಏರ್ಪಟ್ಟಿದೆ.
ಈ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಶಿಮ್ಲಾದ ಸೇನಾ ತರಬೇತಿ ಕಮಾಂಡ್‍ನ ಲೆಫ್ಟಿನೆಂಟ್ ಜನರಲ್ ಪಿ.ಸಿ. ತಮ್ಮಯ್ಯ, ಭಾರತೀಯ ನೌಕಪಡೆಯ ವೈಸ್ ಅಡ್ಮಿರಲ್ ದಿನೇಶ್ ಕೆ. ತ್ರಿಪಾಟಿ, ಲೆಫ್ಟಿನೆಂಟ್ ಜನರಲ್ ಡಾ. ವಿಮಲ್ ಅರೋರ (ನಿವೃತ್ತ) ಹಾಗೂ ಏರ್ ಕಮಡೋರ್ ಬಾಲಕೃಷ್ಣನ್ ಜಯನ್ ಇವರುಗಳು ಆಗಮಿಸಲಿದ್ದಾರೆ.