ಸೋಮವಾರಪೇಟೆ,ನ.೫: ಸಮೀಪದ ಬೇಳೂರು ಗ್ರಾ.ಪಂ. ವ್ಯಾಪ್ತಿಯ ಬೇಳೂರು-ಬಸವನಹಳ್ಳಿ ಗ್ರಾಮದಲ್ಲಿ ಕಳೆದ ಕೆಲವು ತಿಂಗಳಿAದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಈ ವರೆಗೂ ಪರಿಹರಿಸಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಗ್ರಾ.ಪಂ. ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕಳೆದ ಕೆಲವು ತಿಂಗಳಿAದ ಸರಿಯಾಗಿ ಕುಡಿಯುವ ನೀರು ಸರಬರಾಜು ಮಾಡುತ್ತಿಲ್ಲ. ಸಿಗುತ್ತಿರುವ ಅಲ್ಪಸ್ವಲ್ಪ ನೀರು ಕುಡಿಯಲು ಅಯೋಗ್ಯವಾಗಿದೆ. ಈ ಬಗ್ಗೆ ಗ್ರಾ.ಪಂ. ಅಧಿಕಾರಿಗಳಲ್ಲಿ ಅನೇಕ ಬಾರಿ ಮೌಖಿಕವಾಗಿ ಮನವಿ ಮಾಡಿಕೊಂಡಿ ದ್ದರೂ ಸ್ಪಂದಿಸಿಲ್ಲ. ಅದರೊಂದಿಗೆ ನೀರುಗಂಟಿ ಕೂಡ ಗ್ರಾಮಸ್ಥರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿಲ್ಲ. ಕೂಡಲೇ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವದರೊಂದಿಗೆ ನೀರು ಗಂಟಿಯನ್ನು ಬದಲಾಯಿಸ ಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚನ್ನಕೇಶವ ಅವರು, ಗ್ರಾಮಕ್ಕೆ ನೀರು ಸರಬರಾಜಿಗಾಗಿ ೨ ಕೊಳವೆ ಬಾವಿ ಇದೆ. ಒಂದರಲ್ಲಿ ಮೋಟಾರು ಪಂಪ್ ಬಿದ್ದು, ನೀರೆತ್ತಲು ಸಮಸ್ಯೆಯಾಗಿದೆ. ಇನ್ನೊಂದು ಕೊಳವೆ ಬಾವಿಯ ನೀರು ಉಪಯೋಗಿಸಲು ಉತ್ತಮವಾಗಿಲ್ಲ. ನೂತನವಾಗಿ ಒಂದು ಕೊಳವೆ ಬಾವಿಯನ್ನು ಇದೀಗ ಕೊರೆಯಿಸಿದ್ದು, ನವೆಂಬರ್ ೧೨ರೊಳಗೆ ಸಮಸ್ಯೆ ಪರಿಹರಿಸಲಾಗು ವದು. ನೀರುಗಂಟಿಯ ಬದಲಾವಣೆ ಬಗ್ಗೆ ಚರ್ಚಿಸಿ, ಕ್ರಮಕೈಗೊಳ್ಳಲಾಗು ವದು ಎಂದು ಭರವಸೆ ನೀಡಿದರು.
ಬಾಯಿ ಮಾತಿನ ಭರವಸೆ ಬೇಡ, ಲಿಖಿತವಾಗಿ ನೀಡಿ ಎಂದು ಒತ್ತಾಯಿಸಿದ ಹಿನ್ನೆಲೆ, ಸಮಸ್ಯೆ ಬಗೆಹರಿಸುವ ಬಗ್ಗೆ ಲಿಖಿತ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಭಾಗ್ಯ ಮಂಜುನಾಥ್ ಹಾಜರಿದ್ದು ಪ್ರತಿಭಟನಾಕಾರರ ಸಮಸ್ಯೆ ಆಲಿಸಿದರು. ಪ್ರತಿಭಟನೆಯಲ್ಲಿ ಬೇಳೂರು-ಬಸವನಹಳ್ಳಿ ಗ್ರಾಮದ ಶ್ರೀಕಂಠ, ಬಿ. ಫರ್ನಾಂಡೀಸ್, ಬಿ.ಎನ್. ಬಸವರಾಜು, ಮಣಿಕಂಠ, ಲೋಕೇಶ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.