ಮಡಿಕೇರಿ, ನ. ೪: ಮೊನ್ನೆ ರಾತ್ರಿ ನಗರದ ಹೊಸ ಬಡಾವಣೆಯಲ್ಲಿ ಅಮಾನುಷವಾಗಿ ಹತ್ಯೆಗೈಯ್ಯಲ್ಪಟ್ಟಿರುವ ಜುಬೈದಾ ಅವರ ಇಬ್ಬರು ಪುಟ್ಟ ಮಕ್ಕಳನ್ನು ಕೊಲೆ ಆರೋಪಿ ಮಹಮ್ಮದ್ ಶರೀಫ್ ಪೋಷಕರ ವಶಕ್ಕೆ ಪಡೆದಿರುವದಾಗಿ ತಿಳಿದು ಬಂದಿದೆ.
ಪತ್ನಿ ಮೇಲಿನ ಸಂಶಯದಿAದ ಆಕೆಯನ್ನು ಕೊಂದು ಜೈಲು ಪಾಲಾಗಿರುವ ಆರೋಪಿಯ ಕೃತ್ಯದಿಂದ ಈ ಇಬ್ಬರು ಮಕ್ಕಳನ್ನು ಆತನ ಪೋಷಕರ ಆಸರೆಗೆ ಒಪ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.